ನಿದ್ದೆ ಮಾಡೋದು, ಸಿನಿಮಾ ನೋಡೋದಕ್ಕೂ ಸಂಬಳ...ಇಲ್ಲಿವೆ ಪ್ರಪಂಚದ ವಿಚಿತ್ರ ಉದ್ಯೋಗಗಳು!

Dog food taster: ನಾಯಿಗೆ ನೀಡುವ ಆಹಾರದ ರುಚಿ ಪರೀಕ್ಷಿಸುವ ಉದ್ಯೋಗವಿದು. ಆಹಾರ ರುಚಿ ಇದೆಯಾ? ಇಲ್ಲವೇ? ಎಂದು ಸವಿದು ಹೇಳಬೇಕು. ಉದ್ಯೋಗಕ್ಕೆ ತಕ್ಕ ಸಂಬಳ ನೀಡಲಾಗುತ್ತಂತೆ.

Netflix

Netflix

 • Share this:
  ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ ಖಾಲಿ ಕೂತ ಕೈಗಳು ಅದೆಷ್ಟೋ ಇವೆ. ಇನ್ನು ಕೆಲವರು ಮಾಡಿದ ಕೆಲಸವನ್ನು ಅದೆಷ್ಟೂ ಅಂತ ಮಾಡುವುದು ಎಂದು ಗೊಣಗುವವರು ಇದ್ದಾರೆ. ಒಟ್ಟಿನಲ್ಲಿ ದುಡಿದರೆ ಮಾತ್ರ ಹೊಟ್ಟೆಗೆ ಮತ್ತು ಬಟ್ಟೆಗೆ. ಪುರುಷನಾದವನು ದುಡಿಯಬೇಕು ಎಂಬ ಮಾತಿಗೆ. ಹಾಗಾಗಿ ಪುರುಷನಾದವನು ದುಡಿಯತ್ತಾ ಸಂಸಾರ ಸರಿ ದೂಗಿಸಿಕೊಂಡು ಮುನ್ನಡೆಸುವ ಜವಬ್ದಾರಿ ಅವನ ಮೇಲಿರುತ್ತೆ. ಹಾಗಾಗಿ ಕೆಲಸ ಯಾವುದಾದರೆನು ಸೈ ಎಂದು ಮಾಡುತ್ತಾರೆ. ಅಂದಹಾಗೆಯೇ ಇಲ್ಲಿ ಕೆಲವು ಉದ್ಯೋಗಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ ಇದು ಅಂತಿಂತ ಉದ್ಯೋಗ ಅಲ್ಲ. ಈ ವಿಚಿತ್ರ ಉದ್ಯೋಗದ ಬಗ್ಗೆ ತಿಳಿಯಬೇದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ!.

  ಶ್ವಾನ ನೀಡುವ ಆಹಾರದ ರುಚಿ ಸವಿಯಬೇಕು

  ನಾಯಿಗೆ ನೀಡುವ ಆಹಾರದ ರುಚಿ ಪರೀಕ್ಷಿಸುವ ಉದ್ಯೋಗವಿದು. ಆಹಾರ ರುಚಿ ಇದೆಯಾ? ಇಲ್ಲವೇ? ಎಂದು ಸವಿದು ಹೇಳಬೇಕು. ಉದ್ಯೋಗಕ್ಕೆ ತಕ್ಕ ಸಂಬಳ ನೀಡಲಾಗುತ್ತಂತೆ.

  ಸ್ಕೂಬಾ ಡೈವಿಂಗ್​ ಪಿಜ್ಜಾ ಡೆಲಿವರಿ

  ಫ್ಲೋರಿಡಾದಲ್ಲಿ ನೀರಿನೊಳಗೆ ಹೋಟೆಲ್​ವೊಂದಿಗೆ. ಅಲ್ಲಿ ಪಿಜ್ಜಾ ಡೆಲಿವರಿ ಮಾಡಲು ಉದ್ಯೋಗ ಆಕ್ಷಾಂಕಿಗಳಿಗೆ ಅವಕಾಶ ನೀಡಿದೆ.  ಇಲ್ಲಿ ಕೆಲಸಕ್ಕೆ ಸೇರಿದ ವ್ಯಕ್ತಿ ಸ್ಕೂಬಾಗೆ ಇಳಿದು ಪಿಜ್ಜಾವನ್ನು ಸಾಗರಕ್ಕೆ ಬರಬೇಕು.

  ಹಾವಿನ ವಿಷ ತೆಗೆಯುವ ಕೆಲಸ

  ವಿಷಪೂರಿತ ಹಾವುಗಳ ವಿಷವನ್ನು ಸಂಗ್ರಹಿಸಲಾಗುತ್ತದೆ. ಇದು ಔಷಧಿಗಳಿ ತಯಾರಿಕೆಗೆ ಬಳಕೆಯಾಗುತ್ತದೆ. ಆದರೆ ವಿಷಪೂರಿತ ಹಾವುಗಳಿಂದ ವಿಷ ತೆಗೆಯಲು ಎಂಟೆದೆ ಭಂಟನ ಧೈರ್ಯ ಇರಬೇಕು. ಹೆಚ್ಚು ಕಮ್ಮಿಯಾದರೆ ಹಾವಿನಿಂದ ಕಚ್ಚಿಸಕೊಂಡು ಸಾಯಲುಬಹುದು. ಹಾಗಾಗಿ ಧೈರ್ಯಶಾಲಿಗಳಿಗಾಗಿ ಹೀಗೊಂದು ಉದ್ಯೋಗವಿದೆ ಎಂದರೆ ನಂಬುತ್ತೀರಾ?.

  ನೆಟ್​ಫ್ಲಿಕ್ಸ್​ ವೀಕ್ಷಣೆ

  ನೆಟ್​ಫ್ಲಿಕ್ಸ್​ಗೆ ಹಣ ನೀಡಿ ಒಂದು ವ್ಯಕ್ತಿ ಒಂದು ದಿನ  ಎಷ್ಟು ಕಕಾರ್ಯಕ್ರಮ ವೀಕ್ಷಿಸಲಾಗುತ್ತದೆ ಎಂದು ತಿಳಿಯಲು ಈ ರೀತಿಯ ಉದ್ಯೋಗ ಸೃಷ್ಟಿಸಲಾಗಿದೆ. ಉದ್ಯೋಗಕ್ಕೆ ತಕ್ಕಂ ಸಂಬಳವೂ ಇದೆಯಂತೆ.

  ಮಲಗುವ ಕೆಲಸ

  ಹಾಸಿಗೆ ಕಂಪನಿಗಳು ಮಲಗುವ ಕೆಲಸವನ್ನು ಸೃಷ್ಟಿಸಿದೆ. ಕಂಪನಿಗಳು ತಯಾರಿಸುವ ಹಾಸಿಗೆಯಲ್ಲಿ ಮಲಗುವ ಮೂಲಕ ನಿದ್ರೆ ಹೇಗೆ ಬರುತ್ತದೆ ಎಂಬ ಬಗ್ಗೆ ಅಭಿಪ್ರಾಯ ತಿಳಿಸಬೇಕಿದೆ.
  Published by:Harshith AS
  First published: