• ಹೋಂ
 • »
 • ನ್ಯೂಸ್
 • »
 • Jobs
 • »
 • Teacher Jobs: ಕೋಲಾರದಲ್ಲಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ಫೆ. 9ರಂದು ಸಂದರ್ಶನ

Teacher Jobs: ಕೋಲಾರದಲ್ಲಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ಫೆ. 9ರಂದು ಸಂದರ್ಶನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಖಾಲಿ ಇರುವ ಅನೇಕ ಟೀಚರ್​ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದೇ ಫೆಬ್ರವರಿ 9 & 10, 2023ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

 • News18 Kannada
 • 3-MIN READ
 • Last Updated :
 • Kolar, India
 • Share this:

Kendriya Vidyalaya BEML Nagar Recruitment 2023: ಟೀಚರ್​ ಹುದ್ದೆ(Teacher Jobs) ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಕೋಲಾರದಲ್ಲಿ ಶಿಕ್ಷಕ ವೃತ್ತಿ ಮಾಡಬೇಕೆಂದು ಕನಸು ಕಟ್ಟಿಕೊಂಡಿರುವವರಿಗೆ ಇಲ್ಲೊಂದು ಗುಡ್​ ನ್ಯೂಸ್(Good News) ಇದೆ. ಕೇಂದ್ರೀಯ ವಿದ್ಯಾಲಯ BEML ನಗರ (Kendriya Vidyalaya BEML Nagar) ಖಾಲಿ ಇರುವ ಅನೇಕ ಟೀಚರ್​ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದೇ ಫೆಬ್ರವರಿ 9 & 10, 2023ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.


ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರೀಯ ವಿದ್ಯಾಲಯ BEML ನಗರ
ಹುದ್ದೆಶಿಕ್ಷಕ
ವಿದ್ಯಾರ್ಹತೆಪದವಿ, ಬಿ.ಎಡ್
ವೇತನನಿಯಮಾನುಸಾರ
ಉದ್ಯೋಗದ ಸ್ಥಳಕೋಲಾರ
ಸಂದರ್ಶನ ನಡೆಯುವ ಸ್ಥಳಕೇಂದ್ರೀಯ ವಿದ್ಯಾಲಯ BEML ನಗರ
ಸಂದರ್ಶನ ನಡೆಯುವ ದಿನಾಂಕಫೆಬ್ರವರಿ 9 & 10

ಯಾವ್ಯಾವ ಹುದ್ದೆಗಳು ಖಾಲಿ ಇವೆ?


TGT
ಎಜುಕೇಟರ್ ಕೌನ್ಸೆಲರ್
ಟೀಚಿಂಗ್ ರೀಜನಲ್ ಲಾಂಗ್ವೇಜ್ (ಕನ್ನಡ)
ಸ್ಪೆಷಲ್ ಎಜುಕೇಟರ್
PRT
ಡೇಟಾ ಎಂಟ್ರಿ ಆಪರೇಟರ್ (DEO)
ಕಂಪ್ಯೂಟರ್ ಇನ್​ಸ್ಟ್ರಕ್ಟರ್
ವೊಕೇಶನಲ್ ಕೋಚಸ್/ ಇನ್​​ಸ್ಟ್ರಕ್ಟರ್ಸ್


ಇದನ್ನೂ ಓದಿ: Banking Jobs: ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಲಾಸ್ಟ್ ಡೇಟ್- ತಿಂಗಳಿಗೆ 5 ಲಕ್ಷ ಸಂಬಳ


ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, ಬಿಎಡ್, ಬಿಇ/ಬಿ.ಟೆಕ್, ಬಿಎಸ್ಸಿ, ಬಿಸಿಎ, ಎಂಎಸ್ಸಿ, ಎಂಸಿಎ ಪೂರ್ಣಗೊಳಿಸಿರಬೇಕು.


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂದು ವಿದ್ಯಾಲಯವು ತಿಳಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನಸಂದರ್ಶನ ನಡೆಯುವ ಸ್ಥಳ:


ಕೇಂದ್ರೀಯ ವಿದ್ಯಾಲಯ BEML ನಗರ
BEML ನಗರ
ಕೆಜಿಎಫ್​
563115
ಕೋಲಾರ ಜಿಲ್ಲೆ
ಕರ್ನಾಟಕ


ಇದನ್ನೂ ಓದಿ: Teacher Jobs: ಅನೇಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಡಗಿನ ಕೇಂದ್ರೀಯ ವಿದ್ಯಾಲಯ


ಯಾವ್ಯಾವ ಹುದ್ದೆಗೆ ಯಾವಾಗ ಸಂದರ್ಶನ ನಡೆಯಲಿದೆ?


TGT- ಫೆಬ್ರವರಿ 9, 2023
ಎಜುಕೇಟರ್ ಕೌನ್ಸೆಲರ್- ಫೆಬ್ರವರಿ 9, 2023
ಟೀಚಿಂಗ್ ರೀಜನಲ್ ಲಾಂಗ್ವೇಜ್ (ಕನ್ನಡ)- ಫೆಬ್ರವರಿ 9, 2023
ಸ್ಪೆಷಲ್ ಎಜುಕೇಟರ್- ಫೆಬ್ರವರಿ 9, 2023
PRT- ಫೆಬ್ರವರಿ 10, 2023
ಡೇಟಾ ಎಂಟ್ರಿ ಆಪರೇಟರ್ (DEO)- ಫೆಬ್ರವರಿ 10, 2023
ಕಂಪ್ಯೂಟರ್ ಇನ್​ಸ್ಟ್ರಕ್ಟರ್- ಫೆಬ್ರವರಿ 10, 2023
ವೊಕೇಶನಲ್ ಕೋಚಸ್/ ಇನ್​​ಸ್ಟ್ರಕ್ಟರ್ಸ್- ಫೆಬ್ರವರಿ 10, 2023


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/02/2023
ಸಂದರ್ಶನ ನಡೆಯುವ ದಿನಾಂಕ: ಫೆಬ್ರವರಿ 9 & 10, 2023

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು