TCS Recruitment 2021: MBA ಫ್ರೆಶರ್ಸ್‌ಗೆ TCSನಲ್ಲಿ ಉದ್ಯೋಗ, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

TCS Recruitment 2021: ನೋಂದಣಿಯ ಕೊನೆಯ ದಿನಾಂಕವು ನವೆಂಬರ್ 9 ಆಗಿದ್ದು ಪರೀಕ್ಷಾ ದಿನಾಂಕಗಳನ್ನು ನಂತರ ಕಂಪನಿ ಪ್ರಕಟಿಸುತ್ತದೆ.

ಟಿಸಿಎಸ್​

ಟಿಸಿಎಸ್​

  • Share this:
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (Tata Consultancy Services) ತನ್ನ ಎಂಬಿಎ ಹೈರಿಂಗ್(MBA Hiring) ನಡಿಯಲ್ಲಿ ಅಭ್ಯರ್ಥಿಗಳನ್ನು ನೇಮಕಗೊಳಿಸುವುದಾಗಿ ತಿಳಿಸಿದೆ. 2022-23ರಲ್ಲಿ ಐಟಿ ಸಂಸ್ಥೆಗೆ ಸೇರಬಹುದಾದ ಎಲ್ಲಾ ಮ್ಯಾನೇಜ್‌ಮೆಂಟ್ ಪದವೀಧರರಿಗೆ(Management Graduates) ಟಿಸಿಎಸ್‌ನ (TCS) ಮ್ಯಾನೇಜ್‌ಮೆಂಟ್ ನೇಮಕಾತಿ(Management Recruitment) ಉಪಕ್ರಮವು ಪ್ರತ್ಯೇಕವಾಗಿ ತೆರೆದಿರುತ್ತದೆ. ನೋಂದಣಿಯ(Registration) ಕೊನೆಯ ದಿನಾಂಕವು ನವೆಂಬರ್ 9 ಆಗಿದ್ದು ಪರೀಕ್ಷಾ ದಿನಾಂಕಗಳನ್ನು ನಂತರ ಕಂಪನಿ ಪ್ರಕಟಿಸುತ್ತದೆ.

 ಗಮನಾರ್ಹವಾದ ವೃತ್ತಿಜೀವನಕ್ಕೆ ಬಲವಾದ ಅಡಿಪಾಯ ನಿರ್ಮಿಸುವ ವಿಧಾನವು ತೇರ್ಗಡೆ ವರ್ಷ 2020,2021 ಹಾಗೂ 2022ರ ಅನುಮತಿಸಲಾದ ವಿಶೇಷತೆಗಳಿಗೆ ಮಾತ್ರ. ಇದೀಗ ಎಲ್ಲಾ PAN ಇಂಡಿಯಾ ಅಭ್ಯರ್ಥಿಗಳಿಗೆ ತೆರೆದಿರುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ.


ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಅರ್ಜಿ ಸಲ್ಲಿಸುವವರು ಎಂಬಿಎ ಫ್ರೆಶರ್ಸ್
ವಯೋಮಿತಿ ಕನಿಷ್ಠ 18- ಗರಿಷ್ಠ- 28
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  09/11/2021
ಉದ್ಯೋಗದ ಸ್ಥಳ ಪ್ಯಾನ್ ಇಂಡಿಯಾ


ಅಪ್ಲೈ ಮಾಡುವುದು ಹೇಗೆ:
  • ಟಿಸಿಎಸ್ ನೆಕ್ಸ್ಟ್ ಸ್ಟೆಪ್ ಪೋರ್ಟಲ್ ಇಲ್ಲಿ ಲಾಗಿನ್ ಮಾಡಿ

  • ಟಿಸಿಎಸ್ ಎಮ್‌ಬಿಎ ಹೈರಿಂಗ್‌ಗಾಗಿ ನೋಂದಾಯಿಸಿ ಹಾಗೂ ಅಪ್ಲೈ ಮಾಡಿ

  • ನೀವು ನೋಂದಾಯಿತ ಬಳಕೆದಾರರಾಗಿದ್ದರೆ ಲಾಗಿನ್ ಮಾಡಿ ಹಾಗೂ ಅಪ್ಲಿಕೇಶನ್ ಫಾರ್ಮ್ ಪೂರ್ಣಗೊಳಿಸಲು ಮುಂದುವರಿಯಿರಿ. ಸಲ್ಲಿಕೆಯ ನಂತರ, ‘ಅಪ್ಲೈ ಫಾರ್ ಡ್ರೈವ್’ ಕ್ಲಿಕ್ ಮಾಡಿ

  • ನೀವು ಹೊಸ ಬಳಕೆದಾರರಾಗಿದ್ದರೆ, ರಿಜಿಸ್ಟರ್ ನೌ (ಇದೀಗ ನೋಂದಾಯಿಸಿ) ಕ್ಲಿಕ್ ಮಾಡಿ. ಐಟಿ ಕ್ಯಾಟಗರಿ ಆರಿಸಿ ನಿಮ್ಮ ವಿವರಗಳನ್ನು ತುಂಬಲು ಮುಂದುವರಿಯಿರಿ. ನಿಮ್ಮ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿ ಹಾಗೂ ‘ಡ್ರೈವ್‌ಗಾಗಿ ಅಪ್ಲೈ ಮಾಡಿ’ ಕ್ಲಿಕ್ ಮಾಡಿ.

  • ನಿಮ್ಮ ಟೆಸ್ಟ್ ವಿಧಾನವನ್ನು ರಿಮೋಟ್ ಎಂಬುದಾಗಿ ಆಯ್ಕೆಮಾಡಿ ಹಾಗೂ ‘ಅಪ್ಲೈ’ ಕ್ಲಿಕ್ ಮಾಡಿ

  • ನಿಮ್ಮ ಸ್ಟೇಟಸ್ ದೃಢೀಕರಿಸಲು, ‘ನಿಮ್ಮ ಅಪ್ಲಿಕೇಶನ್ ಟ್ರ್ಯಾಕ್’ ಮಾಡಿ ಪರಿಶೀಲಿಸಿ. ‘ಡ್ರೈವ್‌ಗಾಗಿ ಅಪ್ಲೈ ಮಾಡಲಾಗಿದೆ” ಎಂದು ಪ್ರತಿಬಿಂಬಿಸುವ ಸ್ಟೇಟಸ್ ಕಾಣಿಸುತ್ತದೆ.


ಇದನ್ನೂ ಓದಿ:Wipro is Hiring: ಫ್ರೆಶರ್ಸ್​ಗೆ ವಿಪ್ರೋದಲ್ಲಿ 3.5ಲಕ್ಷ ಪ್ಯಾಕೇಜ್ ಆಫರ್, ಅರ್ಜಿ ಹಾಕೋಕೆ ಹೀಗೆ ಮಾಡಿ

ಪರೀಕ್ಷಾ ಅರ್ಹತೆ:


ವಯಸ್ಸು:


ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 28 ವರ್ಷಗಳು


ಕೋರ್ಸ್:


2 ವರ್ಷಗಳ ಪೂರ್ಣಾವಧಿ MBA / MMS / PGDBA / PGDM / ಕೋರ್ಸ್ -ಮಾರ್ಕೆಟಿಂಗ್ / ಫಿನಾನ್ಸ್ / ಆಪರೇಶನ್ಸ್ / ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್/ ಮಾಹಿತಿ ತಂತ್ರಜ್ಞಾನ / ಸಾಮಾನ್ಯ ನಿರ್ವಹಣೆ / ವ್ಯಾಪಾರ ವಿಶ್ಲೇಷಣೆ / ಯೋಜನಾ ನಿರ್ವಹಣೆ


ಶೇಕಡಾವಾರು:


ಒಂದು ತರಗತಿಯಲ್ಲಿ ಕನಿಷ್ಟ ಒಟ್ಟು (ಎಲ್ಲಾ ಸೆಮಿಸ್ಟರ್‌ಗಳಲ್ಲಿ ಎಲ್ಲಾ ವಿಷಯಗಳ ಒಟ್ಟು) 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳು, XII ನೇ ತರಗತಿ, ಡಿಪ್ಲೊಮಾ (ಅನ್ವಯಿಸಿದರೆ), ಪದವಿ ಮತ್ತು/ಅಥವಾ ಸ್ನಾತಕೋತ್ತರ ಪರೀಕ್ಷೆಯು ಅಂತಿಮ ವರ್ಷದ ಯಶಸ್ವಿ ಪೂರ್ಣಗೊಳಿಸುವಿಕೆ/ ಸೆಮಿಸ್ಟರ್ ಒಳಗೊಂಡಿದೆ


ಹಿನ್ನಲೆ:
  1. MBA / ಇಂಟಿಗ್ರೇಟೆಡ್ MBAಗೆ ಮುಂಚಿತವಾಗಿ B. TECH / B.E ವಿದ್ಯಾಭ್ಯಾಸ ಕಡ್ಡಾಯವಾಗಿದೆ.


ಬ್ಯಾಚ್:


2020, 2021 ಮತ್ತು 2022ರ ಉತ್ತೀರ್ಣ ಬ್ಯಾಚ್‌ನ ವಿದ್ಯಾರ್ಥಿಗಳು ಅರ್ಹರು.


ವೃತ್ತಿ ಅನುಭವ:


ಯಾವುದೇ ಹಿಂದಿನ ವೃತ್ತಿ ಅನುಭವವನ್ನು ಉದ್ಯೋಗ ಪಾತ್ರ/ ಪ್ರೊಫೈಲ್‌ಗೆ ಅದರ ಪ್ರಸ್ತುತತೆಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.


ಬ್ಯಾಕ್‌ಲಾಗ್‌ಗಳು (ಉಳಿಕೆಗಳು):


ಟಿಸಿಎಸ್ ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಬ್ಯಾಕ್‌ಲಾಗ್‌ಗಳನ್ನು ಹೊಂದಿರಬಾರದು.


ವಿಸ್ತೃತ ಶಿಕ್ಷಣ:


ವಿದ್ಯಾರ್ಥಿಗಳು ತಮ್ಮ ಅತ್ಯುನ್ನತ ಅರ್ಹತೆಯಲ್ಲಿ ಯಾವುದೇ ವಿಸ್ತೃತ ಶಿಕ್ಷಣವನ್ನು ಹೊಂದಿರಬಾರದು.


ಶಿಕ್ಷಣದ ಅಂತರ:


ಒಟ್ಟಾರೆ ಶೈಕ್ಷಣಿಕ ಅಂತರವು 2 ವರ್ಷಗಳನ್ನು ಮೀರಬಾರದು. ಶಿಕ್ಷಣದಲ್ಲಿ ಅಂತರ ಘೋಷಿಸುವುದು ಕಡ್ಡಾಯವಾಗಿದೆ. ಹಾಗೇನಾದರೂ ಇದ್ದಲ್ಲಿ, ವಿದ್ಯಾರ್ಥಿಗಳು ಡಾಕ್ಯುಮೆಂಟ್ ಪ್ರೂಫ್ ಬೆಂಬಲಿಸುವ ಮಾನ್ಯ ಕಾರಣಗಳನ್ನು ಒದಗಿಸಬೇಕು.


ಶಾಲಾ ಶಿಕ್ಷಣ:


ವಿದ್ಯಾರ್ಥಿಗಳು ನಿಯಮಿತ/ ಪೂರ್ಣ ಸಮಯದ ಶಾಲಾ ಶಿಕ್ಷಣವನ್ನು ಮಾತ್ರ ಪೂರ್ಣಗೊಳಿಸಿರಬೇಕು. NIOS (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ನಿಂದ ತಮ್ಮ ಸೆಕೆಂಡರಿ ಮತ್ತು / ಅಥವಾ ಸೀನಿಯರ್ ಸೆಕೆಂಡರಿ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇತರ ಕೋರ್ಸ್‌ಗಳು ಪೂರ್ಣ ಸಮಯವಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರು.


ಪರೀಕ್ಷಾ ವಿವರಗಳು:


ಪರೀಕ್ಷೆಯು 47 ಪ್ರಶ್ನೆಗಳನ್ನು ಒಳಗೊಂಡಿದ್ದು 90 ನಿಮಿಷಗಳಲ್ಲಿ ಉತ್ತರಿಸಬೇಕು.


ಇದು ಈ ಕೆಳಗಿನ ವಿಭಾಗಗಳನ್ನು ಒಳಗೊಂಡಿದೆ:


ಮೌಖಿಕ ಸಾಮರ್ಥ್ಯ (7 ಪ್ರಶ್ನೆಗಳು)


ಪರಿಮಾಣಾತ್ಮಕ ಸಾಮರ್ಥ್ಯ ಪರೀಕ್ಷೆ (20 ಪ್ರಶ್ನೆಗಳು)


ಬ್ಯುಸಿನೆಸ್ ಸಾಮರ್ಥ್ಯ ಪರೀಕ್ಷೆ (20 ಪ್ರಶ್ನೆಗಳು)


ಉದ್ಯಮದಲ್ಲಿರುವ ವ್ಯಾಪಕವಾದ ಪ್ರವೃತ್ತಗಳಿಗೆ ಅನುಗುಣವಾಗಿ ನಮ್ಮ ಸಿಬ್ಬಂದಿ ಸಂಖ್ಯೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ನಾವು ಉದ್ಯಮದ ಅತ್ಯುತ್ತಮ ಧಾರಣ ದರಗಳನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಟಿಸಿಎಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ. ಟಿಸಿಎಸ್ FY22 22ರ ದ್ವಿತೀಯಾರ್ಧದಲ್ಲಿ ಇನ್ನೂ 35,000 ಜನರನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ.

Published by:Latha CG
First published: