• ಹೋಂ
  • »
  • ನ್ಯೂಸ್
  • »
  • Jobs
  • »
  • High School Teacher Jobs: ಬೆಂಗಳೂರಿನಲ್ಲಿ ಹೈಸ್ಕೂಲ್ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

High School Teacher Jobs: ಬೆಂಗಳೂರಿನಲ್ಲಿ ಹೈಸ್ಕೂಲ್ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಫೆಬ್ರವರಿ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್(Postal)​ ಮುಖಾಂತರ ಅರ್ಜಿ ಹಾಕಿ.

  • News18 Kannada
  • 4-MIN READ
  • Last Updated :
  • New Delhi, India
  • Share this:

515 Army Base Workshop High School Recruitment 2023: ಬಿ.ಎಡ್ ಮುಗಿಸಿ ಟೀಚರ್ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಅವಕಾಶ. 515 ಆರ್ಮಿ ಬೇಸ್ ವರ್ಕ್​ಶಾಪ್​​ ಹೈ ಸ್ಕೂಲ್(515 Army Base Workshop High School )​ ಖಾಲಿ ಇರುವ ಟೀಚರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಶಿಕ್ಷಕ ಹುದ್ದೆಗಳು(Teacher Posts) ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಫೆಬ್ರವರಿ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್(Postal)​ ಮುಖಾಂತರ ಅರ್ಜಿ ಹಾಕಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ515 ಆರ್ಮಿ ಬೇಸ್ ವರ್ಕ್​ಶಾಪ್​​ ಹೈ ಸ್ಕೂಲ್
ಹುದ್ದೆಟೀಚರ್
ಒಟ್ಟು ಹುದ್ದೆ4
ವಿದ್ಯಾರ್ಹತೆಬಿ.ಎಡ್
ವೇತನನಿಗದಿಪಡಿಸಿಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 18, 2023
ಉದ್ಯೋಗದ ಸ್ಥಳಬೆಂಗಳೂರು

ಎಷ್ಟೆಷ್ಟು ಹುದ್ದೆಗಳಿವೆ?
ಪ್ರೈಮರಿ ಟೀಚರ್- ಎಲ್ಲಾ ವಿಷಯಗಳು- 1
ಕಂಪ್ಯೂಟರ್ ಟೀಚರ್- 1
ಫಿಜಿಕಲ್ ಎಜುಕೇಷನ್ ಟೀಚರ್ (TET)-1
ಅಟೆಂಡೆಂಟ್- 1


ವಿದ್ಯಾರ್ಹತೆ:
ಪ್ರೈಮರಿ ಟೀಚರ್- ಎಲ್ಲಾ ವಿಷಯಗಳು- ಬಿ.ಎಡ್, ಪದವಿ
ಕಂಪ್ಯೂಟರ್ ಟೀಚರ್- ಬಿಸಿಎ, ಬಿ.ಎಡ್​, ಬಿಎಸ್ಸಿ, ಪದವಿ
ಫಿಜಿಕಲ್ ಎಜುಕೇಷನ್ ಟೀಚರ್ (TET)- ಪದವಿ, ಬಿ.ಪಿಎಡ್, ಎಂ.ಪಿಎಡ್, ಡಿ.ಪಿಎಡ್
ಅಟೆಂಡೆಂಟ್- 10ನೇ ತರಗತಿ+ ಅನುಭವಸ್ಥ


ಇದನ್ನೂ ಓದಿ: Teaching Jobs: ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿಯಲ್ಲಿ ಟೀಚರ್ ಹುದ್ದೆಗಳಿಗೆ ಅರ್ಜಿ ಹಾಕಿ


ಅಭ್ಯರ್ಥಿಗಳು ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕೆಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ
ಸಂದರ್ಶನ


ಲಿಖಿತ ಪರೀಕ್ಷೆ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.


ಇದನ್ನೂ ಓದಿ: ESIC ಕರ್ನಾಟಕದಲ್ಲಿ Part-Time ಟೀಚರ್ ಹುದ್ದೆಗಳು ಖಾಲಿ- ಫೆ. 17ರೊಳಗೆ ಅಪ್ಲೈ ಮಾಡಿ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ಅಗತ್ಯ ದಾಖಲಾತಿಗಳು​​ ಹಾಗೂ ಪಾಸ್​​ಪೋರ್ಟ್​ ಅಳತೆಯ ಫೋಟೋವನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಪ್ರಾಂಶುಪಾಲರು
515 ಆರ್ಮಿ ಬೇಸ್ ವರ್ಕ್‌ಶಾಪ್ ಹೈಸ್ಕೂಲ್
ಕೇಂಬ್ರಿಡ್ಜ್ ರೋಡ್ ಕ್ರಾಸ್
ಹಲಸೂರು
ಬೆಂಗಳೂರು - 08



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 18, 2023
ಲಿಖಿತ ಪರೀಕ್ಷೆ & ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ ನಡೆಯುವ ದಿನ: ಫೆಬ್ರವರಿ 23, 2023


ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇ-ಮೇಲ್ ಐಡಿ 515abwhighschool@gmail.com ಗೆ ಸಂಪರ್ಕಿಸಿ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು