Eating Job: ತಿನ್ನೋದೇ ಇಲ್ಲಿ ಕೆಲಸ! ತಿಂಗಳ ಸಂಬಳ ಭರ್ತಿ 1 ಲಕ್ಷ!

ಕೆಲವು ಕೆಲಸಗಳು ಮಾಡಲು ತುಂಬಾನೇ ಬೋರ್ (Bore) ಅಂತ ಅನ್ನಿಸಿದರೇ, ಇನ್ನೂ ಕೆಲವು ಉದ್ಯೋಗಗಳು ಮಾಡಲು ತುಂಬಾನೇ ಮಜವಾಗಿರುತ್ತವೆ. ಇಲ್ಲೊಂದು ಆನ್‌ಲೈನ್ ಮಾರುಕಟ್ಟೆಯ (Online Marketplace) ಕಂಪನಿಯೊಂದು ನಿಜವಾಗಲು ಇಂತಹದೇ ಒಂದು ಉತ್ತಮವಾದ ಕೆಲಸವನ್ನು ನೀಡುತ್ತಿದೆ ನೋಡಿ.

ಉದ್ಯೋಗ ಅವಕಾಶ

ಉದ್ಯೋಗ ಅವಕಾಶ

  • Share this:
ಸಾಮಾನ್ಯವಾಗಿ ಜನರು (People) ಒಂದು ಕೆಲಸಕ್ಕೆ (Job) ಸೇರುವ ಮುಂಚಿತವಾಗಿ ಆ ಕಂಪನಿಯಲ್ಲಿ ತಿಂಗಳ ಕೊನೆಯಲ್ಲಿ ಯಾವುದೇ ವಿಳಂಬವಿಲ್ಲದೆ ಸಂಬಳ (Salary) ಸರಿಯಾದ ಸಮಯಕ್ಕೆ ಕೊಡುತ್ತಾರೆಯೋ ಅಥವಾ ಇಲ್ಲವೋ ಅಂತ ನಾಲ್ಕು ಜನರ ಹತ್ತಿರ ಸರಿಯಾಗಿ ವಿಚಾರಿಸಿ ಕೆಲಸಕ್ಕೆ ಸೇರಿ ಕೊಳ್ಳುತ್ತಾರೆ. ಒಟ್ಟಿನಲ್ಲಿ ಒಬ್ಬ ಉದ್ಯೋಗಿ ಕೆಲಸಕ್ಕೆ ಸೇರುವ ಮುನ್ನ ನೋಡುವ ವಿಚಾರಗಳಲ್ಲಿ ಸಂಬಳ ಮತ್ತು ಕೆಲಸ ಮಾಡುವ ಕಂಪನಿಯಲ್ಲಿನ (Company) ವಾತಾವರಣ ಎರಡು ಅಂಶಗಳು ತುಂಬಾನೇ ಮುಖ್ಯವಾಗಿ ನೋಡುತ್ತಾರೆ ಎಂದು ಹೇಳಬಹುದು. ಕೆಲವು ಕೆಲಸಗಳು ಮಾಡಲು ತುಂಬಾನೇ ಬೋರ್ (Bore) ಅಂತ ಅನ್ನಿಸಿದರೇ, ಇನ್ನೂ ಕೆಲವು ಉದ್ಯೋಗಗಳು ಮಾಡಲು ತುಂಬಾನೇ ಮಜವಾಗಿರುತ್ತವೆ. ಇಲ್ಲೊಂದು ಆನ್‌ಲೈನ್ ಮಾರುಕಟ್ಟೆಯ (Online Marketplace) ಕಂಪನಿಯೊಂದು ನಿಜವಾಗಲು ಇಂತಹದೇ ಒಂದು ಉತ್ತಮವಾದ ಕೆಲಸವನ್ನು ನೀಡುತ್ತಿದೆ ನೋಡಿ.

ಅಷ್ಟಕ್ಕೂ ಆ ಕಂಪನಿ ಯಾವುದು?

ಕನಸಿನ ಉದ್ಯೋಗಗಳನ್ನು ನನಸಾಗಿಸುವ MaterialsMarket.com ಅವರು ಮೆಕ್‌ಡೊನಾಲ್ಡ್ಸ್‌ (McDonald's), ಸಬ್ವೇ (Subway) ಮತ್ತು ಗ್ರೆಗ್ಸ್ (Greggs) ನಂತಹ ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಲ್ಲಿ 'ಟೇಕ್ ಅವೇ ಟೆಸ್ಟರ್' ಆಗಿ ಕೆಲಸ ಮಾಡಲು ಜನರನ್ನು ಹುಡುಕುತ್ತಿದೆ. ವೇಲ್ಸ್ ಆನ್‌ಲೈನ್ ವರದಿ ಮಾಡಿರುವಂತೆ ಈ ಕೆಲಸಕ್ಕೆ 1,000 ಪೌಂಡ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 1 ಲಕ್ಷ ರೂಪಾಯಿಗಳನ್ನು ಪಾವತಿಸುವುದಾಗಿ ಮತ್ತು ಈ ಕೆಲಸಕ್ಕೆ ಆರು ಜನರನ್ನು ಹುಡುಕುತ್ತಿದೆ ಎಂದು ಹೇಳಲಾಗಿದೆ.

ಮಾರುಕಟ್ಟೆ ಮೂಲತಃ ವ್ಯಾಪಾರಿಗಳಿಗೆ ಅತ್ಯುತ್ತಮ ಫಾಸ್ಟ್ ಫುಡ್ ಆಯ್ಕೆಗಳನ್ನು ನಿರ್ಧರಿಸಲು ಒಂದು ತಂಡವನ್ನು ನೇಮಿಸಿಕೊಳ್ಳುತ್ತಿದೆ. MaterialsMarket.com ಸಹ-ಸಂಸ್ಥಾಪಕ ಸ್ಯಾಮ್ಯುಯೆಲ್ ಹಂಟ್ ಅವರ ಪ್ರಕಾರ, ರೆಸ್ಟೋರೆಂಟ್ ಗಳಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಅಥವಾ ಮುಂಜಾನೆ ಫಾಸ್ಟ್ ಫುಡ್ ತಿನ್ನುವ ಅನೇಕ ವ್ಯಾಪಾರಿಗಳನ್ನು ನಾವು ನೋಡಬಹುದು. "ಫಾಸ್ಟ್ ಫುಡ್ ಆಹಾರ ಹೀಗಿರುತ್ತದೆ, ಹಾಗಿರುತ್ತದೆ ಎಂಬ ಅನೇಕ ನಕಾರಾತ್ಮಕ ಅರ್ಥಗಳನ್ನು ಹೊಂದಿದ್ದರೂ, ಈ ವ್ಯಾಪಾರಿಗಳಿಗೆ ಆ ಊಟವು ತುಂಬಾನೇ ಅನುಕೂಲಕರವಾಗಿರುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: IIAP Recruitment: ಬಿ.ಟೆಕ್​ ಆಗಿದ್ರೆ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿ - ತಿಂಗಳಿಗೆ 31 ಸಾವಿರ ಸಂಬಳ

ಫಾಸ್ಟ್ ಫುಡ್ ಗಳಲ್ಲಿ ಆಹಾರವನ್ನು ತಿನ್ನುವ ಅವಕಾಶ

ಒಮ್ಮೆ ಆಯ್ಕೆಯಾದ ನಂತರ, ವ್ಯಕ್ತಿಯು ಹಲವಾರು ಫಾಸ್ಟ್ ಫುಡ್ ಗಳಲ್ಲಿ ಆಹಾರವನ್ನು ತಿನ್ನುವ ಅವಕಾಶವನ್ನು ಹೊಂದಿರುತ್ತಾನೆ. ಇವುಗಳಲ್ಲಿ ಮೆಕ್‌ಡೊನಾಲ್ಡ್ಸ್‌ ನ ದೊಡ್ಡ ಬಿಗ್ ಮ್ಯಾಕ್ ಮೀಲ್, ಗ್ರೆಗ್ಸ್ ಸಾಸೇಜ್, ಮತ್ತು ಆಮ್ಲೆಟ್ ಬ್ರೇಕ್ ಫಾಸ್ಟ್ ಬಾಗುಯೆಟ್, ಮತ್ತು ಸಬ್ವೇಯ ಫುಟ್ ಲಾಂಗ್ ಮೀಟ್ ಬಾಲ್ ಮರಿನಾರಾ ಸೇರಿವೆ.

ಆಹಾರದ ರುಚಿ ನೋಡುವುದು ಈ ಕೆಲಸದ ಏಕೈಕ ಜವಾಬ್ದಾರಿ

ಆದಾಗ್ಯೂ, ಈ ಆಹಾರಗಳ ರುಚಿಯನ್ನು ನೋಡುವುದು ಈ ಕೆಲಸದ ಏಕೈಕ ಜವಾಬ್ದಾರಿ ಎಂದು ನೀವು ಭಾವಿಸಿದರೆ, ನೀವು ತಪ್ಪಾಗಿ ಭಾವಿಸುತ್ತೀದ್ದೀರಿ ಅಂತ ಅರ್ಥ. ಆಹಾರವನ್ನು ಸೇವಿಸಿದ ನಂತರ, ಆ ಟೆಸ್ಟರ್ ಮಾರುಕಟ್ಟೆಗೆ ಪ್ರಮುಖ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಆಹಾರವು ಒಬ್ಬ ವ್ಯಕ್ತಿಯ ಹೊಟ್ಟೆಯನ್ನು ಎಷ್ಟು ಸಮಯದವರೆಗೆ ತುಂಬಿಸಿಟ್ಟಿರುತ್ತದೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಇದು ಮಾರುಕಟ್ಟೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ವ್ಯಾಪಾರಿಗಳ ಶಕ್ತಿಯ ಮಟ್ಟವನ್ನು ಉನ್ನತ ಮಟ್ಟದಲ್ಲಿರಿಸಲು ಆಹಾರವು ಎಷ್ಟು ಪರಿಣಾಮಕಾರಿ ಎಂಬ ಕಲ್ಪನೆಯನ್ನು ಸಹ ಇದು ನೀಡುತ್ತದೆ.

ಟೆಸ್ಟರ್ ಗೆ ಒಂದು ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ

ಟೆಸ್ಟರ್ ಗಳು ಈ ಆಹಾರದಿಂದಾಗುವ ನಕಾರಾತ್ಮಕ ಪರಿಣಾಮಗಳನ್ನು ಸಹ ತಪ್ಪದೇ ವರದಿ ಮಾಡಬೇಕಾಗುತ್ತದೆ. ಪ್ರತಿ ಟೆಸ್ಟರ್ ಗೆ ಒಂದು ತಿಂಗಳ ಕೆಲಸಕ್ಕೆ ಸರಿ ಸುಮಾರು 1 ಲಕ್ಷ ರೂಪಾಯಿ ನೀಡಲಾಗುತ್ತದೆ. ಇದಲ್ಲದೆ, ಅವರು ಪ್ರತಿದಿನ ತಿನ್ನುವ ಪ್ರತಿ ಊಟಕ್ಕೂ ಮಾರುಕಟ್ಟೆಯು ಅವರಿಗೆ ಪಾವತಿಸುತ್ತದೆ.

ಇದನ್ನೂ ಓದಿ:  NIMHANS Recruitment: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 35 ಸಾವಿರ ಸಂಬಳ

ಟೆಸ್ಟರ್ ನಿಂದ ಸಂಗ್ರಹಿಸಿದ ದತ್ತಾಂಶವು ನಿರ್ಣಾಯಕವಾಗಿರುತ್ತದೆ ಮತ್ತು ಪೌಷ್ಟಿಕ ತಜ್ಞರ ಸಹಾಯದಿಂದ ಆ ಆಹಾರವನ್ನು ವಿಶ್ಲೇಷಿಸಲಾಗುತ್ತದೆ. ವಿಶ್ಲೇಷಣೆಯನ್ನು ನಂತರ ಮಾರುಕಟ್ಟೆಯು ತನ್ನ ಹವ್ಯಾಸಿ ಬಿಲ್ಡರ್ ಗಳು ಮತ್ತು ವೃತ್ತಿಪರರ ಸಮುದಾಯಕ್ಕೆ ಸೇವಿಸಲು ಉತ್ತಮ ಊಟದ ಬಗ್ಗೆ ಮಾರ್ಗದರ್ಶಿಯನ್ನು ರಚಿಸಲು ಬಳಸುತ್ತದೆ.
Published by:Ashwini Prabhu
First published: