Tumkur University: ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ; ಪಿಜಿ ಆದವರಿಗೆ ಅವಕಾಶ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತುಮಕೂರು ವಿಶ್ವವಿದ್ಯಾಲಯದ ಅಧಿಕಥತ ವೆಬ್​ಸೈಟ್​ www.tumkuruniversity.ac.in ಗೆ ಭೇಟಿ ನೀಡಿ, ಅಲ್ಲಿರುವ ಅಧಿಸೂಚನೆಯನ್ನು ಡೌನ್​ಲೋಡ್ ಮಾಡಿಕೊಂಡು ನೋಡಬಹುದಾಗಿದೆ.

ತುಮಕೂರು ವಿವಿ

ತುಮಕೂರು ವಿವಿ

  • Share this:
ತುಮಕೂರು ವಿಶ್ವವಿದ್ಯಾಲಯದಲ್ಲಿ(Tumkur University) 2021-22ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿ(Post Graduates) ತರಗತಿಗಳಿಗೆ ಅತಿಥಿ ಉಪನ್ಯಾಸಕ(Guest Lecturers)ರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

































ಸಂಸ್ಥೆ ತುಮಕೂರು ವಿಶ್ವವಿದ್ಯಾಲಯ
ಹುದ್ದೆಯ ಹೆಸರು ಅತಿಥಿ ಉಪನ್ಯಾಸಕ
ಒಟ್ಟು ಹುದ್ದೆಗಳು 12
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ, NET, SLET, Ph.D
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/10/2021
ಅರ್ಜಿ ಸಲ್ಲಿಸಲು ವೆಬ್​ಸೈಟ್​ www.tumkuruniversity.ac.in



ಯಾವ ವಿಷಯಗಳಿಗೆ ಅತಿಥಿ ಉಪನ್ಯಾಸಕರ ನೇಮಕ?

ತುಮಕೂರು ವಿವಿಯಲ್ಲಿ ಈ ವಿಯಷಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ.

  • ಕನ್ನಡ

  • ಇಂಗ್ಲಿಷ್

  • ಇತಿಹಾಸ

  • ವಾಣಿಜ್ಯಶಾಸ್ತ್ರ

  • ಸಮಾಜಕಾರ್ಯ

  • ರಸಾಯನಶಾಸ್ತ್ರ

  • ಗಣಿತತಾಸ್ತ್ರ

  • ಸಸ್ಯಶಾಸ್ತ್ರ

  • ಪ್ರಾಣಿಶಾಸ್ತ್ರ

  • ಗಣಕಯಂತ್ರ ವಿಜ್ಞಾನ

  • ವಿದ್ಯುನ್ಮಾನ

  • ಸೂಕ್ಷ್ಮಜೀವಿಶಾಸ್ತ್ರ

  • ಭೌತಶಾಸ್ತ್ರ

  • ಜೈವಿಕ ತಂತ್ರಜ್ಞಾನ


ವಿದ್ಯಾರ್ಹತೆ:

ಮೇಲ್ಕಂಡ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು. ಜೊತೆಗೆ NET, SLET, Ph.D, M.Phill ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.



ಆಯ್ಕೆ ಪ್ರಕ್ರಿಯೆ:

ಮೊದಲಿಗೆ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.



ಹೆಚ್ಚಿನ ಮಾಹಿತಿಗಾಗಿ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತುಮಕೂರು ವಿಶ್ವವಿದ್ಯಾಲಯದ ಅಧಿಕಥತ ವೆಬ್​ಸೈಟ್​ www.tumkuruniversity.ac.in ಗೆ ಭೇಟಿ ನೀಡಿ, ಅಲ್ಲಿರುವ ಅಧಿಸೂಚನೆಯನ್ನು ಡೌನ್​ಲೋಡ್ ಮಾಡಿಕೊಂಡು ನೋಡಬಹುದಾಗಿದೆ.

ಸಂದರ್ಶನ

ವಿಶ್ವವಿದ್ಯಾಲಯದ ವೆಬ್​ಸೈಟ್​ನಲ್ಲಿ ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ. ಶಾರ್ಟ್​ಲಿಸ್ಟ್ ಆದ ಅಭ್ಯರ್ಥಿಗಳು ವಿಶ್ವವಿದ್ಯಾಲಯ ಪ್ರಕಟಿಸುವ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: