• ಹೋಂ
  • »
  • ನ್ಯೂಸ್
  • »
  • Jobs
  • »
  • Ambika Vidyalaya Recruitment 2023: ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Ambika Vidyalaya Recruitment 2023: ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಬಿಕಾ ವಿದ್ಯಾಲಯ

ಅಂಬಿಕಾ ವಿದ್ಯಾಲಯ

ಒಟ್ಟು 3 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್​ 8, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ರೆಸ್ಯೂಮ್​​ನ್ನು ಈಗಲೇ ಇ-ಮೇಲ್ ಮಾಡಿ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

Ambika Group of Educational Institutions Recruitment 2023: ಟೀಚಿಂಗ್ ಫೀಲ್ಡ್​​ನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲೊಂದು ಒಳ್ಳೆಯ ಅವಕಾಶವಿದೆ. ಪುತ್ತೂರಿನ ಅಂಬಿಕಾ ಗ್ರೂಪ್​ ಆಫ್​ ಎಜುಕೇಷನಲ್ ಇನ್​ಸ್ಟಿಟ್ಯೂಶನ್ಸ್(Ambika Group of Educational Institutions) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಒಟ್ಟು 3 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್​ 8, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ತಮ್ಮ ರೆಸ್ಯೂಮ್​​ನ್ನು (Resume) ಈಗಲೇ ಇ-ಮೇಲ್ ಮಾಡಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಪುತ್ತೂರಿನ ಅಂಬಿಕಾ ಗ್ರೂಪ್​ ಆಫ್​ ಎಜುಕೇಷನಲ್ ಇನ್​ಸ್ಟಿಟ್ಯೂಶನ್ಸ್
ಹುದ್ದೆಅಧ್ಯಾಪಕ, ಸ್ಟುಡೆಂಟ್ ವೆಲ್​ಫೇರ್​​ ಆಫೀಸರ್, ವಿಡಿಯೋ ಎಡಿಟರ್
ಒಟ್ಟು ಹುದ್ದೆ3
ವಿದ್ಯಾರ್ಹತೆಸ್ನಾತಕೋತ್ತರ ಪದವಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಪುತ್ತೂರು (ದಕ್ಷಿಣ ಕನ್ನಡ)
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 8, 2023

ಹುದ್ದೆಯ ಮಾಹಿತಿ:
ಅಧ್ಯಾಪಕ (ಕಂಪ್ಯೂಟರ್ ಸೈನ್ಸ್​)- 1
ಸ್ಟುಡೆಂಟ್ ವೆಲ್​ಫೇರ್​​ ಆಫೀಸರ್- 1 (ಪುರುಷ ಅಭ್ಯರ್ಥಿಗಳು ಮಾತ್ರ)
ವಿಡಿಯೋ ಎಡಿಟರ್-1 (ಪುರುಷ ಅಭ್ಯರ್ಥಿಗಳು ಮಾತ್ರ)


ವಿದ್ಯಾರ್ಹತೆ:
ಅಧ್ಯಾಪಕ (ಕಂಪ್ಯೂಟರ್ ಸೈನ್ಸ್​)- ಎಂಸಿಎ/ ಎಂಎಸ್ಸಿ/ ಬಿಇ
ಸ್ಟುಡೆಂಟ್ ವೆಲ್​ಫೇರ್​​ ಆಫೀಸರ್- ಸ್ನಾತಕೋತ್ತರ ಪದವಿ
ವಿಡಿಯೋ ಎಡಿಟರ್- ತಿಳಿಸಿಲ್ಲ.


ಇದನ್ನೂ ಓದಿ: Job Alert: ತಿಂಗಳಿಗೆ 42 ಸಾವಿರ ಸಂಬಳ- ಟೈಪಿಸ್ಟ್ ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ


ವೇತನ:
ನಿಗದಿಪಡಿಸಿಲ್ಲ. ಸೇವಾ ಅನುಭವ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಕೊಡಲಾಗುತ್ತದೆ.


ಅರ್ಜಿ ಸಲ್ಲಿಸಲು ಕೊನೆಯ ದಿನ:
ಮಾರ್ಚ್​ 8, 2023




ಅರ್ಜಿ ಹಾಕುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳು ಹಾಗೂ ರೆಸ್ಯೂಮ್​ನೊಂದಿಗೆ ಇ-ಮೇಲ್ ಐಡಿ ambikavidyalaya@yahoo.co.in ಗೆ ಕಳುಹಿಸಬೇಕು.


ಅಥವಾ


ಸೆಕ್ರೆಟರಿ
ಅಂಬಿಕಾ ಶಿಕ್ಷಣ ಸಂಸ್ಥೆಗಳ ಸಮೂಹ
ಬಪ್ಪಲಿಗೆ
ಪುತ್ತೂರು (ದಕ್ಷಿಣ ಕನ್ನಡ)
574201


ಈ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು