• ಹೋಂ
  • »
  • ನ್ಯೂಸ್
  • »
  • Jobs
  • »
  • ESIC ಕರ್ನಾಟಕದಲ್ಲಿ Part-Time ಟೀಚರ್ ಹುದ್ದೆಗಳು ಖಾಲಿ- ಫೆ. 17ರೊಳಗೆ ಅಪ್ಲೈ ಮಾಡಿ

ESIC ಕರ್ನಾಟಕದಲ್ಲಿ Part-Time ಟೀಚರ್ ಹುದ್ದೆಗಳು ಖಾಲಿ- ಫೆ. 17ರೊಳಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಲಬುರಗಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈಗಲೇ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ.

  • Share this:

ESIC Karnataka Recruitment 2023: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ(Employees State Insurance Corporation Karnataka) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಪಾರ್ಟ್​ ಟೈಂ ಟೀಚಿಂಗ್ ಫ್ಯಾಕಲ್ಟಿ(Part time Teaching Faculty) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Apply)ಹಾಕಬಹುದು. ಕಲಬುರಗಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ಈಗಲೇ ಇ-ಮೇಲ್(E-Mail) ಮಾಡುವ ಮೂಲಕ ಅರ್ಜಿ ಹಾಕಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
ಹುದ್ದೆಪಾರ್ಟ್​ ಟೈಂ ಟೀಚಿಂಗ್ ಫ್ಯಾಕಲ್ಟಿ
ಒಟ್ಟು ಹುದ್ದೆ4
ವಿದ್ಯಾರ್ಹತೆಸ್ನಾತಕೋತ್ತರ ಪದವಿ
ವೇತನದಿನಕ್ಕೆ 200-400 ರೂ.
ಉದ್ಯೋಗದ ಸ್ಥಳಕಲಬುರಗಿ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 17, 2023

ಶೈಕ್ಷಣಿಕ ಅರ್ಹತೆ:
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: JOBS: ವಿಸಿಟಿಂಗ್ ಡಾಕ್ಟರ್ ಹುದ್ದೆಗೆ ಅರ್ಜಿ ಹಾಕಿ- ಫೆಬ್ರವರಿ 14ರಂದು ಸಂದರ್ಶನ


ವಯೋಮಿತಿ:
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 3, 2023ಕ್ಕೆ ಗರಿಷ್ಠ 66 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಪಾರ್ಟ್ ಟೈಂ ಟೀಚಿಂಗ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗಂಟೆಗೆ 200-400 ರೂ. ವೇತನ ಕೊಡಲಾಗುತ್ತದೆ.


ಇದನ್ನೂ ಓದಿ: Karwar: ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಡಿಗ್ರಿ ಪಾಸಾದವರಿಗೆ ಕೆಲಸ- ತಡಮಾಡದೇ ಅರ್ಜಿ ಹಾಕಿ


ಉದ್ಯೋಗದ ಸ್ಥಳ:
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಪಾರ್ಟ್ ಟೈಂ ಟೀಚಿಂಗ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಬೋಧನಾ ಅನುಭವ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ deanmc-gb.kar@esic.nic.in ಗೆ ಫೆಬ್ರವರಿ 17ಕ್ಕೆ ಮುನ್ನ ಕಳುಹಿಸಬೇಕು.




ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ಆರಂಭ ದಿನಾಂಕ: 03/02/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 17, 2023


ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08471-265546-265547 ಗೆ ಕರೆ ಮಾಡಿ. ಅಥವಾ ಇ-ಮೇಲ್ ಐಡಿ deanmc-gb.kar@esic.nic.in ಗೆ ಸಂಪರ್ಕಿಸಿ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು