UAS Raichur Recruitment 2022: ತಿಂಗಳಿಗೆ ₹ 35,000 ಸಂಬಳ, ರಾಯಚೂರಿನಲ್ಲಿ ಉದ್ಯೋಗ, ಈಗಲೇ Apply ಮಾಡಿ

ಜನವರಿ 12 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 25 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
UAS Raichur Recruitment 2022: ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (University of Agricultural Sciences Raichur) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಸೀನಿಯರ್ ರಿಸರ್ಚ್​ ಫೆಲೋ(Senior Research Fellow) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 12 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 25 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ  uasraichur.edu.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































 ಸಂಸ್ಥೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ರಾಯಚೂರು
 ಹುದ್ದೆಯ ಹೆಸರು ಸೀನಿಯರ್ ರಿಸರ್ಚ್​ ಫೆಲೋ
 ಒಟ್ಟು ಹುದ್ದೆಗಳು 02
 ವಿದ್ಯಾರ್ಹತೆ  M.Sc, Ph.D
 ಉದ್ಯೋಗದ ಸ್ಥಳ  ರಾಯಚೂರು
 ವೇತನ ಮಾಸಿಕ ₹ 31,000- 35,000
 ಅರ್ಜಿ ಸಲ್ಲಿಕೆ ಬಗೆ ಆನ್​ಲೈನ್
 ​ಅರ್ಜಿ ಸಲ್ಲಿಕೆ ಆರಂಭ ದಿನಾಂಕ 12/01/2022
 ಸಂದರ್ಶನ ನಡೆಯುವ ದಿನಾಂಕ  25/01/2022

ಶೈಕ್ಷಣಿಕ ಅರ್ಹತೆ: 
ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಅಗ್ರಿಕಲ್ಚರಲ್ ಮೈಕ್ರೋಬಯಾಲಜಿ, ಜನರಲ್ ಮೈಕ್ರೋಬಯಾಲಜಿ/ಬಯೋಕೆಮಿಸ್ಟ್ರಿಯಲ್ಲಿ M.Sc, Ph.D ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ:Banking Jobs: ಕರೂರ್ ವೈಶ್ಯ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳು ಖಾಲಿ, ಪದವೀಧರರು ಅರ್ಜಿ ಸಲ್ಲಿಸಿ

ವಯಸ್ಸಿನ ಮಿತಿ:
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯುಎಎಸ್ ರಾಯಚೂರು ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು ನಿಯಮಾವಳಿ ಪ್ರಕಾರ ಇರುತ್ತದೆ.

ಇದನ್ನೂ ಓದಿ: KSOU ಮೈಸೂರಿನಲ್ಲಿ 32 ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ, PG ಆದವರು Apply ಮಾಡಿ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/01/2022
ಸಂದರ್ಶನ ನಡೆಯುವ ದಿನಾಂಕ: 25/01/2022

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಸಂದರ್ಶನ ನಡೆಯುವ ಸ್ಥಳ
ಕೀಟನಾಶಕ ಶೇಷ ಮತ್ತು ಆಹಾರ ಗುಣಮಟ್ಟ ವಿಶ್ಲೇಷಣೆ ಪ್ರಯೋಗಾಲಯ
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ
ರಾಯಚೂರು-584104
Published by:Latha CG
First published: