PhD ಇಲ್ಲದೇ ಪ್ರಾಧ್ಯಾಪಕರಾಗಬಹುದು! ವಿವಿಗಳಲ್ಲಿ ಹೊಸಹುದ್ದೆ ಸೃಷ್ಟಿ! ಸಿಹಿಸುದ್ದಿ ನೀಡಿದ UGC

ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನುಷ್ಠಾನದ ಅಡಿಯಲ್ಲಿ ಈ ನಿರ್ಧಾರವನ್ನು ಜಾರಿಗೆ ತರಲು ಯೋಜಿಸುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದೆಹಲಿ: ಸಹಾಯಕ ಪ್ರಾಧ್ಯಾಪಕರಾಗಲು PhD ಕಡ್ಡಾಯವಾಗಿ ಬೇಕಂತಿಲ್ಲ. ಪಿಎಚ್​ಡಿ ಇಲ್ಲದಿದ್ದರೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ (Central Universities)  ಸಹಾಯಕ ಪ್ರಾಧ್ಯಾಪಕರಾಗಬಹುದು (Assistant Professors) ಎಂದು ಯುಜಿಸಿ ಅನಿರೀಕ್ಷಿತ ಸುತ್ತೋಲೆ ಹೊರಡಿಸಿದೆ. ಇದು ಇಡೀ ದೇಶದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ (Education Field) ಹೊಸ ಗಾಳಿ ಬೀಸಲು ಕಾರಣವಾಗುವ ನಿರೀಕ್ಷೆಯಿದೆ. ಆಯಾ ಕ್ಷೇತ್ರಗಳ ಪರಿಣಿತರು, ಉದ್ಯಮದ ತಜ್ಞರು ಮತ್ತು ವೃತ್ತಿಪರರನ್ನು (Industry Experts) ಶಿಕ್ಷಣ ಕ್ಷೇತ್ರದತ್ತ ಸಳೆಯುವ ಕ್ರಮವಾಗಿ ಯುಜಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಈಮೂಲಕ ವಿಶ್ವವಿದ್ಯಾಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಯುಜಿಸಿ ಮುಂದಾಗಿದೆ ಎಂದೇ ಹೇಳಲಾಗಿದೆ.

ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ಹೊಸ ಹುದ್ದೆಗಳನ್ನು ಸೃಜಿಸಲಿದ್ದು  ಪ್ರಾಕ್ಟೀಸ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಎಂಬ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ಈಮೂಲಕ ಪಿಎಚ್​ಡಿ ಇಲ್ಲದವರಿಗೂ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಯುಜಿಸಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಏಕೆ ಈ ಕ್ರಾಂತಿಕಾರಕ ಕ್ರಮ?
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಲಿಸಲು ಕಡ್ಡಾಯ ಪಿಎಚ್‌ಡಿ ಅಗತ್ಯವನ್ನು ತೆಗೆದುಹಾಕುತ್ತಿದೆ. ಈ ನಿರ್ಧಾರವು ಕಾರ್ಯರೂಪಕ್ಕೆ ಬಂದರೆ ಹಳೆಯ ಸಹಾಯಕ ಪ್ರಾಧ್ಯಾಪಕರಾಗಲು ಕಡ್ಡಾಯ ಪಿಎಚ್‌ಡಿ ಅವಶ್ಯಕತೆ ನಿಯಮ ರದ್ದಾಗುತ್ತದೆ.

ಇದನ್ನೂ ಓದಿ: Google Recruitment 2022: ಫ್ರೆಶರ್​ಗಳಿಗೆ ಗೂಗಲ್​ ಆಫರ್ - ನೆಟ್‌ವರ್ಕ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರಾಗಿ ಆಯಾ ಕ್ಷೇತ್ರದ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ಯುಜಿಸಿ ಚಿಂತನೆ ನಡೆಸಿದೆ. ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನುಷ್ಠಾನದ ಅಡಿಯಲ್ಲಿ ಈ ನಿರ್ಧಾರವನ್ನು ಜಾರಿಗೆ ತರಲು ಯೋಜಿಸುತ್ತಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಯುಜಿಸಿಯು ಇನ್ನು ಮುಂದೆ ಪಿಎಚ್‌ಡಿ ಅಗತ್ಯವಿಲ್ಲದ ಹೊಸ ಮತ್ತು ವಿಶೇಷ ಹುದ್ದೆಗಳನ್ನು ರಚಿಸಲು ಯೋಜಿಸುತ್ತಿದೆ.

ಉತ್ತಮ ಅವಕಾಶ
ಈ ಹೊಸ ಹುದ್ದೆಗಳ ಮೂಲಕ ಆಯಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರು ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ದೊರೆಯಲಿದೆ.

ಹೊಸದಾಗಿ ನೇಮಕಗೊಂಡ ಈ ವೃತ್ತಿಪರರು ಏನು ಕಲಿಸುತ್ತಾರೆ?
ಅವರು ಹೊಸ ಕೋರ್ಸ್ ಅಥವಾ ಅಸ್ತಿತ್ವದಲ್ಲಿರುವ ಕೋರ್ಸ್‌ಗಳು ಮತ್ತು ವಿಷಯಗಳನ್ನು ಕಲಿಸಲು ಬಯಸುತ್ತಾರೆಯೇ ಎಂದು ನಿರ್ಧರಿಸಲು ಅವರ ಅಧ್ಯಯನ ಮಂಡಳಿಯೊಂದಿಗೆ ಆಂತರಿಕವಾಗಿ ಚರ್ಚಿಸಲು ಆಯಾ ವಿಶ್ವವಿದ್ಯಾಲಯ ಮತ್ತು ಪ್ರಾಕ್ಟೀಸ್ ಪ್ರಾಧ್ಯಾಪಕರಿಗೆ ಬಿಡಲಾಗುವುದು ಎಂದು ಕುಮಾರ್ ಹೇಳುತ್ತಾರೆ.

ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮಶೀಲತೆಯ ಕಡೆಗೆ ಪ್ರೇರೇಪಣೆ
ಈ ವೃತ್ತಿಪರರು ಶಿಕ್ಷಣ ವ್ಯವಸ್ಥೆಗೆ ಅತ್ಯಂತ ಮೌಲ್ಯಯುತವಾಗಲಿದ್ದಾರೆ. ಏಕೆಂದರೆ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೆಚ್ಚಿನ ಸಂಶೋಧನೆಗೆ ಮಾತ್ರವಲ್ಲದೆ ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮಶೀಲತೆಯ ಕಡೆಗೆ ಪ್ರೇರೇಪಿಸಬಹುದು ಎಂದು ಕುಮಾರ್ ನಂಬುತ್ತಾರೆ. ಈ ವೃತ್ತಿಪರರು ತಮ್ಮ ಕೋರ್ಸ್‌ಗಳನ್ನು ಕಲಿಸಲು ಅಗತ್ಯವಿರುವ ತರಬೇತಿಯ ಸ್ವರೂಪವನ್ನು ನಿರ್ಧರಿಸಲು ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಲಾಗುತ್ತದೆ.

ಈಮುನ್ನ ಇಂತಹ ಕ್ಷೇತ್ರ ಪರಿಣಿತರು ವಿದ್ಯಾರ್ಥಿಗಳಿಗೆ ಕಲಿಸಲು ಬಸಿದ್ದರೂ ಪಿಎಚ್‌ಡಿ ಕೊರತೆಯಿಂದಾಗಿ ವಿಶ್ವವಿದ್ಯಾಲಯಗಳು ಅಂತಹ ಅಭ್ಯರ್ಥಿಗಳನ್ನು ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿಕೊಳ್ಳುತ್ತಿರಲಿಲ್ಲ.

ಇದನ್ನೂ ಓದಿ: NIE Recruitment: ಡಾಟಾ ಅನಲಿಸ್ಟ್ ಸೇರಿ 7 ಹುದ್ದೆಗೆ ಅರ್ಜಿ ಆಹ್ವಾನ- ತಿಂಗಳಿಗೆ 70 ಸಾವಿರದವರೆಗೆ ಸಂಬಳ

ವಿಷಯ ತಜ್ಞರ ಸಹಯೋಗದೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಕುರಿತು ದೇಶಾದ್ಯಂತ ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳ ಸುಮಾರು 45 ಉಪಕುಲಪತಿಗಳೊಂದಿಗೆ ಸುದೀರ್ಘ ಚರ್ಚೆಯ ನಂತರ ಮಾರ್ಚ್ 11 ರಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈಗಿರುವ ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆಯೇ?
ಆದರೂ ಈಗ ಅಸ್ತಿತ್ವದಲ್ಲಿರುವ ವಿವಿಧ ಹುದ್ದೆಗಳ ಮೇಲೆ ಈ ಹೊಸ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ.  ಅವರ ನೇಮಕಾತಿಗಳು, ಬಡ್ತಿಗಳು ಮತ್ತು ವೇತನವು ಹಾಗೆಯೇ ಮುಂದುವರಿಯುತ್ತದೆ ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ವೃತ್ತಿಪರರ ನೇಮಕಾತಿಯನ್ನು ವಾರ್ಸಿಟಿಯೊಳಗೆ ರಚಿಸಲಾಗುವ ಹೊಸ ಹುದ್ದೆಗಳಿಗೆ ಮಾಡಲಾಗುತ್ತದೆ. ಇವರನ್ನು ಪ್ರಾಕ್ಟೀಸ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಎಂದು ಕರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
Published by:guruganesh bhat
First published: