ಪದವೀಧರರಿಗೆ ಗುಡ್ ನ್ಯೂಸ್: ಟಾಪ್ 10 ಕೈಗಾರಿಕೆಗಳಲ್ಲಿದೆ ಉದ್ಯೋಗಾವಕಾಶ

ಯು.ಎಸ್‌ ನಲ್ಲಿ ಹೊಸ ಪದವೀಧರರಿಗೆ ಆಡ್ಜುನಾ 63,000 ಉದ್ಯೋಗಾವಕಾಶಗಳನ್ನು ಒದಗಿಸಿದೆ. ವರ್ಷಕ್ಕೆ ಸರಾಸರಿ, $57,000 ವೇತನವನ್ನು ಪಾವತಿಸುತ್ತಿದೆ. ಸ್ನಾತಕೋತ್ತರ ಪದವಿಗಾಗಿ, ಕಾರ್ಮಿಕ ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕ ಮತ್ತು ಹೆಚ್ಚು ಲಾಭದಾಯಕವೆಂದು ತೋರುತ್ತದೆ.

JOB

JOB

 • Share this:

  ಕಳೆದ ವರ್ಷದ ಮಾರ್ಚ್‌ನಲ್ಲಿ ಕೋವಿಡ್‌ ಕಾರಣದಿಂದಾಗಿ 2020 ರ ಬ್ಯಾಚ್ ವಿದ್ಯಾರ್ಥಿಗಳು ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ ಹಾಗೂ ಅನಿಶ್ಚಿತ ಉದ್ಯೋಗ ಮಾರುಕಟ್ಟೆಯು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. 2020 ರ ಕಾಲೇಜು ಪದವೀಧರರಲ್ಲಿ ಅರ್ಧದಷ್ಟು ಜನರು ಇನ್ನೂ ಕೆಲಸ ಹುಡುಕುತ್ತಿದ್ದಾರೆ. ಮತ್ತು ಕಂಪನಿಗಳು ಪುನಃ ತೆರೆಯುವ ಪ್ರಯತ್ನಗಳು ಆಶಾದಾಯಕವಾಗಿ ಕಾಣುತ್ತವೆಯಾದರೂ, ಈ ವರ್ಷದ ಕಾಲೇಜು ಪದವೀಧರರು ಉದ್ಯೋಗವನ್ನು ಪಡೆದುಕೊಳ್ಳಲು ಇನ್ನೂ5 ತಿಂಗಳು ಕಾಯಬೇಕಾಗುತ್ತದೆ ಎಂದು ಮಾನ್ಸ್ಟರ್ ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. ಆದರೆ ಒಂದು ಖುಷಿ ವಿಷಯವೆಂದರೆ ಕೆಲವು ಕೈಗಾರಿಕೆ ಕಂಪನಿಗಳು ಹೆಚ್ಚಿನ ಸಂಖ್ಯೆಯ ಹೊಸ ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ನೋಡುತ್ತಿವೆ.


  ಉದ್ಯೋಗಾಕಾಂಕ್ಷಿಗಳ ಹುಡುಕಾಟ ನಡೆಸುತ್ತಿರುವ ಎಂಜಿನ್ ಆಡ್ಜುನಾ, ಪ್ರವೇಶ ಮಟ್ಟದ ಉದ್ಯೋಗ ಸ್ಥಾನಗಳಿಗಾಗಿ 6.3 ದಶಲಕ್ಷಕ್ಕೂ ಹೆಚ್ಚಿನ ಉದ್ಯೋಗ ಅವಕಾಶದ ಪಟ್ಟಿಗಳನ್ನು ಮಾಡಿದೆ ಮತ್ತು ನಂತರ ಪದವಿ ಪಡೆಯದ ವ್ಯಕ್ತಿಗಳಿಗೂ ಉದ್ಯೋಗ ಸ್ಥಾನಗಳನ್ನು ನೀಡಲು ಮುಂದಾಗಿದೆ.


  ಯು.ಎಸ್‌ ನಲ್ಲಿ ಹೊಸ ಪದವೀಧರರಿಗೆ ಆಡ್ಜುನಾ 63,000 ಉದ್ಯೋಗಾವಕಾಶಗಳನ್ನು ಒದಗಿಸಿದೆ. ವರ್ಷಕ್ಕೆ ಸರಾಸರಿ, $57,000 ವೇತನವನ್ನು ಪಾವತಿಸುತ್ತಿದೆ. ಸ್ನಾತಕೋತ್ತರ ಪದವಿಗಾಗಿ, ಕಾರ್ಮಿಕ ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕ ಮತ್ತು ಹೆಚ್ಚು ಲಾಭದಾಯಕವೆಂದು ತೋರುತ್ತದೆ. ಆದರೆ ಸ್ನಾತಕೋತ್ತರ ಪದವೀಧರರಿಗೆ ಕೇವಲ 6,500 ಉದ್ಯೋಗಗಳು ಮಾತ್ರ ಲಭ್ಯವಿವೆ. ಸ್ನಾತಕೋತ್ತರರು ವರ್ಷಕ್ಕೆ ಸರಾಸರಿ, $72,000 ವೇತನವನ್ನು ನಿರೀಕ್ಷಿಸಬಹುದು. ಅಡ್ಜುನಾ ಸಹ-ಸಂಸ್ಥಾಪಕ ಆಂಡ್ರ್ಯೂ ಹಂಟರ್ ಸಿಎನ್‌ಬಿಸಿ ಮೇಕ್ ಇಟ್‌ಗೆ, "ಕಳೆದ ವರ್ಷಕ್ಕಿಂತ ಈ ಬೇಸಿಗೆಯಲ್ಲಿ ಪದವೀಧರರಿಗೆ ಎರಡು ಪಟ್ಟು ಹೆಚ್ಚು ಅವಕಾಶಗಳನ್ನು ನಾವು ನೀಡುತ್ತಿದ್ದೇವೆ" ಎಂದು ಹೇಳಿದರು. ಹೆಚ್ಚಿದ ಆರ್ಥಿಕ ವಿಶ್ವಾಸದ ಸಹಾಯದಿಂದ, ಉದ್ಯೋಗ ಮಾರುಕಟ್ಟೆ ಕಾರ್ಯನಿರತವಾಗಿದೆ, ಇದರ ಪರಿಣಾಮವಾಗಿ 125% ಉದ್ಯೋಗಾವಕಾಶಗಳನ್ನು ಹೆಚ್ಚಳವಾಗಿದೆ ಎಂದು ಆಂಡ್ರ್ಯೂ ಹೇಳಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ, ಲಾಜಿಸ್ಟಿಕ್ಸ್, ಗೋದಾಮು ಮತ್ತು ಇತರ ಕೈಗಾರಿಕೆಗಳು; ಉತ್ಪಾದನೆ; ವ್ಯಾಪಾರ ಮತ್ತು ನಿರ್ಮಾಣ; ಐಟಿ ಮತ್ತು ಮಾರಾಟಗಳು ಇದೀಗ ಸುಧಾರಿಸಿಕೊಂಡಿವೆ. ಆಡ್ಜುನಾದ ಹೊಸ ಒಳನೋಟಗಳ ಪ್ರಕಾರ, ಈ ಕೈಗಾರಿಕೆಗಳು ಇತ್ತೀಚಿನ ಪದವೀಧರರಿಗೆ ಹೆಚ್ಚಿನ ಉದ್ಯೋಗ ಖಾಲಿ ಹುದ್ದೆಗಳನ್ನು ಒದಗಿಸುತ್ತವೆ, ಮತ್ತು ಪ್ರವೇಶ ಮಟ್ಟದ ಹುದ್ದೆಗಳಲ್ಲಿ ಆರೋಗ್ಯ ಸೇವೆ ಅಗ್ರಸ್ಥಾನದಲ್ಲಿದೆ.


  ಅಡ್ಜುನಾದ ಜೂನ್2021ರ ಮಾಹಿತಿಯ ಪ್ರಕಾರ,ಕಾಲೇಜು ಪದವೀಧರನ್ನು ನೇಮಿಸಿಕೊಳ್ಳಲು ಬಯಸುವ ಟಾಪ್10ಕೈಗಾರಿಕೆಗಳು ಇವು:
  • ಆರೋಗ್ಯ ರಕ್ಷಣೆ ಮತ್ತು ನರ್ಸಿಂಗ್

  • ಲಾಜಿಸ್ಟಿಕ್ಸ್ ಮತ್ತು ಗೋದಾಮು

  • ಐಟಿ

  • ಮಾರಾಟ

  • ಎಂಜಿನಿಯರಿಂಗ್

  • ಅಕೌಂಟಿಂಗ್ ಮತ್ತು ಹಣಕಾಸು

  • ಮಾನವ ಸಂಪನ್ಮೂಲ ಮತ್ತು ನೇಮಕಾತಿ

  • ಉತ್ಪಾದನೆ

  • ಗ್ರಾಹಕ ಸೇವೆಗಳು

  • ವೈಜ್ಞಾನಿಕ ಮತ್ತು ಗುಣಮಟ್ಟದ ಭರವಸೆ


  "ಆರೋಗ್ಯ ರಕ್ಷಣೆ ಮತ್ತು ನರ್ಸಿಂಗ್ ಪದವೀಧರರಿಗೆ ಇರುವ ಅವಕಾಶಗಳ ಸಂಖ್ಯೆ ಇತರ ಎಲ್ಲ ಕೈಗಾರಿಕೆಗಳಿಂದ ತುಂಬಾ ಜಾಸ್ತಿಯಿದೆ" . ಈ ಪ್ರತಿಯೊಂದು ಉದ್ಯಮದಲ್ಲಿ 19,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಆಡ್ಜುನಾ ಕಂಡುಹಿಡಿದಿದೆ ಎಂದು ಹಂಟರ್ ಹೇಳಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ, ಕಳೆದ 16 ತಿಂಗಳುಗಳಲ್ಲಿ ಸಾಮಾನ್ಯ ಬೇಡಿಕೆಯ ಹೆಚ್ಚಳವು ಹಾಗೂ ಒತ್ತಡವು ಅನೇಕ ವೈದ್ಯಕೀಯ ವೃತ್ತಿಪರರನ್ನು ತಮ್ಮ ಉದ್ಯೋಗವನ್ನು ತೊರೆಯುವಂತೆ ಮಾಡಿದೆ ಎಂದು ಹಂಟರ್ ಹೇಳಿದರು. ಇದರಿಂದಾಗಿ ಉದ್ಯಮವು ಅಸ್ತಿತ್ವದಲ್ಲಿರುವ ಪ್ರತಿಭೆಗಳ ಕೊರತೆಯನ್ನು ಎದುರಿಸುತ್ತಿದೆ, ಸಾಂಕ್ರಾಮಿಕವು ಸಮಸ್ಯೆಗಳನ್ನು ಹೆಚ್ಚು ಮಾಡುತ್ತಿದೆ ಮತ್ತು ಆರೋಗ್ಯ ತಜ್ಞರಿಗೆ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ಹಂಟರ್‌ ತಿಳಿಸಿದ್ದಾರೆ. "ನೋಂದಾಯಿತ ದಾದಿಯರಿಗೆ ಹೆಚ್ಚಿನ ಬೇಡಿಕೆಯಿದೆ, ಜೊತೆಗೆ ಔಷಧಿಕಾರರು, ದತ್ತಾಂಶ ತಜ್ಞರು ಮತ್ತು ಕ್ಲಿನಿಕಲ್ ಸಂಶೋಧಕರು ಸಹ ಅವಕಾಶಗಳನ್ನು ಹೊಂದಿದ್ದಾರೆ". "ಎಂದು ಹಂಟರ್ ಹೇಳಿದ್ದಾರೆ. ಪದವಿಯನ್ನು ಹೊಂದಿಲ್ಲದ ಉದ್ಯೋಗಾಕಾಂಕ್ಷಿಗಳಿಗೆ ವ್ಯಾಪಕ ಶ್ರೇಣಿಯ ಪ್ರವೇಶ ಮಟ್ಟದ ಅವಕಾಶಗಳ ಅಗತ್ಯವಿರುತ್ತದೆ, 319,000 ಕ್ಕೂ ಹೆಚ್ಚು ಉದ್ಯೋಗಳು ಲಭ್ಯವಿದೆ ಎಂದು ಹಂಟರ್‌ ತಿಳಿಸಿದ್ದಾರೆ.

  First published: