Jobs in Udupi: ಉಡುಪಿಯಲ್ಲಿದೆ ಅಪ್ರೆಂಟಿಸ್​ ಹುದ್ದೆ; ಐಟಿಐ, ಡಿಪ್ಲೊಮಾ ಆದವರಿಗೆ ಅವಕಾಶ

ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

 • Share this:
  ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​​ನಲ್ಲಿ (Udupi Cochin Shipyard Limited)   ವಿವಿಧ ಅಪ್ರೆಂಟಿಸ್​​​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಟ್ರೇಡ್ ಮತ್ತು ಗ್ರಾಜುಯೇಟ್​ ಅಪ್ರೆಂಟಿಸ್ (Apprentice) ಸೇರಿದಂತೆ ಒಟ್ಟು 25 ಅಪ್ರೆಂಟಿಸ್​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಉಡುಪಿ ಮಲ್ಪೆಯಲ್ಲಿ (Malpe) ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆನ್​ಲೈನ್​ ಮೂಲಕ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 20 ಆಗಿದೆ.

  ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಸಂಸ್ಥೆಯ ಹೆಸರು: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್
  ಹುದ್ದೆಯ ಹೆಸರು: ಐಟಿಐ ಟ್ರೇಡ್, ಗ್ರಾಜುಯೇಟ್ ಅಪ್ರೆಂಟಿಸ್
  ಹುದ್ದೆಗಳ ಸಂಖ್ಯೆ: 25
  ಉದ್ಯೋಗ ಸ್ಥಳ: ಮಲ್ಪೆ ಉಡುಪಿ
  ಸ್ಟೈಪೆಂಡ್: 8000-12000 ರೂ ಪ್ರತಿ ತಿಂಗಳು  ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
  ಐಟಿಐ ಟ್ರೇಡ್ ಅಪ್ರೆಂಟಿಸ್‌ಗಳು1510ನೇ ತರಗತಿ, ಐಟಿಐ8000 ರೂ ಮಾಸಿಕ
  ಪದವೀಧರ ಅಪ್ರೆಂಟಿಸ್5ಇಂಜಿನಿಯರಿಂಗ್​ ಪದವಿ12000 ರೂ ಮಾಸಿಕ
  ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್5ಡಿಪ್ಲೊಮಾ ಇಂಜಿನಿಯರಿಂಗ್​10200 ರೂ ಮಾಸಿಕ

  ವಯೋ ಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 27 ಆಗಸ್ಟ್ 2004 ರ ಮೊದಲು ಜನಿಸಿರಬೇಕು.

  ಇದನ್ನು ಓದಿ: ರಕ್ಷಣಾ ಸಚಿವಾಲಯದಲ್ಲಿ ಸ್ಟೆನೋ ಹುದ್ದೆಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲಿ ನೇಮಕಾತಿ

  ಅರ್ಜಿ ಸಲ್ಲಿಕೆ: ಇಮೇಲ್​ ಮುಖಾಂತರ

  ಇಮೇಲ್​ ವಿಳಾಸ: hr@udupicsl.com

  ಆಯ್ಕೆ ಪ್ರಕ್ರಿಯೆ:
  ಮೆರಿಟ್ ಪಟ್ಟಿ

  ಪ್ರಮುಖ ದಿನಾಂಕಗಳು:
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27 ಆಗಸ್ಟ್​ 2022
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್​ 2022

   ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ - ಪದವೀಧರ, ತಂತ್ರಜ್ಞ ಅಪ್ರೆಂಟಿಸ್: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ಅಧಿಸೂಚನೆ ಟ್ರೇಡ್ ಅಪ್ರೆಂಟಿಸ್: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: cochinshipyard.com

  ಇದನ್ನು ಓದಿ: ಕೆನರಾ ಬ್ಯಾಂಕ್​ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲಿ ಕೆಲಸ

  ಅರ್ಜಿ ಸಲ್ಲಿಕೆ ಪ್ರಕ್ರಿಯೆ

  ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

  -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

  - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.

  -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ಇ- ಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ತಲಪುವಂತೆ ನೋಡಿಕೊಳ್ಳಿ.
  Published by:Seema R
  First published: