UAS Dharwad Recruitment 2023: ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು(University of Agricultural Sciences Dharwad) ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಟೀಚಿಂಗ್ ಫೀಲ್ಡ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಇದೇ ಜನವರಿ 13ಕ್ಕೆ ಸಂದರ್ಶನ (Interview) ನಡೆಯಲಿದೆ. ಅಭ್ಯರ್ಥಿಗಳು ಅಂದು ಬೆಳಗ್ಗೆ 11 ಗಂಟೆಗೆ ಇಂಟರ್ವ್ಯೂನಲ್ಲಿ ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ(Dharwad) ಪೋಸ್ಟಿಂಗ್ ನೀಡಲಾಗುತ್ತದೆ. ಒಟ್ಟು 2 ಹುದ್ದೆಗಳು ಖಾಲಿ ಇವೆ.
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಎಚ್.ಡಿ ಸ್ಟ್ಯಾಟಿಸ್ಟಿಕ್ಸ್ ಪೂರ್ಣಗೊಳಿಸಿರಬೇಕು. (NET ಪಾಸಾಗಿರಬೇಕು)
ಇದನ್ನೂ ಓದಿ: ಮೈಸೂರಿನ CFTRI ನಲ್ಲಿ M.Sc ಆದವರಿಗೆ ಕೆಲಸ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 45,000 ಸಂಬಳ ಕೊಡಲಾಗುತ್ತದೆ.
ಸಂಸ್ಥೆ | ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ |
ಹುದ್ದೆ | ಅಸಿಸ್ಟೆಂಟ್ ಪ್ರೊಫೆಸರ್ |
ಒಟ್ಟು ಹುದ್ದೆ | 2 |
ವೇತನ | ಮಾಸಿಕ ₹ 45,000 |
ಉದ್ಯೋಗದ ಸ್ಥಳ | ಧಾರವಾಡ |
ಡೀನ್(ಕೃಷಿ) ರವರ ಕಚೇರಿ.
ಕೃಷಿ ಮಹಾವಿದ್ಯಾಲಯ
ಧಾರವಾಡ
ಅರ್ಜಿಯನ್ನು ಮುಂಚಿತವಾಗಿ ಕಳುಹಿಸುವಂತಿಲ್ಲ. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು. ಈ ನೇಮಕಾತಿಯ ತಾತ್ಕಾಲಿಕವಾಗಿರುತ್ತದೆ.
ಇದನ್ನೂ ಓದಿ: KSDA Recruitment 2023: ಕೃಷಿ ಇಲಾಖೆಯಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನ- ನೇರ ನೇಮಕಾತಿ, 78 ಸಾವಿರ ಸಂಬಳ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 30/12/2022
ಸಂದರ್ಶನ ನಡೆಯುವ ದಿನಾಂಕ: 13/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ