Kuvempu University Recruitment 2023: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು(Kuvempu University) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಜೂನಿಯರ್ ರಿಸರ್ಚ್ ಫೆಲೋ(Junior Research Fellow) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್ / ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಶಿವಮೊಗ್ಗದ (Shivamogga) ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕುವೆಂಪು ವಿಶ್ವವಿದ್ಯಾಲಯ |
ಹುದ್ದೆ | ಜೂನಿಯರ್ ರಿಸರ್ಚ್ ಫೆಲೋ |
ಒಟ್ಟು ಹುದ್ದೆ | 1 |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 31,000 |
ಉದ್ಯೋಗದ ಸ್ಥಳ | ಶಿವಮೊಗ್ಗ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 19, 2023 |
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ kuvempu.ac.in ಗೆ ಭೇಟಿ ನೀಡಿ.
ವೇತನ:
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 31,000 ಸಂಬಳ ಕೊಡಲಾಗುತ್ತದೆ.
ಇದನ್ನೂ ಓದಿ: JOBS: ತಿಂಗಳಿಗೆ 2 ಲಕ್ಷ ಸಂಬಳ- ಬೆಳಗಾವಿಯಲ್ಲಿ ಕೆಲಸ ಖಾಲಿ ಇದೆ, ನಾಳೆಯೇ ಲಾಸ್ಟ್ ಡೇಟ್
ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಬಿ. ತಿಪ್ಪೇಸ್ವಾಮಿ ಅವರ ಸಂಶೋಧನಾ ಯೋಜನೆಗೆ ಈ ಸಂಶೋಧನಾ ಫೆಲೋವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿವಮೊಗ್ಗದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಜಾಹೀರಾತು ಪ್ರಕಟಗೊಂಡ 15 ದಿನಗಳೊಳಗೆ ಸ್ವವಿವರಗಳನ್ನೊಳಗೊಂಡ ಅರ್ಜಿಯನ್ನು ಸಲ್ಲಿಸಬೇಕು.
ವಿಳಾಸ ಹೀಗಿದೆ:
ಪ್ರೊ.ಬಿ. ತಿಪ್ಪೇಸ್ವಾಮಿ
ಪ್ರಧಾನ ಸಂಶೋಧಕರು
ಸ್ನಾತಕೋತ್ತರ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಕುವೆಂಪು ವಿಶ್ವವಿದ್ಯಾಲಯ
ಜ್ಞಾನಸಹ್ಯಾದ್ರಿ
ಶಂಕರಘಟ್ಟ- 577451
ಶಿವಮೊಗ್ಗ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 19, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ