Shishuniketan Sainink School Recruitment 2023: ಶಿಶುನಿಕೇತನ್ ಸೈನಿಕ್ ಸ್ಕೂಲ್ ಕ್ಯಾಂಪಸ್, ಬಿಜಾಪುರ(Shishuniketan Sainink School Campus, Biapur) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಶಿಕ್ಷಕ ಹುದ್ದೆಗಳ ಭರ್ತಿಗೆ ನೇಮಕಾತಿ (Recruitment) ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತರು ಈಗಲೇ ಅರ್ಜಿ ಹಾಕಿ. ಶಿಶುನಿಕೇತನ್ ಪ್ರೈಮರಿ ಸ್ಕೂಲ್, ಸೈನಿಕ ಸ್ಕೂಲ್ ಕ್ಯಾಂಪಸ್ ವಿಜಯಪುರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ(Contract Base) ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು 23 ಟೀಚರ್ ಹುದ್ದೆಗಳು ಖಾಲಿ ಇವೆ. ಅರ್ಜಿ ಹಾಕಲು ಇದೇ ಫೆಬ್ರವರಿ 24, 2023 ಕೊನೆಯ ದಿನವಾಗಿದೆ (Last Date).
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಶಿಶುನಿಕೇತನ್ ಸೈನಿಕ್ ಸ್ಕೂಲ್ ಕ್ಯಾಂಪಸ್, ಬಿಜಾಪುರ |
ಹುದ್ದೆ | ಶಿಕ್ಷಕ |
ಒಟ್ಟು ಹುದ್ದೆ | 23 |
ವಿದ್ಯಾರ್ಹತೆ | ಪದವಿ, ಬಿ.ಎಡ್ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ವಿಜಯಪುರ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 24, 2023 |
ಇದನ್ನೂ ಓದಿ: Railway Jobs: 10th ಪಾಸಾಗಿದ್ರೆ ರೈಲ್ ಕೋಚ್ ಫ್ಯಾಕ್ಟರಿಯಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ
ವಿದ್ಯಾರ್ಹತೆ:
ಅಸಿಸ್ಟೆಂಟ್ ಟೀಚರ್ಸ್ (ಸೈನ್ಸ್, ಮ್ಯಾಥ್ಸ್, ಹಿಂದಿ, ಕನ್ನಡ, ಸೋಷಿಯಲ್ ಸೈನ್ಸ್ & ಇಂಗ್ಲಿಷ್)- ಪದವಿ, ಡಿ.ಎಡ್, ಬಿ.ಎಡ್
ಮ್ಯೂಸಿಕ್ & ಡ್ಯಾನ್ಸ್ ಟೀಚರ್- ಪಿಯುಸಿ, ಮ್ಯೂಸಿಕ್ನಲ್ಲಿ ಪದವಿ
ಫಿಜಿಕಲ್ ಎಜುಕೇಶನ್ ಟೀಚರ್- ಪದವಿ, ಬಿಪಿಎಡ್
ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ಶೈಕ್ಷಣಿಕ ಅರ್ಹತೆ & ಅನುಭವದ ಆಧಾರದ ಮೇಲೆ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಮೊದಲಿಗೆ ಸ್ಕೂಲ್ ವೆಬ್ಸೈಟ್ www.shishuniketanssbj.ac.in ಗೆ ಭೇಟಿ ನೀಡಬೇಕು.
ಅಲ್ಲಿ ಲಭ್ಯವಾಗುವ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಬೇಕು.
ಬಳಿಕ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಗಳನ್ನು ಸೇರಿಸಿ ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮೂಲಕ ಫೆಬ್ರವರಿ 24ರೊಳಗೆ ಕಳುಹಿಸಬೇಕು.
ಮುಖ್ಯೋಪಾಧ್ಯಾಯಿನಿ
ಶಿಶುನಿಕೇತನ್, ಸೈನಿಕ್ ಸ್ಕೂಲ್ ಕ್ಯಾಂಪಸ್
ವಿಜಯಪುರ- 586108
ಶಾರ್ಟ್ ಲಿಸ್ಟ್ ಮಾಡಿದ ಅರ್ಹ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ