Mattress Tester: ನಿದ್ರೆ ಮಾಡಿದರೆ ಸಾಕು 25 ಲಕ್ಷ ರೂ ಸಂಬಳ! ಹೀಗೊಂದು ಕೆಲಸಕ್ಕೆ ಉದ್ಯೋಗಿಗಳು ಬೇಕಂತೆ!

Crafted Beds: ಇದು ಸಂಪೂರ್ಣವಾಗಿವಾಗಿ ವಿಚಿತ್ರ ಕೆಲಸವೆಂದೆನಿಬಹುದು. ಆದರೆ ಬೆಡ್​ ಗುಣಮಟ್ಟ ಮತ್ತು ಗ್ರಾಹಕರ ಸ್ಥಿತಿಗತಿ ಅರ್ಥಮಾಡಿಕೊಂಡು ಕಂಪನಿ ಈ ಕೆಲಸಕ್ಕೆ ಉದ್ಯೋಗಿ ನೇಮಕ ಮಾಡುತ್ತಿದೆ.

ಸಾಂದರ್ಭಿಕ ಚಿತ್ರ (Photo: Google)

ಸಾಂದರ್ಭಿಕ ಚಿತ್ರ (Photo: Google)

 • Share this:
  ಕೆಲವರಿಗೆ ಇಂಜಿನಿಯರ್​ ಆಗಬೇಕು, ಡಾಕ್ಟರ್​ ಆಗಬೇಕು, ಪೈಲೆಟ್​ ಆಗಬೇಕು ಎಂಬ ಕನಸಿರುತ್ತದೆ. ಆ ಕನಸನ್ನು ನನಸು ಮಾಡುವ ಮೂಲಕ ತಮ್ಮ ಕೆಲಸದತ್ತ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಕೆಲಸವೇ ಕೈಡಿಯುವುದಿಲ್ಲ. ಮತ್ತೆ ಹಲವರು ಕೆಲಸವೇ ಬೇಡವೆಂದು ಮನೆಯಲ್ಲಯೇ ಆರಾಮಾಗಿ ಟಿವಿ ನೋಡುತ್ತಾ, ತಿನ್ನುತ್ತಾ , ಮಲಗುತ್ತಾ ಬಿದ್ದಿರುತ್ತಾರೆ. ಆದರೆ ಅಂತವರಿಗಾಗಿಯೂ ಇಲ್ಲೊಂದು ಕನಸಿನ ಉದ್ಯೋಗವಿದೆ. ಅದೇನೆಂದರೆ ವ್ಯಕ್ತಿ ಮಲಗಬೇಕು ಮತ್ತು ಟಿವಿ ನೋಡುವ ಕೆಲಸವಾಗಿದೆ. ಮಾತ್ರವಲ್ಲದೆ ವಾರ್ಷಿಕವಾಗಿ ಸಂಬಳವನ್ನು ಪಡೆಯಬಹುದಾಗಿದೆ.

  ಅಚ್ಚರಿಯಾದರು ನಿಜ. ಸಾಕಷ್ಟು ಜನರಿಗೆ ಈ ಉದ್ಯೋಗದ ಬಗ್ಗೆ ನಂಬಿಕೆ ಇರಲಿಕ್ಕಿಲ್ಲ. ಆದರೆ ಯುಕೆಯ ಕಂಪನಿಯೊಂದು ಇಂತಹದೊಂದು ಕೆಸಲವನ್ನು ಸೃಷ್ಟಿಸಿದೆ. ಮತ್ತೊಂದು ವಿಚಾರವೆಂದರೆ ಕಚೇರಿಗೆ ತೆರಳದೆ ಉದ್ಯೋಗಿಗಳು ತಮ್ಮ  ಮನೆಯಲ್ಲಿಯೇ ಈ ಕೆಲಸ ಮಾಡಬಹುದು.

  ವಾರ್ಷಿಕ 25 ಲಕ್ಷ ರೂ ಸಂಬಳ!

  ‘ದಿ ಸನ್’​ ವೆಬ್​ಸೈಟ್​ ವರದಿ ಮಾಡಿದ ಪ್ರಕಾರ, ಐಷಾರಾಮಿ ಬೆಡ್​ ಕಂಪನಿ ‘ಕ್ರಾಫ್ಟೆಡ್​ ಬೆಡ್ಸ್‘​ ಮ್ಯಾಟ್ರೆಸ್​ ಟೆಸ್ಟರ್​ ಅನ್ನು ನೇಮಿಸಿಕೊಳ್ಳುತ್ತಿದೆ. ಅಂದರೆ ನೇಮಕಗೊಂಡ ಉದ್ಯೋಗಿ ಹಾಸಿಗೆಯಲ್ಲಿ ಮಲಗುವ ಮೂಲಕ ಅದರಲ್ಲಿ ಬಗ್ಗೆ ಸರಿಯಾದ ರಿವ್ಯೂವ್​ ನೀಡಬೇಕು. ಈ ಕೆಲಸಕ್ಕಾಗಿ ಕಂಪನಿ  ವರ್ಷಕ್ಕೆ 25 ಲಕ್ಷ ಸಂಬಳ ನೀಡುತ್ತದೆ. ಹಾಗಾಗಿ ವಾರಕ್ಕೊಮ್ಮ ಉದ್ಯೋಗಿ ಹಾಸಿಗೆ ಗುಣಮಟ್ಟವನ್ನು ಪರೀಕ್ಷಿಸಬೇಕಾಗುತ್ತೆ.

  ಕ್ರಾಫ್ಟೆಡ್​ ಬೆಡ್ಸ್  ತನ್ನ ಕಂಪನಿಯ ಹಾಸಿಗೆಗಳ ಖರೀದಿದಾರರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬಾರದೆಂದು ಬಯಸುತ್ತದೆ, ಆದ್ದರಿಂದ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಅವರು ಎಲ್ಲಾ ಪರೀಕ್ಷೆಗಳನ್ನು ಮಾಡಲು ಬಯಸುತ್ತಾರೆ. ಇದಕ್ಕಾಗಿ, 'ಮ್ಯಾಟ್ರೆಸ್ ಟೆಸ್ಟರ್' ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗದಲ್ಲಿರುವ ವ್ಯಕ್ತಿಯು ಇಡೀ ವಾರ 37.5 ಗಂಟೆಗಳ ಕಾಲ ಹಾಸಿಗೆಯ ಮೇಲೆ ಮಲಗಬೇಕಾಗುತ್ತದೆ.

  ಇದನ್ನು ಓದಿ: ಹುಟ್ಟಿದಾಗ ಹೆಣ್ಣು ಮಗು ಅಂದ್ರು, ಡಿಸ್ಚಾರ್ಜ್ ವೇಳೆ ಗಂಡು ಮಗು ಕೊಟ್ರು.. Mangalore Hospital ಯಡವಟ್ಟು!

  ಕ್ರಾಫ್ಟೆಡ್​ ಬೆಡ್ಸ್ ಮಾರ್ಕೆಟಿಂಗ್ ಮ್ಯಾನೇಜರ್, ಬ್ರ್ಯಾನ್ ಡಿಲ್ಲನ್ ಅವರು "ಗ್ರಾಹಕರ ತೃಪ್ತಿಯೇ ನಮಗೆ ಹೆಚ್ಚು ಮುಖ್ಯವಾಗಿದೆ. ಅದಕ್ಕಾಗಿಯೇ ನಾವು ಹಾಸಿಗೆಗಳ ಗುಣಮಟ್ಟವನ್ನು ತಿಳಿಯಲು 'ಮ್ಯಾಟ್ರೆಸ್ ಟೆಸ್ಟರ್' ಅನ್ನು ನೇಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  ಈ ಕೌಶಲ್ಯಗಳನ್ನು ಹೊಂದಿರಬೇಕು

  ಇದು ಸಂಪೂರ್ಣವಾಗಿವಾಗಿ ವಿಚಿತ್ರ ಕೆಲಸವೆಂದೆನಿಬಹುದು. ಆದರೆ ಬೆಡ್​ ಗುಣಮಟ್ಟ ಮತ್ತು ಗ್ರಾಹಕರ ಸ್ಥಿತಿಗತಿ ಅರ್ಥಮಾಡಿಕೊಂಡು ಕಂಪನಿ ಈ ಕೆಲಸಕ್ಕೆ ಉದ್ಯೋಗಿ ನೇಮಕ ಮಾಡುತ್ತಿದೆ.

  ಇನ್ನು ಉದ್ಯೋಗಿಗಳು ಕಚೇರಿಗೆ ಬರುವ ಅಗತ್ಯವಿಲ್ಲ. ಹಾಸಿಗೆಗಳನ್ನು ಅವರ ಮನೆಗಳಿಗೆ ತಲುಪಿಸಲಾಗುವುದು. ಅರ್ಜಿದಾರರು ಕೆಲಸ ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಬೇಕು ಎಂದು ಕಂಪನಿ ತಿಳಿಸಿದೆ.

  ಮ್ಯಾಟ್ರೆಸ್​ ಟೆಸ್ಟರ್ ಯದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಬ್ರಿಟನ್‌ನ ನಿವಾಸಿಯಾಗಿರಬೇಕು.  ಯಾವುದೇ ಹಸ್ತಕ್ಷೇಪವಿಲ್ಲದೆ ಹಾಸಿಗೆಯನ್ನು ಮಾತ್ರ ಪರೀಕ್ಷಿಸಲು ಶಕ್ತನಾಗಿರಬೇಕು. ಇದರ ಹೊರತಾಗಿ, ಅವನು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು, ಇದರಿಂದ ಅವನು ಹಾಸಿಗೆ ಪರೀಕ್ಷೆಯ ವಿಮರ್ಶೆಯನ್ನು ನಮಗೆ ಲಿಖಿತವಾಗಿ ಕಳುಹಿಸಬಹುದು ಎಂದು ಕಂಪನಿ ತಿಳಿಸಿದೆ.

  ಇದನ್ನು ಓದಿ: Dirty Girlfriend- ನನ್ನ ಗೆಳತಿ ಸ್ನಾನ ಮಾಡಲ್ಲ, ಆಕೆಯೊಂದಿಗೆ ಮಲಗೋಕೆ ಆಗ್ತಿಲ್ಲ: ಹುಡುಗನೊಬ್ಬನ ಅಳಲು

  ಬೆಂಗಳೂರು ಮೂಲದ ಕಂಪನಿ ಕೂಡ ಕಳೆದ ಕೆಲವು ವರ್ಷಗಳ ಹಿಂದೆ ಇಂತಹದೊಂದು ಕೆಸಲಕ್ಕೆ ಉದ್ಯೋಗಿಗಳನ್ನು ನೇಮಿಸುತ್ತಾ ಬಂದಿದೆ. ಆದರೆ ಅನೇಕರಿಗೆ ಇಂದೊಂದು ವಿಚಿತ್ರ ಉದ್ಯೋಗ ಎನಿಸಬಹುದು.

  ಪ್ರಪಂಚದಾದ್ಯಂತ ಹಲವು ವಿಚಿತ್ರ ಉದ್ಯೋಗಗಳಿವೆ. ಆ ಪೈಕಿಯಲ್ಲಿ ನಿದ್ರಿಸುವುದು ಮತ್ತು ಹಾಸಿಗೆ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಕೂಡ ಒಂದು ಉದ್ಯೋಗವಾಗುವ ಮೂಲಕ ಜನಪ್ರಿಯತೆ ಪಡೆದಿದೆ. ಬಹುತೇಕ ಬಂದಿ ಈ ಕೆಲಸಕ್ಕೆ ನೇಮಕಗೊಳ್ಳುತ್ತಾರೆ ಮತ್ತು ತಮ್ಮ ವಿಮರ್ಶೆಯನ್ನು ತಿಳಿಸುತ್ತಾರೆ.

  ಆದರೆ ಕಂಪನಿ ತಿಳಿಸಿದಂತೆ ಸರಿಯಾದ ನಿದ್ದೆ ಮತ್ತು ಬೆಡ್​ ಮಲಗಲು ಸೂಕ್ತವೇ ಎಂಬುದನ್ನು ಪ್ರಮುಖವಾಗಿ ತಿಳಿಸಬೇಕಾಗಿದೆ.
  Published by:Harshith AS
  First published: