ಕೆಲವು ವರ್ಷಗಳ ಹಿಂದೆ ಬಹುತೇಕ ಕಂಪನಿಗಳು (Companies) ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಮನೆಯಲ್ಲಿಯೇ ಕುಳಿತು ಹೇಗೆ ಕಚೇರಿಯ ಮತ್ತು ಕಂಪನಿಯ ಕೆಲಸವನ್ನು ಮಾಡುವುದು ಅಂತ ಎನ್ನುವುದರ ಬಗ್ಗೆ ಸಣ್ಣ ಐಡಿಯಾ ಸಹ ಇರಲಿಲ್ಲ. ಆದರೆ ಈ ಕೋವಿಡ್-19 (COVID-19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಇಂದು ಬಹುತೇಕರು ಮನೆಯಲ್ಲಿ ಕುಳಿತುಕೊಂಡು ಕಚೇರಿಯ ಮತ್ತು ಕಂಪನಿಯ ಕೆಲಸವನ್ನು (Work) ಹೇಗೆ ಸರಾಗವಾಗಿ ಮಾಡುವುದು ಅಂತ ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ಕಚೇರಿಗಳು (Office) ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವ ಮೂಲಕ ಅವರ ಕೆಲಸವು ಸರಾಗವಾಗಿ ನಡೆಯುವಂತೆ ಮಾಡಿವೆ ಮತ್ತು ಉದ್ಯೋಗಿಗಳಿಗೂ ಇದು ಆರಾಮದಾಯಕವಾಗಿದೆ.
ಈಗ ಉದ್ಯೋಗಿಗಳಿಗೆ ಯಾವ ಕೆಲಸದ ಮಾದರಿ ಇಷ್ಟ?
ಈಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದರಿಂದ, ಹಲವಾರು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ.
ಆದರೆ ಈಗಾಗಲೇ ಉದ್ಯೋಗಿಗಳ ಒಂದು ವರ್ಗವು ತಮ್ಮ ಸಹೋದ್ಯೋಗಿಗಳೊಂದಿಗೆ ಕೆಲಸದ ಬಿಡುವಿನ ಸಮಯದಲ್ಲಿ ಹೊರಗೆ ಹೋಗಿ ಕಾಫಿ ಕುಡಿಯುವುದನ್ನು ಮತ್ತು ಹರಟೆ ಹೊಡೆಯುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಅನೇಕರು ಮನೆಯಿಂದ ಕೆಲಸ ಮಾಡುವುದನ್ನು ಒಂದು ವರದಾನವಾಗಿ ಸ್ವೀಕರಿಸಿದ್ದಾರೆ ಮತ್ತು ಅದೇ ರೀತಿಯ ಕೆಲಸಗಳನ್ನು ಹುಡುಕಲು ಶುರು ಮಾಡಿದ್ದಾರೆ. ಏಕೆಂದರೆ ಈ ದೊಡ್ಡ ದೊಡ್ಡ ನಗರಗಳಲ್ಲಿ ಈ ಟ್ರಾಫಿಕ್ ನಲ್ಲಿ ಕೆಲಸಕ್ಕೆ ಹೋಗಿ ಬರುವುದು ಒಂದು ದೊಡ್ಡ ತಲೆನೋವು ಇರುವುದಿಲ್ಲ ಅಂತ ಅವರ ಅನಿಸಿಕೆಯಾಗಿದೆ.
ಈಗ, ಮನೆಯಿಂದ ಕೆಲಸ ಮಾಡುವುದು ಅಥವಾ ಹೆಚ್ಚಿನ ಸಂಬಳಗಳಲ್ಲಿ ಒಂದನ್ನು ಆಯ್ಕೆ ಮಾಡಲು ಉದ್ಯೋಗಿಗಳಿಗೆ ಕೇಳಿದರೆ, ಅವರು ಮೊದಲಿನದರ ಕಡೆಗೆ ಒಲವು ತೋರುತ್ತಾರೆ. ಯಾವೆಲ್ಲಾ ಕಂಪನಿಗಳು ಖಾಯಂ ವರ್ಕ್ ಫ್ರಮ್ ಹೋಮ್ ಮಾದರಿಗೆ ಹಸಿರು ನಿಶಾನೆ ತೋರಿಸಿವೆ ಮತ್ತು ಯಾವೆಲ್ಲಾ ಕಂಪನಿಗಳು ಉದ್ಯೋಗಿಗಳನ್ನು ಆಫೀಸಿಗೆ ಬಂದು ಕೆಲಸ ಮಾಡಲು ಹೇಳಿವೆ ನೋಡಿ.
ಟಿಸಿಎಸ್ (TCS), ವಿಪ್ರೋ (WIPRO) ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್’ ಮುಗೀತು..
ದೊಡ್ಡ ದೊಡ್ಡ ಐಟಿ ಕಂಪನಿಗಳಾದ ವಿಪ್ರೋ ಮತ್ತು ಟಿಸಿಎಸ್ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ಕನಿಷ್ಠ ಮೂರು ದಿನವಾದರೂ ಕಚೇರಿಗೆ ಬಂದು ಕೆಲಸ ಮಾಡುವಂತೆ ಕೇಳಿಕೊಂಡಿವೆ. ಇದರೊಂದಿಗೆ ಅವರು ತಮ್ಮ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೀಡಿದ್ದಂತಹ ‘ವರ್ಕ್ ಫ್ರಮ್ ಹೋಮ್’ ಅನ್ನು ನಿಲ್ಲಿಸಿದೆ ಅಂತ ಹೇಳಬಹುದು.
ಇದನ್ನೂ ಓದಿ: Fake job: ನಕಲಿ ಕೆಲಸಗಳ ಬಲೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಉಪಾಯ
ಶಾಶ್ವತವಾಗಿ ‘ವರ್ಕ್ ಫ್ರಮ್ ಹೋಮ್’ ನೀಡಿದ 10 ಕಂಪನಿಗಳ ಪಟ್ಟಿ:
1. ಟ್ವಿಟರ್
ಟ್ವಿಟ್ಟರ್ ಕಂಪನಿಯ ಸಿಇಒ ಆದ ಪರಾಗ್ ಅಗರ್ವಾಲ್ ಅವರು ತಮ್ಮ ಟ್ವೀಟ್ ನಲ್ಲಿ "ಶಾಶ್ವತವಾಗಿ" ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.
"ನೀವು ಎಲ್ಲಿ ಕೆಲಸ ಮಾಡುತ್ತೀರಿ, ವ್ಯವಹಾರಕ್ಕಾಗಿ ಪ್ರಯಾಣಿಸುವುದು ಸುರಕ್ಷಿತವಾಗಿದೆಯೇ ಮತ್ತು ನೀವು ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ ಎಂಬುದರ ಬಗ್ಗೆ ನಿರ್ಧಾರಗಳು ನಿಮ್ಮದಾಗಿರಬೇಕು" ಎಂದು ಪರಾಗ್ ಈ ವರ್ಷದ ಆರಂಭದಲ್ಲಿ ಟ್ವೀಟ್ ಮಾಡಿದ್ದರು.
2. ಟಾಟಾ ಸ್ಟೀಲ್
ರತನ್ ಟಾಟಾ ನೇತೃತ್ವದ ಟಾಟಾ ಸ್ಟೀಲ್ ಕೂಡ ನವೆಂಬರ್ 2020 ರಿಂದ ಜಾರಿಗೆ ಬಂದಿರುವಂತೆ ‘ವರ್ಕ್ ಫ್ರಮ್ ಹೋಮ್’ ನೀತಿಯನ್ನು ಆಯ್ಕೆ ಮಾಡಿಕೊಂಡಿದೆ. ಟಾಟಾ ಸ್ಟೀಲ್ ಇದನ್ನು 'ಚುರುಕಾದ ಕೆಲಸದ ಮಾದರಿ' ಎಂದು ಹೆಸರಿಸಿದೆ. ಇದು ಉದ್ಯೋಗಿಗಳಿಗೆ ವರ್ಷದಲ್ಲಿ 365 ದಿನಗಳವರೆಗೆ ಮನೆಯಲ್ಲಿಯೇ ಕುಳಿತುಕೊಂಡು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಬಹುದು.
3. ಸ್ವಿಗ್ಗಿ
ಸ್ವಿಗ್ಗಿ ಕಂಪನಿಯಲ್ಲಿ ಹಲವಾರು ಜವಾಬ್ದಾರಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಯಾವುದೇ ಸ್ಥಳದಿಂದ ಕೆಲಸ ಮಾಡುವ ಶಾಶ್ವತ ನೀತಿಯನ್ನು ಘೋಷಿಸಿತ್ತು.
ಈ ನೀತಿಯ ಅಡಿಯಲ್ಲಿ, ಕಾರ್ಪೊರೇಟ್, ಕೇಂದ್ರ ವ್ಯವಹಾರ ಕಾರ್ಯಗಳು ಮತ್ತು ತಂತ್ರಜ್ಞಾನದಂತಹ ತಂಡಗಳ ಉದ್ಯೋಗಿಗಳು ದೂರದಿಂದಲೇ ಕಚೇರಿಯ ಕೆಲಸ ಮಾಡುತ್ತಾರೆ, ಮತ್ತು ಮೂರು ತಿಂಗಳಿಗೊಮ್ಮೆ ಒಂದು ವಾರದವರೆಗೆ ಮಟ್ಟಕ್ಕೆ ಮೂಲ ಸ್ಥಳಗಳಲ್ಲಿ ಭೇಟಿ ಆಗುತ್ತಾರೆ ಎಂದು ಹೇಳಲಾಗಿದೆ.
4. ಸ್ಪಾಟಿಫೈ
ಫೆಬ್ರವರಿ 14, 2021 ರಂದು, ಸ್ಪಾಟಿಫೈ ತನ್ನ ಉದ್ಯೋಗಿಗಳಿಗೆ ಹೊಸ ನೀತಿಯನ್ನು ಘೋಷಿಸಿತ್ತು. ಈ ಸ್ವೀಡನ್ ಆಡಿಯೊ ಸ್ಟ್ರೀಮಿಂಗ್ ಕಂಪನಿಯು ಇನ್ನು ಮುಂದೆ ಕೆಲಸ ಮಾಡಲು ಯಾರೂ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಈಗಾಗಲೇ ದೃಢಪಡಿಸಿದೆ.
5. ಎಸ್‌ಎಪಿ (SAP)
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಉದ್ಯೋಗಿಗಳಿಂದ ರಿಮೋಟ್ ವರ್ಕಿಂಗ್ ಅನುಭವದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ನಂತರ, ವ್ಯವಹಾರ ಸಾಫ್ಟ್‌ವೇರ್ ಕಂಪನಿ ಎಸ್‌ಎಪಿ ವಿಶ್ವದಾದ್ಯಂತ ತನ್ನ 100,000 ಉದ್ಯೋಗಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ಕೆಲಸದ ಮಾದರಿಯನ್ನು ಘೋಷಿಸಿದೆ.
ಇದನ್ನೂ ಓದಿ: Tailor Jobs in Bengaluru: ಟೈಲರಿಂಗ್ನಲ್ಲಿ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಕೆಲಸ
6. ಫ್ಯೂಜಿಟ್ಸು (Fujitsu)
ಕರೋನ ವೈರಸ್ ಸಾಂಕ್ರಾಮಿಕ ರೋಗದ "ಹೊಸ ಸಾಮಾನ್ಯ"ಕ್ಕೆ ಹೊಂದಿಕೊಳ್ಳುವುದರಿಂದ ತಂತ್ರಜ್ಞಾನ ಸಂಸ್ಥೆ ಫ್ಯೂಜಿಟ್ಸು ಜಪಾನ್ ನಲ್ಲಿ ತನ್ನ ಕಚೇರಿ ಸ್ಥಳವನ್ನು ಅರ್ಧಕ್ಕೆ ಇಳಿಸುವುದಾಗಿ ಘೋಷಿಸಿತ್ತು.
ಸಂಸ್ಥೆಯ 'ವರ್ಕ್ ಲೈಫ್ ಶಿಫ್ಟ್' ಕಾರ್ಯಕ್ರಮವು ದೇಶದ 80,000 ಕಾರ್ಮಿಕರಿಗೆ ಅಭೂತಪೂರ್ವ ನಮ್ಯತೆಯನ್ನು ನೀಡುತ್ತದೆ ಎಂದು ಅದು ಹೇಳಿತ್ತು. ಹೊಸ ನೀತಿಯ ಅಡಿಯಲ್ಲಿ, ಕಂಪನಿಯು ಇದನ್ನು ಅನುಮತಿಸಿದೆ.
7. ಅಟ್ಲಾಸ್ಸಿಯನ್
ಅಟ್ಲಾಸಿಯನ್ 80 ಬಿಲಿಯನ್ ಡಾಲರ್ ಮೌಲ್ಯದ ಆಸ್ಟ್ರೇಲಿಯನ್ ಟೆಕ್ ಕಂಪನಿ. ಇದು ತನ್ನ ಉದ್ಯೋಗಿಗಳಿಗೆ ಎಲ್ಲಿಂದಲೇ ಆಗಲಿ ಕೆಲಸ ಮಾಡಲು ಅನುಮತಿಸುತ್ತದೆ. ಕಂಪನಿಯ ಹೊಸ 'ಟೀಮ್ ಎನಿವೇರ್' ನೀತಿಯ ಅಡಿಯಲ್ಲಿ, ಉದ್ಯೋಗಿಗಳು ವರ್ಷಕ್ಕೆ ಕೇವಲ 4 ಬಾರಿ ಅಷ್ಟೇ ಕಚೇರಿಗೆ ಬಂದು ಹೋಗಬೇಕು ಅಂತ ಹೇಳಿದ್ದಾರೆ.
8. ಅವೆಬರ್
ವಿಶ್ವದಾದ್ಯಂತ 100,000 ಕ್ಕೂ ಹೆಚ್ಚು ಸಣ್ಣ ವ್ಯಾಪಾರ ಗ್ರಾಹಕರನ್ನು ಹೊಂದಿರುವ ಇ-ಮೇಲ್ ಮಾರ್ಕೆಟಿಂಗ್ ಸೇವಾ ಪೂರೈಕೆದಾರರು ಇತ್ತೀಚೆಗೆ ಸಂಪೂರ್ಣವಾಗಿ ಆಫೀಸಿನ ಹೊರಗಿಂದ ಕೆಲಸ ಮಾಡುವ ಮೊದಲ ತಂಡವನ್ನು ಬಲಪಡಿಸುವ ತನ್ನ ನಿರ್ಧಾರವನ್ನು ಘೋಷಿಸಿದರು.
ಅವೆಬರ್ ಕಂಪನಿ, ತಂಡದ ಸದಸ್ಯರಿಗೆ ನೀಡಿದ ಪ್ರಕಟಣೆಯಲ್ಲಿ, ಅವೆಬರ್ ನ ಸ್ಥಾಪಕ ಮತ್ತು ಸಿಇಒ ಆದ ಟಾಮ್ ಕುಲ್ಜರ್, ಈ ನಿರ್ಧಾರವು ಮುಂಬರುವ ವರ್ಷಗಳಲ್ಲಿ ಕಂಪನಿ, ಅದರ ತಂಡ ಮತ್ತು ಅದರ ಗ್ರಾಹಕರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.
9. ಅಕ್ವೆಂಟ್
ಕಳೆದ ವರ್ಷದ ಆರಂಭದಲ್ಲಿ, ಲಾಸ್ ಏಂಜಲೀಸ್, ನ್ಯೂಪೋರ್ಟ್ ಬೀಚ್, ಸ್ಯಾನ್ ಡಿಯಾಗೋ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಿಲಿಕಾನ್ ವ್ಯಾಲಿಯಲ್ಲಿ ಕಚೇರಿಗಳನ್ನು ಹೊಂದಿರುವ ಸೃಜನಶೀಲ-ಪ್ರತಿಭೆಯ ಸಿಬ್ಬಂದಿ ಏಜೆನ್ಸಿಯಾದ ಅಕ್ವೆಂಟ್, ತನ್ನ 720 ಉದ್ಯೋಗಿಗಳಲ್ಲಿ ಹೆಚ್ಚಿನವರನ್ನು ‘ವರ್ಕ್ ಫ್ರಮ್ ಹೋಮ್’ ಮಾದರಿಗೆ ಪರಿವರ್ತಿಸುವುದರಿಂದ ದೇಶಾದ್ಯಂತ ತನ್ನ ಬಹುತೇಕ ಎಲ್ಲಾ ಸ್ಥಳಗಳಲ್ಲಿದ್ದಂತಹ ಕಚೇರಿಗಳನ್ನು ಮುಚ್ಚುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: Mangaluru Jobs: SDM ಕಾಲೇಜಿನಲ್ಲಿ ಇದೆ ಉದ್ಯೋಗಾವಕಾಶ; 4 ದಿನದೊಳಗೆ ಅಪ್ಲೈ ಮಾಡಿ
10. ಥ್ರೀ ಎಮ್ (3M)
ಥ್ರೀ ಎಮ್ (3M) ಕಂಪನಿಯು ತನ್ನ ಉದ್ಯೋಗಿಗಳಿಗೆ ಕೆಲಸ ಮಾಡುವ ನೀತಿಯಲ್ಲಿ ನಮ್ಯತೆಯನ್ನು ಒದಗಿಸುತ್ತಿದೆ. ಎಂದರೆ ಉದ್ಯೋಗಿಗಳು ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು. ಆದರೆ ಅವರು ಆರಿಸಿಕೊಂಡ ಮಾದರಿ ಉದ್ಯೋಗಿ ಮಾಡುವ ಕೆಲಸಕ್ಕೆ ತೊಂದರೆ ಆಗಬಾರದು ಅಷ್ಟೇ. ಎಂದರೆ ಕಂಪನಿಯ ಕೆಲಸಕ್ಕೆ ಯಾವುದೇ ಅಡ್ಡಿ ಆತಂಕಗಳು ಬರಬಾರದು, ಸರಾಗವಾಗಿ ನಡೆದುಕೊಂಡು ಹೋಗಬೇಕು ಎಂದು ತನ್ನ ಹೇಳಿಕೆಯಲ್ಲಿ ಕಂಪನಿಯು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ