TCS Recruitment: ಟಿಸಿಎಸ್ ಕಂಪನಿಯಲ್ಲಿ ಎಂಜಿನಿಯರಿಂಗ್ ಹುದ್ದೆಗಳ ನೇಮಕಾತಿ; ಅಭ್ಯರ್ಥಿಯು ಈ ಕೌಶಲ್ಯಗಳನ್ನು ಹೊಂದಿರಲೇಬೇಕು

ನೀವು ಈ ಸಂಸ್ಥೆಯಲ್ಲಿ ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದರೆ ಯಾವ ಬಗೆಯ ಉದ್ಯೋಗಗಳಿಗೆ ಟಿಸಿಎಸ್ ನೇಮಕಾತಿ ನಡೆಸುತ್ತಿದೆ? ಅಭ್ಯರ್ಥಿಯು ಹೊಂದಿರಬೇಕಾದ ಕೌಶಲ್ಯಗಳೇನು? ವೃತ್ತಿ ಅನುಭವವೇನು ಮೊದಲಾದ ವಿವರಗಳನ್ನು ಅರಿತುಕೊಂಡು ಮುಂದುವರಿಯುವುದು ಸೂಕ್ತ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹಲವಾರು ಸಾಫ್ಟ್‌ವೇರ್ ಎಂಜಿನಿಯರಿಂಗ್ ಹುದ್ದೆಗಳಿಗಾಗಿ ನೇಮಕಾತಿ ನಡೆಸುತ್ತಿದೆ. TechGig ಯಾವೆಲ್ಲಾ ಹುದ್ದೆಗಳಿಗಾಗಿ ಟಿಸಿಎಸ್ ನೇಮಕಾತಿ ನಡೆಸುತ್ತಿದೆ ಎಂಬ ವಿವರಗಳನ್ನು ನೀಡಿದ್ದು ಅಭ್ಯರ್ಥಿಗೆ ಇರಬೇಕಾದ ಕೌಶಲ್ಯಗಳು ಹಾಗೂ ಉದ್ಯೋಗ ಜವಾಬ್ದಾರಿಗಳ ಮಾಹಿತಿ ನೀಡಿದೆ. ನೀವು ಈ ಸಂಸ್ಥೆಯಲ್ಲಿ ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದರೆ ಯಾವ ಬಗೆಯ ಉದ್ಯೋಗಗಳಿಗೆ ಟಿಸಿಎಸ್ ನೇಮಕಾತಿ ನಡೆಸುತ್ತಿದೆ? ಅಭ್ಯರ್ಥಿಯು ಹೊಂದಿರಬೇಕಾದ ಕೌಶಲ್ಯಗಳೇನು? ವೃತ್ತಿ ಅನುಭವವೇನು ಮೊದಲಾದ ವಿವರಗಳನ್ನು ಅರಿತುಕೊಂಡು ಮುಂದುವರಿಯುವುದು ಸೂಕ್ತ. ಇಂದಿನ ಲೇಖನದಲ್ಲಿ ಈ ವಿಷಯದ ಕುರಿತು ಕೆಲವೊಂದು ಮುಖ್ಯ ಮಾಹಿತಿಗಳನ್ನು ನೀಡುತ್ತಿದ್ದು ಸಹಕಾರಿಯಾಗಲಿದೆ.

ಟಿಸಿಎಸ್ ಡಾಟಾ ವೇರ್‌ಹೌಸ್ ಸ್ಕಿಲ್ಸ್ ಕಂಟೆಸ್ಟ್ – ಡಾಟಾ ಸ್ಟೇಜ್:

ಇದು ಡೆವಲಪರ್ ಹುದ್ದೆಯಾಗಿದ್ದು ಇರಬೇಕಾದ ಅನುಭವ 2-7 ವರ್ಷವಾಗಿದೆ. ನೇಮಕಾತಿ ಕೊನೆಯ ದಿನಾಂಕ ಸಪ್ಟೆಂಬರ್ 27. ಅಭ್ಯರ್ಥಿಯು Unix Shell Scripts, SQL, Datastage ಕೌಶಲ್ಯಗಳನ್ನು ಹೊಂದಿರಬೇಕು. ತಂತ್ರಜ್ಞಾನ/ಉಪಕರಣಗಳಲ್ಲಿನ ಬದಲಾವಣೆಯ ಜ್ಞಾನ ಹೊಂದಿರಬೇಕು. ದೋಷವನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರಬೇಕು.

ಟಿಸಿಎಸ್ ಡಾಟಾ ವೇರ್‌ಹೌಸ್ ಸ್ಕಿಲ್ಸ್ ಕಂಟೆಸ್ಟ್ – ಇನ್‌ಫಾರ್ಮಾಟಿಕಾ:

ಡೆವಲಪರ್ ಹುದ್ದೆಗೆ ಸಂಸ್ಥೆಯು ನೇಮಕಾತಿ ನಡೆಸುತ್ತಿದ್ದು ನೇಮಕಾತಿ ಕೊನೆಯ ದಿನಾಂಕ ಸಪ್ಟೆಂಬರ್ 27 ಆಗಿದೆ. ಅನುಭವ 2-7 ವರ್ಷಗಳು ಅಭ್ಯರ್ಥಿಯು SQL, Informatica Power centre ಕೌಶಲ್ಯಗಳನ್ನು ಹೊಂದಿರಬೇಕು. ಉತ್ತಮ ಸಂವಹನ ಕೌಶಲ್ಯವನ್ನು ಅಭ್ಯರ್ಥಿಯು ಹೊಂದಿದ್ದು ಯಾವುದೇ ಸವಾಲುಗಳನ್ನು ಪರಿಹರಿಸುವ ಬುದ್ಧಿಮತ್ತೆಯನ್ನು ಹೊಂದಿರಬೇಕಾಗುತ್ತದೆ. ಬಿಸ್‌ನೆಸ್ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವ ಅನುಭವ ಇರಬೇಕು ಹಾಗೂ ಕೋಡ್ ಮೈಗ್ರೇಶನ್ ಹಾಗೂ ಇಂಪ್ಲಿಮೆಂಟೇಶನ್ ಬೆಂಬಲವನ್ನು ಅರಿತಿರಬೇಕು ಎಂಬುದಾಗಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:IT Companies Hiring: ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರಿಗೆ ಗುಡ್​ ನ್ಯೂಸ್: 120% ಸಂಬಳ ಹೆಚ್ಚಳ, ಬೋನಸ್ ಕೂಡ ಜಾಸ್ತಿ

ಟಿಸಿಎಸ್ ಡಿಜಿಟಲ್ ಸ್ಕಿಲ್ಸ್ ಕಂಟೆಸ್ಟ್ - ಜಾವಾ ಫುಲ್ ಸ್ಟಾಕ್ ಡೆವಲಪರ್:

ಹುದ್ದೆಯು ಫುಲ್ ಸ್ಟಾಕ್ ಡೆವಲಪರ್ ಆಗಿದ್ದು ನೇಮಕಾತಿ ಪ್ರಕ್ರಿಯೆಯ ಅಂತಿಮ ದಿನಾಂಕ ಸಪ್ಟೆಂಬರ್ 27 ಆಗಿದೆ. ಅಭ್ಯರ್ಥಿಯು 2-7 ವರ್ಷಗಳ ಅನುಭವವನ್ನು ಹೊಂದಿರಬೇಕು. Java 8, Spring, Spring Boot, Swagger, JSON, Cassandra MongoDB Oracle, Maven, Maven, Jenkins, Junit ಹಾಗೂ Mockito ಕೌಶಲ್ಯ ಹೊಂದಿರಬೇಕು ಎಂದು ಸಂಸ್ಥೆ ತಿಳಿಸಿದೆ. ಟೂಲ್ಸ್ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು ಅಂತೆಯೇ ಯುನಿಟ್ ಟೆಸ್ಟಿಂಗ್‌ನಲ್ಲಿ ಉತ್ತಮ ಅನುಭವ ಹೊಂದಿರಬೇಕು ಎಂಬುದಾಗಿ ತಿಳಿಸಿದೆ. ಉತ್ತಮ ಸಂವಹನ ಕೌಶಲ್ಯವನ್ನು ಅಭ್ಯರ್ಥಿಯು ಹೊಂದಿರಬೇಕು ಎಂಬುದಾಗಿ ಸಂಸ್ಥೆಯು ತಿಳಿಸಿದೆ.

ಟಿಸಿಎಸ್ ಡಿಜಿಟಲ್ ಸ್ಕಿಲ್ಸ್ ಕಂಟೆಸ್ಟ್ – ಬಿಗ್ ಡಾಟಾ:

ಹಡೂಪ್ ಸಪೋರ್ಟ್ ಹಾಗೂ ಡೆವಲಪ್‌ಮೆಂಟ್ ಹುದ್ದೆಯ ನೇಮಕಾತಿ ನಡೆಸಿದ್ದು ಅಂತಿಮ ದಿನಾಂಕ ಸಪ್ಟೆಂಬರ್ 27 ಆಗಿದೆ. ಅಭ್ಯರ್ಥಿಯು 2-7 ವರ್ಷಗಳ ಅನುಭವವನ್ನು ಹೊಂದಿರಬೇಕು ಎಂದು ಕಡ್ಡಾಯವಾಗಿ ತಿಳಿಸಿದೆ. Big Data Hdfs Concepts, Hadoop ಕೌಶಲ್ಯದಲ್ಲಿ ಅಭ್ಯರ್ಥಿಗಳು ಪ್ರವೀಣರಾಗಿರಬೇಕು ಎಂದು ಸಂಸ್ಥೆ ತಿಳಿಸಿದೆ. ಜಾವಾ ಅನುಭವ ಹೊಂದಿರಬೇಕು. ಅದೇ ರೀತಿ ಉತ್ತಮ ಸಂವಹನ ಕೌಶಲ್ಯವನ್ನು ಅಭ್ಯರ್ಥಿಯು ಹೊಂದಿರಬೇಕು ಹಾಗೂ ಕಸ್ಟಮರ್ ಅನ್ನು ನಿಭಾಯಿಸುವ ತಂತ್ರಗಾರಿಕೆಯನ್ನು ಹುದ್ದೆಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕು ಎಂದು ತಿಳಿಸಿದೆ.

ಇದನ್ನೂ ಓದಿ:Haunted Roads: ಭಾರತದ ಈ ಹೈವೇಗಳಲ್ಲಿ ಬಿಳಿ ಸೀರೆಯ ದೆವ್ವ, ವೀರಪ್ಪನ್ ಪ್ರೇತ ಕಾಣಿಸುತ್ತಂತೆ; ಭಯ ಹುಟ್ಟಿಸುವ ರಸ್ತೆಗಳಿವು

ಟಿಸಿಎಸ್ ಡಿಜಿಟಲ್ ಸ್ಕಿಲ್ಸ್ ಕಂಟೆಸ್ಟ್ – NET ಫುಲ್ ಸ್ಟಾಕ್ ಡೆವಲಪರ್:

ಡೆವಲಪರ್ ಹುದ್ದೆಗೆ ಸಂಸ್ಥೆಯು ನೇಮಕಾತಿಯನ್ನು ನಡೆಸುತ್ತಿದ್ದು ಅಂತಿಮ ದಿನಾಂಕ ಸಪ್ಟೆಂಬರ್ 27 ಆಗಿದೆ. ಇರಬೇಕಾದ ಅನುಭವ 2-7 ವರ್ಷವಾಗಿದೆ. C#, ASP.NET, CSS, Html, Javascript, Jquery, Bootstrap ಕೌಶಲ್ಯವನ್ನು ಅಭ್ಯರ್ಥಿಯು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ. ಟೆಕ್ ಆಧಾರಿತ ಪರಿಹಾರಗಳನ್ನು ಅನ್ವಯಿಸುವ ಪ್ರತಿಭೆಯನ್ನು ಅಭ್ಯರ್ಥಿಯು ಹೊಂದಿರಬೇಕು ಎಂದು ಸಂಸ್ಥೆ ತಿಳಿಸಿದೆ. ಹಲವಾರು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರಬೇಕೆಂದು ಟಿಸಿಎಸ್ ಉದ್ಯೋಗ ವಿವರಗಳಲ್ಲಿ ನಮೂದಿಸಿದೆ. ವೆಬ್ ಅಪ್ಲಿಕೇಶನ್ ಸೆಕ್ಯುರಿಟಿ ಅಂಶಗಳನ್ನು ಗುರುತಿಸುವ ಹಾಗೂ ಹೊಂದಿಸುವ ಚಾತುರ್ಯವನ್ನು ಅಭ್ಯರ್ಥಿಯು ಹೊಂದಿರಬೇಕು ಎಂದು ಸಂಸ್ಥೆ ತಿಳಿಸಿದೆ.
Published by:Latha CG
First published: