• ಹೋಂ
  • »
  • ನ್ಯೂಸ್
  • »
  • Jobs
  • »
  • Good News: ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಿಂದ 60,000 ಮಹಿಳಾ ಉದ್ಯೋಗಿಗಳ ನೇಮಕಾತಿ..!

Good News: ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಿಂದ 60,000 ಮಹಿಳಾ ಉದ್ಯೋಗಿಗಳ ನೇಮಕಾತಿ..!

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಮಹಿಳಾ ಸಬಲೀಕರಣ ಉದ್ದೇಶವನ್ನಿಟ್ಟುಕೊಂಡು ತಮ್ಮ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡುವ ನಿರ್ಧಾರ ಕೈಗೊಂಡಿವೆ.

  • Share this:

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (TCS), ಇನ್ಫೋಸಿಸ್ (Infosys), ವಿಪ್ರೋ (wipro) ಮತ್ತು ಎಚ್‌ಸಿಎಲ್ (HCL) ಟೆಕ್ನಾಲಜೀಸ್ ಒಟ್ಟಾಗಿ ಈ ವರ್ಷ 60,000 ಮಹಿಳೆಯರನ್ನು ಕ್ಯಾಂಪಸ್‌ಗಳಿಂದ ನೇಮಿಸಿಕೊಳ್ಳುವ ಸಾಧ್ಯತೆಯಿದೆ. ಮಹಿಳಾ ಸಬಲೀಕರಣ (women Empowerment) ಉದ್ದೇಶವನ್ನಿಟ್ಟುಕೊಂಡು ತಮ್ಮ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡುವ ನಿರ್ಧಾರ ಕೈಗೊಂಡಿವೆ. ಈ ನಿಟ್ಟಿನಲ್ಲಿ ಉನ್ನತ ಭಾರತೀಯ ಐಟಿ ಕಂಪೆನಿಗಳು (IT Companies)  ಈ ವರ್ಷದ ಆರಂಭ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು (women employees) ನೇಮಿಸಿಕೊಳ್ಳಲಿದೆ. ಟಿಸಿಎಸ್ ಕಳೆದ ಮೂರು ವರ್ಷಗಳಿಂದ ಕ್ಯಾಂಪಸ್ ನಿಯೋಜನೆಗಳ (campus selection) ಮೂಲಕ ಶೇಕಡಾ 38ರಿಂದ 45ರಷ್ಟು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ, ಕಂಪನಿಯು 1.85 ಲಕ್ಷ ಮಹಿಳಾ ಉದ್ಯೋಗಿಗಳನ್ನು ಹೊಂದಿದೆ ಮತ್ತು ಪ್ರವೇಶ ಮಟ್ಟದ ಹುದ್ದೆಗಳಿಗಾಗಿ 15,000-18,000 ಹೆಚ್ಚಿನ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ.


ಎಚ್‌ಸಿಎಲ್, 22,000 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದ್ದು ಅದರಲ್ಲಿ 60% ಮಹಿಳೆಯರಿಗೆ ಪ್ರಧಾನ್ಯತೆ ನೀಡಲಾಗಿದೆ. ಒಟ್ಟು ಉದ್ಯೋಗಿಗಳ ಪೈಕಿ, ಇನ್ಫೋಸಿಸ್ ಶೇಕಡಾ 45ರಷ್ಟು ಮಹಿಳಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಮತ್ತು ಸುಮಾರು 35,000 ಕಾಲೇಜು ಪದವೀಧರರಿಗೆ ತರಬೇತಿ ನೀಡುವ ಗುರಿ ಹೊಂದಿದೆ.


ವಿಪ್ರೋ ಈ ವರ್ಷ ಕ್ಯಾಂಪಸ್ ಪ್ಲೇಸ್‌ಮೆಂಟ್ (campus Placement) ಮೂಲಕ 30,000 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಅದರಲ್ಲಿ 50 ಪ್ರತಿಶತದಷ್ಟು ಮಹಿಳೆಯರಿರುವ ಸಾಧ್ಯತೆಯಿದೆ. "ಕ್ಯಾಂಪಸ್ ನೇಮಕಾತಿಗಳಲ್ಲಿ ಲಿಂಗ ತಾರತಮ್ಯ ಪ್ರತಿವರ್ಷ ನಿರಂತರವಾಗಿ ಹೆಚ್ಚುತ್ತಿದೆ ಇದನ್ನು ತಡೆಯುವುದೇ ಸಂಸ್ಥೆಯ ಉದ್ದೇಶವಾಗಿದೆ" ಎಂದು ವಿಪ್ರೋ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.


"ಡಿಜಿಟಲ್ ಟ್ಯಾಲೆಂಟ್‌ಗೆ ಬೇಡಿಕೆ ಹೆಚ್ಚಾದಂತೆ, ಕ್ಯಾಂಪಸ್ ನೇಮಕಾತಿ, ಹೈಬ್ರಿಡ್ ವರ್ಕ್ ಮಾಡೆಲ್‌ಗಳು ಮತ್ತು ಕೌಶಲ್ಯದ ಮಧ್ಯಸ್ಥಿಕೆಗಳ ಮೂಲಕ ಮಹಿಳಾ ಉದ್ಯೋಗದಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಉದ್ಯಮವು ನೋಡುತ್ತಿದೆ" ಎಂದು ನ್ಯಾಸ್ಕಾಂನ ಹಿರಿಯ ಉಪಾಧ್ಯಕ್ಷೆ ಸಂಗೀತಾ ಗುಪ್ತಾ ಹೇಳಿದರು. ಕಂಪನಿಯು 35,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದೆ. ಅದರಲ್ಲಿ 45% ಮಹಿಳಾ ಉದ್ಯೋಗಿಗಳಾಗಲಿದ್ದಾರೆ.


ಇದನ್ನು ಓದಿ: ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯುತ್ತಮ ಆಯ್ಕೆಗಳು

ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವುದರಿಂದ ಮಹಿಳೆಯರಿಗೂ ವೃತ್ತಿರಂಗದಲ್ಲಿ ಸಾಧಿಸಲು ಅನುಕೂಲವಾಗುತ್ತದೆ ಹಾಗೂ ವ್ಯವಹಾರಿಕ ಪ್ರಗತಿ ಅವರಿಂದ ಉಂಟುಮಾಡಲು ಸಾಧ್ಯ ಎಂಬುದು ಸಂಗೀತಾ ಗುಪ್ತಾ ಅಭಿಪ್ರಾಯವಾಗಿದೆ. ಟೆಕ್ ಕಂಪೆನಿಗಳು ಮಾಡಿರುವ ನಿರ್ಧಾರದಿಂದ ಎಷ್ಟೋ ಪದವಿ ಪಡೆದ ಅದೇ ರೀತಿ ಉನ್ನತ ಶಿಕ್ಷಣ ಪೂರೈಸಿರುವ ಮಹಿಳಾ ಅಭ್ಯರ್ಥಿಗಳಿಗೆ ನೆರವಾಗಲಿದ್ದು ಭವಿಷ್ಯದಲ್ಲಿ ಏನಾದರೂ ಸಾಧಿಸಲು ಈ ಅಂಶ ನೆರವಾಗಲಿದೆ.


ಪ್ರತಿಯೊಂದು ಕ್ಷೇತ್ರದಲ್ಲೂ ಲಿಂಗ ತಾರತಮ್ಯ ನಡೆಯುತ್ತಿರುವುದರಿಂದ ಮಹಿಳೆಯರ ಉನ್ನತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ಎಷ್ಟೆಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಕೂಡ ಸಾಧನೆ ಮಾಡುತ್ತಿದ್ದು ಪುರುಷರಷ್ಟೇ ಸಮನಾಗಿ ದುಡಿಯುತ್ತಿದ್ದಾರೆ ಮತ್ತು ಸಾಧನೆ ಮಾಡುತ್ತಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ ಟೆಕ್ ಕಂಪೆನಿಗಳು ಕೈಗೊಂಡಿರುವ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯವಾದುದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

First published: