BGS Recruitment 2023: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಸಂಸ್ಥೆಯಾದ ಶ್ರೀ ಬಿಜಿಎಸ್ ಶೈಕ್ಷಣಿಕ ಸಂಸ್ಥೆ- ಚಿಕ್ಕಮಗಳೂರು ಬ್ರಾಂಚ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಟೀಚಿಂಗ್ ಪೋಸ್ಟ್ಗಳು (Teaching Posts) ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಶೃಂಗೇರಿ, ಕೊಪ್ಪ, ಹಿರೇಕೊಡಿಗೆ, ಜಯಪುರ, ಬಾಳೆಹೊನ್ನೂರು, ಚಿಕ್ಕಮಗಳೂರು, ಕಡೂರು, ಬಿರೂರು, ಜಾವಳ್ಳಿ & ಮೂಡಿಗೆರೆಯಲ್ಲಿರುವ ಪ್ರಾಥಮಿಕ, ಪ್ರೌಢ ಶಾಲೆ (ರಾಜ್ಯ & CBSE) ಮತ್ತು ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಮಾರ್ಚ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ತಮ್ಮ ರೆಸ್ಯೂಮ್ನ್ನು (Resume) ಇ-ಮೇಲ್ ಮಾಡಬೇಕು. ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ.
ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬಿಜಿಎಸ್ ಶೈಕ್ಷಣಿಕ ಸಂಸ್ಥೆ- ಚಿಕ್ಕಮಗಳೂರು ಬ್ರಾಂಚ್ |
ಹುದ್ದೆ | ಲೆಕ್ಚರರ್, ಅಸಿಸ್ಟೆಂಟ್ ಟೀಚರ್ |
ವಿದ್ಯಾರ್ಹತೆ | ಎಂ.ಎಸ್ಸಿ, ಬಿ.ಎಡ್ |
ವೇತನ | ನಿಗದಿಪಡಿಸಿಲ್ಲ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 20, 2023 |
ಉದ್ಯೋಗದ ಸ್ಥಳ | ಚಿಕ್ಕಮಗಳೂರು |
ಅಧಿಕೃತ ವೆಬ್ಸೈಟ್ | www.bgssringeri.org |
ಇದನ್ನೂ ಓದಿ: PUMA is Hiring: ಪೂಮಾ ಕಂಪನಿ ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ- ಬಂಪರ್ ಸ್ಯಾಲರಿ
ವಿದ್ಯಾರ್ಹತೆ & ಯಾವ ವಿಷಯಗಳಿಗೆ ಎಷ್ಟು ಹುದ್ದೆಗಳು ಖಾಲಿ ಇವೆ?
ಲೆಕ್ಚರರ್ (ಪಿಯು ಕಾಲೇಜು)- ಎಂ.ಎಸ್ಸಿ, ಬಿ.ಎಡ್- ಫಿಜಿಕ್ಸ್ (2), ಮ್ಯಾಥ್ಸ್(2), ಕೆಮಿಸ್ಟ್ರಿ (2), ಬಯಾಲಜಿ(2) & ಕಂಪ್ಯೂಟರ್ ಸೈನ್ಸ್(2)
ಎಂ.ಕಾಂ, ಬಿ.ಎಡ್- 2
ಎಂಎ, ಬಿ.ಎಡ್- ಇಂಗ್ಲಿಷ್- 1, ಎಕನಾಮಿಕ್ಸ್- 1
ಅಸಿಸ್ಟೆಂಟ್ ಟೀಚರ್ (ಹೈ ಸ್ಕೂಲ್)- ಬಿಎಸ್ಸಿ, ಬಿ.ಎಡ್- ಪಿಎಂ(5), ಸಿಬಿ(3) & ಬಿಎ, ಬಿ.ಎಡ್- ಇತಿಹಾಸ/ ಇಂಗ್ಲಿಷ್ (5), ಎಂಎ, ಬಿ.ಎಡ್- ಕನ್ನಡ (1)
ಅಸಿಸ್ಟೆಂಟ್ ಟೀಚರ್ (ಪ್ರೈಮರಿ)- ಡಿ.ಎಡ್ (ಪಿಯುಸಿಯಲ್ಲಿ ಸೈನ್ಸ್) ಇಂಗ್ಲಿಷ್ ಮಾಧ್ಯಮ-4
ಪ್ರಿ- ಪ್ರೈಮರಿ- ಎನ್ಟಿಟಿ (5)
ಪಿ.ಇ.ಟೀಚರ್- ಬಿಎ/ಬಿಎಸ್ಸಿ, ಬಿ.ಪಿ.ಎಡ್ (ಪುರುಷ-2 & ಮಹಿಳೆ-2)
ವಾರ್ಡನ್- ಯಾವುದೇ ಪದವಿ ಜೊತೆ ಬಿ.ಎಡ್ (ಪುರುಷ-2 & ಮಹಿಳೆ-2)
ಇದನ್ನೂ ಓದಿ: FCI Recruitment 2023: ತಿಂಗಳಿಗೆ 1.80 ಲಕ್ಷ ಸಂಬಳ- ಭಾರತೀಯ ಆಹಾರ ನಿಗಮದಲ್ಲಿದೆ ಬಂಪರ್ ಉದ್ಯೋಗ
ಇತರೆ ಕೌಶಲ್ಯ & ಅನುಭವ:
ಅಭ್ಯರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕು. ಇ-ಲಿಟ್ರಸಿ ಬಗ್ಗೆ ಜ್ಞಾನವಿರಬೇಕು.
ಕನಿಷ್ಠ 3 ವರ್ಷ ಅನುಭವ ಹೊಂದಿರಲೇಬೇಕು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೋರ್ಡಿಂಗ್, ಲಾಡ್ಜಿಂಗ್ ಮತ್ತು ಅತ್ಯುತ್ತಮ ಸಂಬಳ ಕೊಡಲಾಗುತ್ತದೆ ಎಂದು ಬಿಜಿಎಸ್ ಎಜುಕೇಷನಲ್ ಇನ್ಸ್ಟಿಟ್ಯೂಟ್ ನೋಟಿಫಿಕೇಶನ್ನಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಅರ್ಜಿಯನ್ನು ಅಧಿಕೃತ ವೆಬ್ಸೈಟ್ www.bgssringeri.org ಗೆ ಭೇಟಿ ನೀಡಿ ಅಲ್ಲಿ ಪಡೆದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08265-250810, 6363469310 ಗೆ ಕರೆ ಮಾಡಿ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ bgscollegesringeri@gmail.com ಗೆ ಮಾರ್ಚ್ 20ರೊಳಗೆ ಕಳುಹಿಸಬೇಕು.
ಅಥವಾ
ಪೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ವಿಳಾಸ:
ಸೆಕ್ರೆಟರಿ
ಶ್ರೀ ಬಿಜಿಎಸ್ ಶಿಕ್ಷಣ ಕಾಲೇಜು
ಶೃಂಗೇರಿ- 577139
ಚಿಕ್ಕಮಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ