ಕೊರೋನಾ ಬಂದ ನಂತರ ಎಷ್ಟೋ ಮಂದಿ ಭಾರತದಂತ ಮುಂದುವರೆಯುತ್ತಿರುವ ದೇಶಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದರೆ ಇಲ್ಲೊಂದು ಸಂಸ್ಥೆ ವಿಚಿತ್ರ ಆಫರ್ ಒಂದನ್ನು ನೀಡಿದೆ. ಈ ಕಂಪೆನಿಗೆ ನೀವು ನೌಕರರಾಗಿ ಆಯ್ಕೆಯಾದರೆ ನಿಮಗೆ ವಾರ್ಷಿಕ 63 ಲಕ್ಷ ರೂಪಾಯಿಗಳನ್ನು ಸಂಬಳವನ್ನಾಗಿ ನೀಡಲಾಗುತ್ತದೆ. ಹಾಗಾದರೆ ಕೆಲಸ ಏನು ಎನ್ನುತ್ತೀರಾ? ಅಂತದ್ದೇನು ರಾಕೆಟ್ ಸೈನ್ಸ್ ಅಲ್ಲ, ಏನೋ ಕಂಡು ಹಿಡಿಯಬೇಕಿಲ್ಲ. ನೀವು ಮಾಡಬೇಕಿರುವುದು ಕೃಷಿ ಭೂಮಿಯಲ್ಲಿ ಬೆಳೆದ ತರಕಾರಿಯನ್ನು ಕಿತ್ತು ಪ್ಯಾಕ್ ಮಾಡುವುದು ಅಷ್ಟೇ..! ಹಾಗಾದರೆ ಇಷ್ಟು ಚಿಕ್ಕ ಕೆಲಸಕ್ಕೆ ಇಷ್ಟೊಂದು ಸಂಬಳ ಏಕೆ ಕೊಡುತ್ತಿದೆ ಈ ಸಂಸ್ಥೆ, ತಲೆಯೇನಾದರೂ ಕೆಟ್ಟಿದೆಯಾ ಎಂದು ನೀವು ಪ್ರಶ್ನಿಸಬಹುದು. ಅದಕ್ಕೆ ಉತ್ತರ ಈ ಲೇಖನದಲ್ಲಿದೆ.
ಇಂಗ್ಲೆಂಡಿನ ಒಂದು ಸಂಸ್ಥೆ ನೌಕರರಿಗೆ ಭಾರೀ ಮೊತ್ತದ ಸಂಬಳ ಘೋಷಿಸಿದೆ. ವರ್ಷಕ್ಕೆ ಬರೋಬ್ಬರಿ 62 ಸಾವಿರ ಪೌಂಡ್ಸ್ ಅಂದರೆ ಭಾರತದ ರೂಪಾಯಿಗಳಲ್ಲಿ 63 ಲಕ್ಷ ರೂಪಾಯಿಗಳು. ಇದಕ್ಕೆ ಕಾರಣವೆಂದರೆ, ಇಂಗ್ಲೆಂಡಿನಲ್ಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ಈ ಸಂಸ್ಥೆ ಇಂಗ್ಲೆಂಡಿನ ಬಹುತೇಕ ಸೂಪರ್ ಮಾರ್ಕೆಟ್ಗಳಿಗೆ ತರಕಾರಿಯನ್ನು ಸಪ್ಲೇ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಕತ್ತರಿಸಲು, ಸಂಸ್ಕರಿಸಲು ಮತ್ತು ಅದನ್ನು ಪ್ಯಾಕಿಂಗ್ ಮಾಡಿ ಸೂಪರ್ ಮಾರ್ಕೆಟ್ಗಳಿಗೆ ಕಳಿಸಲು ಜನರ ಕೊರತೆಯಾಗಿದೆ. ಕೆಲಸಗಾರರ ಕೊರತೆ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ಸಂಬಳವನ್ನು ನೀಡಲು ಸಂಸ್ಥೆ ಮುಂದಾಗಿದ್ದು, ಈ ಬಗ್ಗೆ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ದೊಡ್ಡ ಮೊತ್ತದ ಸಂಬಳವನ್ನು ನೋಡಿಯಾದರೂ ಜನ ಮುಂದೆ ಬರಬಹುದು ಎಂದು ಕಂಪೆನಿ ಆಶಯಿಸಿದೆ.
ಎಷ್ಟು ಸಿಗತ್ತೆ ಸಂಬಳ?:
ನೌಕರರು ಬೇಕಾಗಿದ್ದಾರೆ ಎಂದು ಸಂಸ್ಥೆ ಈಗಾಗಲೇ ಎರಡು ಜಾಹಿರಾತುಗಳನ್ನು ಹೊರತಂದಿದೆ. ಟಿಎಚ್ ಕ್ಲೆಮೆಂಟ್ಸ್ ಮತ್ತು ಸನ್ಸ್ ಲಿಮಿಟೆಡ್ ಸಂಸ್ಥೆ (TH Clements and Sons Limited) ಇಂಗ್ಲೆಂಡ್ನ ಲಿಂಕನ್ಶೈರ್ನಲ್ಲಿದೆ. ತಮ್ಮ ಸಂಸ್ಥೆ ಕೆಲಸಗಾರರ ಹುಡುಕಾಟದಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬ್ರೋಕೊಲಿ ಮತ್ತು ಕ್ಯಾಬೇಜ್ ಕತ್ತರಿಸುವ ಕೆಲಸಕ್ಕಾಗಿ ಜನ ಬೇಕಾಗಿದ್ದಾರೆ ಎಂದು ಜಾಹೀರಾತು ತಿಳಿಸಿದೆ. ಆಯ್ಕೆಯಾಗುವ ಕೆಲಸಗಾರರಿಗೆ ಪ್ರತಿ ಗಂಟೆಗೆ 30 ಪೌಂಡ್ ಹಣ ನೀಡುವುದಾಗಿ ಕಂಪೆನಿ ತಿಳಿಸಿದೆ. ಅಂದರೆ ವಾರದ ಐದು ದಿನಗಳು ದಿನಕ್ಕೆ 8 ಗಂಟೆ ಕೆಲಸ ಮಾಡಿದಲ್ಲಿ ವಾರದ ಸಂಬಳ 1200 ಪೌಂಡ್ಸ್ ಆಗಲಿದೆ. ಅಂದರೆ ತಿಂಗಳಿಗೆ 4,800 ಪೌಂಡ್ಸ್ ಮತ್ತು ವಾರ್ಷಿಕ 62,400 ಪೌಂಡ್ಸ್ (63 ಲಕ್ಷ ರೂಪಾಯಿ) ಸಂಬಳ ಸಿಗಲಿದೆ.
ಇದನ್ನೂ ಓದಿ: ಬಾಲ್ಯದಲ್ಲಿ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ, ಇಂದು ದಿನವೊಂದಕ್ಕೆ ಗಳಿಸ್ತಾರೆ 153 ಕೋಟಿ ಈ ಉದ್ಯಮಿ
ಕೊರೋನಾ ಮತ್ತು ಬ್ರೆಕ್ಸಿಟ್ನಿಂದ ಪೆಟ್ಟು (Coronavirus pandemic and Brexit are the reason for crisis) :
ಕೋರೊನಾ ಅಬ್ಬರ ಮತ್ತು ಬ್ರೆಕ್ಸಿಟ್ ಬೆಳವಣಿಗೆಯಿಂದ ಸಂಸ್ಥೆಗೆ ಕೆಲಸಗಾರರ ಅವಶ್ಯಕತೆ ಹೆಚ್ಚಾಗಿದೆ. ಮುಂಚೆ ಇದ್ದ ಕೆಲಸಗಾರರು ಸಂಸ್ಥೆಯನ್ನು ತೊರೆದಿದ್ದಾರೆ, ಹೊಸಬರು ಬರುತ್ತಿಲ್ಲ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊರೋನಾ ಮತ್ತು ಬ್ರೆಕ್ಸಿಟ್ ಎರಡೂ ಸೇರಿ ಬೇರೆಡೆಯಿಂದ ಕೆಲಸಕ್ಕೆ ಬರುತ್ತಿದ್ದ ನೌಕರರ ಮೇಲೆ ನೂರೆಂಟು ಮಾರ್ಗಸೂಚಿಗಳನ್ನು ಹೇರಿದೆ. ಇದರಿಂದ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ಸಂಸ್ಥೆ ತಿಳಿಸಿದೆ. ಇದಕ್ಕಾಗಿಯೇ ಸಂಸ್ಥೆಗೆ ತುರ್ತಾಗಿ ಕ್ಯಾಬೇಜ್, ಬ್ರೋಕೊಲಿ ಕತ್ತರಿಸಲು ಫೀಲ್ಡ್ ಆಪರೇಟರ್ಗಳು ಬೇಕಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸೆಕಂಡ್ ಹ್ಯಾಂಡ್ ಕಾರ್ ಷೋರೂಮಿನ ಕಾರ್ ಡಿಕ್ಕಿಯಲ್ಲಿ ಬೆತ್ತಲಾಗಿ ಸಿಕ್ಕಿಬಿದ್ದ ಮಹಿಳೆ: ಬಂಧಿಸಿದ ಪೊಲೀಸರು
ಸಂಸ್ಥೆ ಒಟ್ಟೂ ಎರಡು ಜಾಹಿರಾತುಗಳನ್ನು ಬಿಡುಗಡೆ ಮಾಡಿದ್ದು, ಒಂದರಲ್ಲಿ ಕೇವಲ ಕ್ಯಾಬೇಜ್ ಕೀಳಲು ಜನ ಬೇಕು ಎಂದರೆ, ಇನ್ನೊಂದರಲ್ಲಿ ಕೇವಲ ಬ್ರೋಕೊಲಿ ಕೀಳಲು ಜನ ಬೇಕು ಎಂದು ತಿಳಿಸಿದೆ. ಒಟ್ಟಿನಲ್ಲಿ ಇಂಗ್ಲೆಂಡ್ಗೆ ತೆರಳಲು ಅನುಮತಿ ಇದ್ದರೆ ನೀವು ಸಹ ಈ ಕೆಲಸಕ್ಕೆ ಪ್ರಯತ್ನಿಸಬಹುದು. ಆದರೆ ಕೊರೋನಾ ಮಾರ್ಗಸೂಚಿಗಳು ಅದಕ್ಕೆ ಸಮಸ್ಯೆಯಾಗಿ ತಲೆದೂರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ