District Court Recruitment: ಉಡುಪಿ ಕೋರ್ಟ್​ನಲ್ಲಿದೆ ಟೈಪಿಸ್ಟ್​ ಹುದ್ದೆ; ತಿಂಗಳಿಗೆ 42000ದವರೆಗೆ ವೇತನ

ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಗೆ ಅರ್ಜಿ ಆಹ್ವಾನ

  • Share this:
    ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Udupi District Court) ಘಟಕದ ವಿವಿಧ ನ್ಯಾಯಾಲಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 3 ಟೈಪಿಸ್ಟ್- ಕಾಪಿಸ್ಟ್ (Typist- Copyist)​​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್​ಲೈನ್​ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 26 ಆಗಿದೆ.

    ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಉಡುಪಿ ಜಿಲ್ಲಾ ನ್ಯಾಯಾಲಯ
    ಹುದ್ದೆಯ ಹೆಸರುಟೈಪಿಸ್ಟ್-ಕಾಪಿಸ್ಟ್
    ಹುದ್ದೆಗಳ ಸಂಖ್ಯೆ3
    ಕಾರ್ಯ ನಿರ್ವಹಣೆ ಸ್ಥಳಉಡುಪಿ
    ವೇತನ21400-42000 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ಉಡುಪಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

    ಇದನ್ನು ಓದಿ: ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ; ಕರ್ನಾಟಕ ವೃಂದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

    ವಯೋಮಿತಿ: ಉಡುಪಿ ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು  ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ:
    ಪ.ಜಾ, ಪ. ಜಾ, ಪ್ರವರ್ಗ- 1 ಅಭ್ಯರ್ಥಿಗಳು: 05 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು
    ವಿಕಲಚೇತನ, ವಿಧವೆ ಅಭ್ಯರ್ಥಿಗಳು: 10 ವರ್ಷಗಳು

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗಳು: 100 ರೂ.
    ಸಾಮಾನ್ಯ,  ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 200 ರೂ.

    ಪಾವತಿ ವಿಧಾನ: ಆನ್‌ಲೈನ್​ ಅಥವಾ ಚಲನ್​

    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: ಆರ್ಮಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ; ಕರ್ನಾಟಕ ವಲಯದಲ್ಲೂ ಇದೆ ಹುದ್ದೆ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17 ಆಗಸ್ಟ್​​​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಸೆಪ್ಟೆಂಬರ್​​ 2022
    ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: districts.ecourts.gov.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

    -  ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ  ಮಾಹಿತಿ ಭರ್ತಿ ಮಾಡಿ.

    -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿಯನ್ನು ಅಪ್​ಲೋಡ್​ ಮಾಡಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: