Kendriya Vidyalaya Kodagu Recruitment 2023: ಟೀಚರ್ ಹುದ್ದೆ(Teacher Jobs) ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಕೊಡಗಿನಲ್ಲಿ ಶಿಕ್ಷಕ ವೃತ್ತಿ ಮಾಡಬೇಕೆಂದು ಕನಸು ಕಟ್ಟಿಕೊಂಡಿರುವವರಿಗೆ ಇಲ್ಲೊಂದು ಗುಡ್ ನ್ಯೂಸ್(Good News) ಇದೆ. ಕೊಡಗಿನ ಕೇಂದ್ರೀಯ ವಿದ್ಯಾಲಯ(Kendriya Vidyalaya Malleshwaram) ಖಾಲಿ ಇರುವ ಅನೇಕ ಟೀಚರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದೇ ಫೆಬ್ರವರಿ 9, 2023ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೊಡಗಿನ ಕೇಂದ್ರೀಯ ವಿದ್ಯಾಲಯ |
ಹುದ್ದೆ | ಶಿಕ್ಷಕ |
ವಿದ್ಯಾರ್ಹತೆ | ಪದವಿ, ಬಿ.ಎಡ್ |
ವೇತನ | ಮಾಸಿಕ ₹ 27,500 |
ಉದ್ಯೋಗದ ಸ್ಥಳ | ಕೊಡಗು |
ಸಂದರ್ಶನ ನಡೆಯುವ ದಿನಾಂಕ | ಫೆಬ್ರವರಿ 9, 2023 |
ಸಂದರ್ಶನ ನಡೆಯುವ ಸ್ಥಳ | ಕೇಂದ್ರೀಯ ವಿದ್ಯಾಲಯ ಕೊಡಗು |
ಇದನ್ನೂ ಓದಿ: Court Jobs: ಬೆಳಗಾವಿ ಜಿಲ್ಲಾ ಕೋರ್ಟ್ನಲ್ಲಿ 10th ಪಾಸಾದವರಿಗೆ ಉದ್ಯೋಗ- 52,000 ಸಂಬಳ
ವಿದ್ಯಾರ್ಹತೆ:
ಪೋಸ್ಟ್ ಗ್ರಾಜುಯೇಟ್ ಟೀಚರ್ (PGT)- ಸ್ನಾತಕೋತ್ತರ ಪದವಿ, ಬಿಎಡ್, ಬಿಇ/ಬಿ.ಟೆಕ್, ಬಿಎಸ್ಸಿ, ಬಿಸಿಎ, ಎಂಎಸ್ಸಿ, ಎಂಸಿಎ
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (TGT)- ಪದವಿ, ಬಿ.ಎಡ್
ಪ್ರೈಮರಿ ಟೀಚರ್ (PRT)- ಪಿಯುಸಿ, ಬಿ.ಎಡ್, ಡಿ.ಎಡ್
ಕಂಪ್ಯೂಟರ್ ತರಬೇತುದಾರ- ಬಿಇ/ ಬಿ.ಟೆಕ್, ಬಿಸಿಎ, ಎಂಸಿಎ, ಎಂಎಸ್ಸಿ, ಬಿಎಸ್ಸಿ, ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಡಿಪ್ಲೋಮಾ,
ಯೋಗ ಟೀಚರ್- ಯಾವುದೇ ಪದವಿ, ಡಿಪ್ಲೊಮಾ
ಸ್ಪೋರ್ಟ್ ಕೋಚ್- ಬಿ.ಪಿ.ಎಡ್, ಎಂ.ಪಿ.ಎಡ್, ಡಿಪ್ಲೊಮಾ
ನರ್ಸ್- ನರ್ಸಿಂಗ್ ನಲ್ಲಿ ಡಿಪ್ಲೊಮಾ
ಗೈಡೆನ್ಸ್ ಕೌನ್ಸೆಲರ್- ಬಿಎ, ಬಿಎಸ್ಸಿ
ಸ್ಪೆಷಲ್ ಎಜುಕೇಟರ್- ಡಿಪ್ಲೊಮಾ, ಬಿ.ಎಡ್, ಪದವಿ
ವಯೋಮಿತಿ:
ನಿಗದಿಪಡಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: ISEC Recruitment 2023: ಎಂ.ಎಸ್ಸಿ ಆಗಿದ್ರೆ 50 ಸಾವಿರ ಸಂಬಳ- ಈಗಲೇ ರೆಸ್ಯೂಮ್ ಕಳುಹಿಸಿ
ವೇತನ:
ಪೋಸ್ಟ್ ಗ್ರಾಜುಯೇಟ್ ಟೀಚರ್ (PGT)- ಮಾಸಿಕ ₹ 27,500
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (TGT)- ಮಾಸಿಕ ₹ 26,250
ಪ್ರೈಮರಿ ಟೀಚರ್ (PRT)- ಮಾಸಿಕ ₹ 21,250
ಕಂಪ್ಯೂಟರ್ ತರಬೇತುದಾರ-ಮಾಸಿಕ ₹ 21,250-26,250
ಯೋಗ ಟೀಚರ್- ಮಾಸಿಕ ₹ 21,250
ಸ್ಪೋರ್ಟ್ ಕೋಚ್-ಮಾಸಿಕ ₹ 21,250
ನರ್ಸ್- ದಿನಕ್ಕೆ 750 ರೂ.
ಗೈಡೆನ್ಸ್ ಕೌನ್ಸೆಲರ್- ಮಾಸಿಕ ₹ 25,000
ಸ್ಪೆಷಲ್ ಎಜುಕೇಟರ್- ಮಾಸಿಕ ₹ 21,250
ಸಂದರ್ಶನ ನಡೆಯುವ ಸ್ಥಳ:
ಕೇಂದ್ರೀಯ ವಿದ್ಯಾಲಯ ಕೊಡಗು
ಹೊಸ ಕೋರ್ಟ್ ಬಿಲ್ಡಿಂಗ್ ಎದುರು
ವಿದ್ಯಾನಗರ
ಮಡಿಕೇರಿ- 571201
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/02/2023
ಸಂದರ್ಶನ ನಡೆಯುವ ದಿನಾಂಕ: ಫೆಬ್ರವರಿ 9, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ