• Home
  • »
  • News
  • »
  • jobs
  • »
  • Court Job: ಕೋರ್ಟ್​ನಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಇನ್ನೆರಡೇ ದಿನ ಬಾಕಿ

Court Job: ಕೋರ್ಟ್​ನಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಇನ್ನೆರಡೇ ದಿನ ಬಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿಯಿರುವ 51 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಪ್ರಕ್ರಿಯೆ, ವೇತನ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಕಂಡಂತೆ ಇದ್ದು, ಗಮನಿಸಿ.

  • Share this:

ಮಕೂರು ಜಿಲ್ಲಾ ನ್ಯಾಯಾಲಯದಲ್ಲಿ (Tumkur District Court) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಖಾಲಿ ಇರುವ 51 ಹುದ್ದೆಗಳ ಭರ್ತಿಗೆ ಜಿಲ್ಲಾ ಇ ಕೋರ್ಟ್​ ಭರ್ತಿಗೆ ಮುಂದಾಗಿದೆ. ಮಾಸಿಕ 28 ಸಾವಿರದವರೆಗೆ ವೇತನ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲವಾಗಿದ್ದು, ಆನ್​ ಲೈನ್ (Online) ಅರ್ಜಿ ಸಲ್ಲಿಕೆಗೆ ಇಂದೇ ಕಡೆಯ ದಿನಾಂಕವಾದರೆ, ಚಲನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 17ರ ವರೆಗೆ ಸಮಯಾವಕಾಶವಿದೆ.


ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿಯಿರುವ 4 ಬ್ಯಾಕ್​ಲಾಕ್​ ಮತ್ತು ಹೊಸದಾಗಿ 47 ಹುದ್ದೆಗಳ ನೇಮಕಾತಿ, ಆಯ್ಕೆ ಪ್ರಕ್ರಿಯೆ, ವೇತನ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಕಂಡಂತೆ ಇದ್ದು, ಗಮನಿಸಿಕೊಳ್ಳಿ.

ಹುದ್ದೆ ಮಾಹಿತಿಹುದ್ದೆ ವಿವರ
ಸಂಸ್ಥೆತುಮಕೂರು ಇ ಕೋರ್ಟ್
ಹುದ್ದೆಪ್ಯೂನ್​​ (ಜವಾನ)
ಹುದ್ದೆಗಳ ಸಂಖ್ಯೆ51
ಉದ್ಯೋಗ ಸ್ಥಳತುಮಕೂರು
ವೇತನ17,000- 28,950 ರೂ ಪ್ರತಿ ತಿಂಗಳು

ತುಮಕೂರು ಜಿಲ್ಲೆಯ ಇ ಕೋರ್ಟ್​ ನಲ್ಲಿ 51 ಜವಾನ್​ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಹ ಅಬ್ಯರ್ಥಿಗಳು ಜೂನ್ 17ರ ಒಳಗಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮೆರಿಟ್​ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದ ಅಬ್ತಯರ್ಥಿಗೆ 17 ಸಾವಿರದಿಂದ 28 ಸಾವರಿದವರೆಗೆ ತಿಂಗಳ ವೇತನ ಇರುವುದಾಗಿ ತಿಳಿಸಲಾಗಿದೆ.


ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು. ಆದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 38 ವರ್ಷ ಮತ್ತು ಪ.ಜಾ. ಪ. ಪಂ, ಪ್ರವರ್ಗ ಅಭ್ಯರ್ಥಿಗಳಿಗೆ 40 ವರ್ಷ ಮಯೋಮಿತಿ ನಿಗದಿಪಡಿಸಲಾಗಿದೆ.


ಶೈಕ್ಷಣಿಕ ಅರ್ಹತೆ: ತುಮಕೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ SSLC ಪೂರ್ಣಗೊಳಿಸಿರಬೇಕು. ಇನ್ನು, ಮೆರಿಟ್​ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.


ಇದನ್ನು ಓದಿ:  SSC Recruitment: 835 ಹೆಡ್ ಕಾನ್ಸ್‌ಟೇಬಲ್ ಹುದ್ದೆ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ


ಅರ್ಜಿ ಶುಲ್ಕ: ಸಾಮಾನ್ಯ, ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ- 200 ರೂ
ಪ.ಜಾ. ಪ. ಪಂ, ಪ್ರವರ್ಗ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ.


ಅಧಿಸೂಚನೆ ಪ್ರಮುಖ ಲಿಂಕ್‌ಗಳು:


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: districts.ecourts.gov.in


ಆನ್​ ಲೈನ್​ ಶುಲ್ಕ ಪಾವತಿ ವಿಧಾನ:


ಹುದ್ದಗೆ ನಿಗದಿಪಡಿಸಿರುವ ಶುಲ್ಕವನ್ನು ನ್ಯಾಯಾಲಯದ ವೆಬ್ ​ಸೈಟ್  districts.ecourts.gov.in ಲಿಂಕ್​ ಮೂಲಕ ಸ್ಟೇಟ್​ ಬ್ಯಾಂಕ್​ ಆಫ್​​ ಇಂಡಿಯಾದ Online payment through net banking / credit card / debit card / challan download ಮೂಲಕ ಪಾವತಿಸತಕ್ಕದ್ದು. ಅಥವಾ ಚಲನ್​ ಪ್ರತಿ ಮೂಲಕ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಯಾವುದೇ ಶಾಖೆಗೆ ಹಾಜರಾಗಿ ಕೂಡ ಶುಲ್ಕವನ್ನು ಪಾವತಿಸಬಹುದು.


ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:


- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಜೂನ್​ 15, 2022 (ಇಂದು)
- ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಜೂನ್​ 17, 2022.


ಇದನ್ನು ಓದಿ: Railway Recruitment: ರೈಲ್ವೇ ಇಲಾಖೆಯಲ್ಲಿ 1 ಲಕ್ಷಕ್ಕೂ ಅಧಿಕ ನೇಮಕಾತಿ, ಇಲ್ಲಿದೆ ಮಾಹಿತಿ


ಅರ್ಜಿ ಸಲ್ಲಿಕೆ ಮಾಡುವುದು ಹೇಗೆ:


-ತುಮಕೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಬಳಿಕ ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


-ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ


-ತುಮಕೂರು ಜಿಲ್ಲಾ ನ್ಯಾಯಾಲಯದ districts.ecourts.gov.in ತಾಣಕ್ಕೆ ಭೇಟಿ ನೀಡಿ ಪ್ಯೂನ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ.


-ತುಮಕೂರು ಜಿಲ್ಲಾ ನ್ಯಾಯಾಲಯದ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.


-ತುಮಕೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು  ಕ್ಲಿಕ್ ಮಾಡಿ.

Published by:shrikrishna bhat
First published: