• Home
  • »
  • News
  • »
  • jobs
  • »
  • Typist Job: ಟೈಪಿಸ್ಟ್​ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಅವಕಾಶ- ತಿಂಗಳಿಗೆ 42,000 ಸಂಬಳ

Typist Job: ಟೈಪಿಸ್ಟ್​ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಅವಕಾಶ- ತಿಂಗಳಿಗೆ 42,000 ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಚಾಮರಾಜನಗರ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 30, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

  • News18 Kannada
  • Last Updated :
  • Chamarajanagar, India
  • Share this:

    Chamarajanagar District Court Recruitment 2022: ಟೈಪಿಸ್ಟ್ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಚಾಮರಾಜನಗರ ಜಿಲ್ಲಾ ಕೋರ್ಟ್​​ನಲ್ಲಿ 11 ಟೈಪಿಸ್ಟ್​, ಟೈಪಿಸ್ಟ್-ಕಾಪಿಯಿಸ್ಟ್​ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.ಆಸಕ್ತರು ನವೆಂಬರ್ 30, 2022ಕ್ಕೆ ಮುನ್ನ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ districts.ecourts.gov.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಚಾಮರಾಜನಗರ ಜಿಲ್ಲಾ ಕೋರ್ಟ್​​
    ಹುದ್ದೆಟೈಪಿಸ್ಟ್​, ಟೈಪಿಸ್ಟ್-ಕಾಪಿಯಿಸ್ಟ್
    ಒಟ್ಟು ಹುದ್ದೆ11
    ವಿದ್ಯಾರ್ಹತೆಪಿಯುಸಿ, ಡಿಪ್ಲೋಮಾ
    ವೇತನಮಾಸಿಕ 21,400-42,000
    ಉದ್ಯೋಗದ ಸ್ಥಳಚಾಮರಾಜನಗರ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
    ಅರ್ಜಿ ಶುಲ್ಕ ಕಟ್ಟಲು ಕಡೇ ದಿನ: ಡಿಸೆಂಬರ್ 1, 2022


    ಹುದ್ದೆಯ ಮಾಹಿತಿ:


    ಟೈಪಿಸ್ಟ್​-ಕಾಪಿಯಿಸ್ಟ್​-04
    ಟೈಪಿಸ್ಟ್​- 07
    ಒಟ್ಟು 11 ಹುದ್ದೆಗಳು


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ ಏನಿರಬೇಕು?


    ಚಾಮರಾಜನಗರ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್​​ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: JOB ALERT: ಧಾರವಾಡ ಕೃಷಿ ವಿವಿಯಲ್ಲಿ ಯಂಗ್ ಪ್ರೊಫೆಶನಲ್ ಹುದ್ದೆ ಖಾಲಿ ಇದೆ- 25 ಸಾವಿರ ಸಂಬಳ


    ವಯೋಮಿತಿ:
    ಚಾಮರಾಜನಗರ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 30, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​ಸಿ/ಎಸ್​ಟಿ/ ಪ್ರವರ್ಗ-1: 5 ವರ್ಷ
    ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು : 3 ವರ್ಷ
    PwD & ವಿಧವೆಯರಿಗೆ: 10 ವರ್ಷ


    ಸಂಬಳ ಎಷ್ಟು?
    ತಿಂಗಳಿಗೆ ₹ 21,400- 42,000 ವೇತನ ಕೊಡಲಾಗುತ್ತದೆ.


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ಪ್ರವರ್ಗ-1 & ಅಂಗವಿಕಲ ಅಭ್ಯರ್ಥಿಗಳು- ಯಾವುದೇ ಶುಲ್ಕ ಇಲ್ಲ
    ಸಾಮಾನ್ಯ/ ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 200 ರೂ.
    ಶುಲ್ಕ ಪಾವತಿ ಮಾಡುವ ವಿಧಾನ- ಆನ್​ಲೈನ್​


    ಇದನ್ನೂ ಓದಿ: Jobs: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ರೋಡ್ ಸೇಫ್ಟಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


     ಆಯ್ಕೆ ಪ್ರಕ್ರಿಯೆ:
    ಮೆರಿಟ್​ ಲಿಸ್ಟ್​
    ಟೈಪಿಂಗ್ ಟೆಸ್ಟ್
    ಕನ್ನಡ ಭಾಷಾ ಪರೀಕ್ಷೆ
    ಕಂಪ್ಯೂಟರ್ ಪರೀಕ್ಷೆ

    Published by:Latha CG
    First published: