TCS Recruitment: ಟಿಸಿಎಸ್​ನಲ್ಲಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

Job News: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಮೂಲಕ ತಮ್ಮ 10 ನೇ ತರಗತಿ ಮತ್ತು 12 ನೇ ತರಗತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ.

ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

  • Share this:
TCS Recruitment 2022: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) ತನ್ನ ಕಂಪನಿಯಲ್ಲಿ ಖಾಲಿ ಇರುವ ಕೆಲ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಗಣಿತ, ಅಂಕಿಅಂಶ ಅಥವಾ ಅರ್ಥಶಾಸ್ತ್ರದಲ್ಲಿ M.Sc ಪದವಿ ಅಥವಾ ಅರ್ಥಶಾಸ್ತ್ರದಲ್ಲಿ MA ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು  ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು ಜೂನ್​ 1 ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ಅಥವಾ ನಾವು ನೀಡುವ ನೇರ ಲಿಂಕ್​ ಮೂಲಕ ಅರ್ಜಿ ಹಾಕಬಹುದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ಅರ್ಹತೆ, ವೇತಮ ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದಿರುವುದು ಬಹಳ ಮುಖ್ಯ. ಹಾಗಾಗಿ ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.







































ಕಂಪೆನಿಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಹುದ್ದೆವಿವಿಧ ಹುದ್ದೆಗಳು
ಶೈಕ್ಷಣಿಕ ಅರ್ಹತೆಅರ್ಥಶಾಸ್ತ್ರದಲ್ಲಿ M.Sc ಪದವಿ ಅಥವಾ ಅರ್ಥಶಾಸ್ತ್ರದಲ್ಲಿ MA.
ಉದ್ಯೋಗ ಸ್ಥಳಭಾರತದಾದ್ಯಂತ
ವಯೋಮಿತಿಕನಿಷ್ಠ 18 ಗರಿಷ್ಠ 28
ಅರ್ಜಿ ಸಲ್ಲಿಸುವ ದಿನಾಂಕಯಾವುದೇ ನಿಗದಿತ ದಿನಾಂಕವಿಲ್ಲ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ನೇರವಾಗಿ ಅರ್ಜಿ ಹಾಕಿ 
ವೇತನ7 ಲಕ್ಷ ವರ್ಷಕ್ಕೆ
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್​ 1

ಭಾರತದಾದ್ಯಂತ ಖಾಲಿ ಇರುವ ಸುಮಾರು ಹುದ್ದೆಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಅರ್ಥಶಾಸ್ತ್ರದಲ್ಲಿ M.Sc ಪದವಿ ಅಥವಾ ಅರ್ಥಶಾಸ್ತ್ರದಲ್ಲಿ MA. ಡಿಪ್ಲೊಮಾ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿ. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕವಿಲ್ಲ, ಹಾಗೂ ಆಯ್ಕೆಯಾದವರಿಗೆ ಉತ್ತಮ ವೇತನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ.

ಅರ್ಥಶಾಸ್ತ್ರದಲ್ಲಿ M.Sc ಪದವಿ ಅಥವಾ ಅರ್ಥಶಾಸ್ತ್ರದಲ್ಲಿ MA. ಅಭ್ಯರ್ಥಿಗಳು 10 ನೇ ತರಗತಿ, 12 ನೇ ತರಗತಿ, ಡಿಪ್ಲೊಮಾ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರಬೇಕು. ಅಭ್ಯರ್ಥಿಗಳ 2020, 2021 ಅಥವಾ 2022 ರಲ್ಲಿ ಪಾಸ್​ ಆಗಿರಬೇಕು.

ಇದನ್ನೂ ಓದಿ: 17 ಅಸಿಸ್ಟೆಂಟ್​​ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ - ಜೂನ್​ 22 ಕೊನೆಯ ದಿನ

ವಯೋಮಿತಿ

ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಈ ನೇರ ಲಿಂಕ್ ಕ್ಲಿಕ್ ಮಾಡಿ 

ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಮೂಲಕ ತಮ್ಮ 10 ನೇ ತರಗತಿ ಮತ್ತು 12 ನೇ ತರಗತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ. 2 ವರ್ಷಗಳವರೆಗಿನ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸುವುದು ಹೇಗೆ?

TCS NextStep ಪೋರ್ಟಲ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಇತರ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನ:  ಜೂನ್​ 1, 2022

ಆಯ್ಕೆ ಪ್ರಕ್ರಿಯೆ

ನೇರ ಸಂದರ್ಶನ

ಟೆಸ್ಟ್​
Published by:Sandhya M
First published: