Free Career Course: ಟಿಸಿಎಸ್‌ನಿಂದ ಪದವೀಧರರಿಗೆ 15 ದಿನಗಳ ಉಚಿತ ಕೋರ್ಸ್; ಅಭ್ಯರ್ಥಿಗಳು ಅಪ್ಲೈ ಮಾಡುವುದು ಹೇಗೆ?

ಇದು 15 ದಿನಗಳ ಉಚಿತ ಕೆರಿಯರ್(Free career course) ಸಿದ್ಧತಾ ಕೋರ್ಸ್ ಆಗಿದ್ದು ಭವಿಷ್ಯದಲ್ಲಿ ಉದ್ಯೋಗ ಕೌಶಲ್ಯಗಳನ್ನು ಯುವಜನರಿಗೆ ಒದಗಿಸುವ ನಿಟ್ಟಿನಲ್ಲಿ ರೂಪುತಾಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪದವಿಪೂರ್ವ, ಪದವೀಧರರು(Graduates) ಮತ್ತು ಸ್ನಾತಕೋತ್ತರ ಪದವೀಧರರು(Post Graduates) ಮತ್ತು ಫ್ರೆಶರ್‌(Freshers)ಗಳು ಈ ಪ್ರೊಗ್ರಾಮ್‌ಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲ್ಟನ್ಸಿ(Tata Consultancy Services -TCS) ‘ಟಿಸಿಎಸ್ ಐಕಾನ್ ಕೆರಿಯರ್ ಎಡ್ಜ್‘(TCS iON Career Edge) ಲಾಂಚ್ ಅನ್ನು ಘೋಷಿಸಿದೆ. ಇದು 15 ದಿನಗಳ ಉಚಿತ ಕೆರಿಯರ್(Free career course) ಸಿದ್ಧತಾ ಕೋರ್ಸ್ ಆಗಿದ್ದು ಭವಿಷ್ಯದಲ್ಲಿ ಉದ್ಯೋಗ ಕೌಶಲ್ಯಗಳನ್ನು ಯುವಜನರಿಗೆ ಒದಗಿಸುವ ನಿಟ್ಟಿನಲ್ಲಿ ರೂಪುತಾಳಿದೆ.

ಸೆಷನ್ ಕಾಲಾವಧಿ: 2 ವಾರಗಳು(Session Duration: 2 Weeks)

ಈ ಪ್ರೊಗ್ರಾಮ್‌ಗೆ ಅಪ್ಲೈ ಮಾಡುತ್ತಿರುವವರು ಪ್ರತಿ ವಾರದಲ್ಲಿ ಕನಿಷ್ಠ ಪಕ್ಷ 7 ರಿಂದ 10 ಗಂಟೆಗಳನ್ನು ನೀಡಬೇಕಾಗುತ್ತದೆ. ಕೋರ್ಸ್‌ನ ಭಾಷೆಯು ಇಂಗ್ಲಿಷ್‌ ಆಗಿದೆ ಹಾಗೂ ಫಾರ್ಮ್ಯಾಟ್ ಆನ್‌ಲೈನ್‌ನಲ್ಲಿರುತ್ತದೆ ಮತ್ತು ಸ್ವಯಂ ಗಮನವನ್ನು ಹೊಂದಿದೆ.

ಯಾರು ಅಪ್ಲೈ ಮಾಡಬಹುದು?(Who can apply:)

ಪದವಿಪೂರ್ವ, ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಮತ್ತು ಫ್ರೆಶರ್‌ಗಳು ಈ ಪ್ರೊಗ್ರಾಮ್‌ಗೆ ಅಪ್ಲೈ ಮಾಡಬಹುದು. ಕೋರ್ಸ್ ಪ್ರಮುಖ ಉದ್ಯೋಗ ನಡವಳಿಕೆಗಳು ಹಾಗೂ ಸಂವಹನ ಕೌಶಲ್ಯಗಳನ್ನು ಒಳಗೊಂಡಿದ್ದು ಅಕೌಂಟ್‌ನಲ್ಲಿ, ಐಟಿ ಹಾಗೂ ಆರ್ಟಿಫಿಶಿಯಲ್ ಇಂಟಲಿಜನ್ಸಿಯಲ್ಲಿ ಫೌಂಡೇಶನ್ ಕೌಶಲ್ಯಗಳನ್ನು ಹೊಂದಿದೆ. ಟಿಸಿಎಸ್ iON ಕೆರಿಯರ್ ಎಡ್ಜ್‌ನಲ್ಲಿ ಕಲಿಯುವುದರಿಂದ ಯುವ ವೃತ್ತಿಪರರಿಗೆ 14 ಮಾಡ್ಯುಲ್‌ಗಳಾದ್ಯಂತ ಡೆಲಿವರಿ ಮಾಡಲಾಗುತ್ತದೆ. ಪ್ರತಿಯೊಂದು ಮಾಡ್ಯುಲ್ 1-2 ಗಂಟೆಗಳ ಕಲಾವಧಿಯನ್ನು ಹೊಂದಿದ್ದು ವಿಡಿಯೋಗಳು, ಪ್ರಸಂಟೇಶನ್‌ಗಳು, ರೀಡಿಂಗ್ ಮೆಟೀರಿಯಲ್, TCS ಪರಿಣಿತರಿಂದ ರೆಕಾರ್ಡ್ ಮಾಡಲಾದ ವೆಬಿನಾರ್‌ಗಳನ್ನು ಒಳಗೊಂಡಿದ್ದು ಮಾಡ್ಯುಲ್‌ನ ಕೊನೆಯಲ್ಲಿ ಸ್ವಯಂ-ಮೌಲ್ಯಮಾಪನಗಳನ್ನು ಒದಗಿಸಿದ್ದು ಉದ್ಯಮಕ್ಕೆ ಸಂಬಂಧಿಸಿ ಅದನ್ನು ಸರಿಹೊಂದಿಸಲಾಗುತ್ತದೆ.

ಇದನ್ನೂ ಓದಿ:Tips for Getting Jobs: ವಿಪ್ರೋ, ಇನ್ಫೋಸಿಸ್, ಟಾಟಾ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ಮಾಹಿತಿ

ಕೋರ್ಸ್‌ನ ಅಂತಿಮ ಹಂತದ ಮೌಲ್ಯಮಾಪನವು ಕಲಿಯುವವರ ಕಲಿಕಾ ಪರಿಕಲ್ಪನೆಗಳ ತಿಳುವಳಿಕೆಯನ್ನು ಮೌಲ್ಯಮಾಪನ ಮಾಡುತ್ತದೆ ಹಾಗೂ ಕೋರ್ಸ್‌ನ ಉದ್ದೇಶಗಳನ್ನು ಕಲಯುವವರು ಪೂರೈಸಿದಲ್ಲಿ ವೈಯಕ್ತಿಕಗೊಳಿಸಿದ ಪ್ರಮಾಣಪತ್ರಗಳನ್ನು ಕಲಿಯುವವರ ಪಡೆದುಕೊಳ್ಳುತ್ತಾರೆ. ಇದರೊಂದಿಗೆ ಕಲಿಯುವವರಿಗಾಗಿ ಡಿಜಿಟಲ್ ಚರ್ಚಾ ಕೊಠಡಿಯ ಅವಕಾಶವನ್ನು ಒದಗಿಸಲಾಗಿದ್ದು, ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅಲ್ಪಾವಧಿಯಲ್ಲಿ ಪೋಸ್ಟ್ ಮಾಡಿದ ಪ್ರಶ್ನೆಗಳಿಗೆ ಮಾಡರೇಟರ್ ಪ್ರತಿಕ್ರಿಯಿಸುತ್ತಾರೆ. ಇದಲ್ಲದೆ, ಕೋರ್ಸ್ ಅನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಡಿವೈಸ್‌ನಲ್ಲಿ ಪ್ರವೇಶಿಸಬಹುದು.

ಅಭ್ಯರ್ಥಿಗಳು ಏನನ್ನು ಕಲಿಯುತ್ತಾರೆ?(What the candidates will learn)

  • ಕಚೇರಿ ಸೌಹಾರ್ದತೆಯನ್ನು ನಿರ್ಮಿಸಲು ವರ್ತನೆಯ ಕೌಶಲ್ಯಗಳು

  • ಪ್ರಭಾವ ಬೀರಲು ಪ್ರಸಂಟೇಶನ್ ಹಾಗೂ ಸಂವಹನ ಕೌಶಲ್ಯಗಳು

  • ದೃಢವಾದ ಪ್ರೊಫೈಲ್ ಗೋಚರತೆಯನ್ನು ಒದಗಿಸಲು ಪರಿಣಾಮಕಾರಿ ರೆಸ್ಯುಮ್‌ಗಳ ರಚನೆ

  • ಕಾರ್ಪೊರೇಟ್ ಸೆಟ್ಟಿಂಗ್‌ನಲ್ಲಿ ಸೂಕ್ತ ವ್ಯಾಪಾರ ಶಿಷ್ಟಾಚಾರ

  • ಅಕೌಂಟಿಂಗ್ ಹಾಗೂ ಐಟಿ ಫಂಡಮೆಂಟಲ್‌ಗಳು

  • ಆರ್ಟಿಫಿಶಿಯಲ್ ಇಂಟಲಿಜನ್ಸಿ (ಕೃತಕ ಬುದ್ಧಿಮತ್ತೆ) ಪರಿಕಲ್ಪನೆ

  • ಗ್ರೂಪ್ ಡಿಸ್ಕಶನ್‌ಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು

  • ಕಾರ್ಪೊರೇಟ್ ಸಂದರ್ಶನಗಳನ್ನು ಎದುರಿಸಲು ಬೇಕಾಗಿರುವ ಕೌಶಲ್ಯಗಳು

  • ಪರಿಣಾಮಕಾರಿ ಇಮೇಲ್‌ಗಳ ಬರವಣಿಗೆ

  • ಕೆಲಸಕ್ಕೆ ಸಂಬಂಧಿಸಿದ ಟೆಲಿ ಕಾಲ್‌ಗಳಲ್ಲಿ ಮಾತನಾಡುವುದು

  • ಐಟಿ ರಂಗದಲ್ಲಿ ಫೌಂಡೇಶನ್ ಕೌಶಲ್ಯಗಳನ್ನು ಅರಿತುಕೊಳ್ಳುವುದು ಟಿಸಿಎಸ್ ಟೆಕ್

  • ಪರಿಣತರ ಸಲಹೆಗಳ ಮೂಲಕ ನಿಮ್ಮ ಮೂಲ ಐಟಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು


ಇದನ್ನೂ ಓದಿ:TCS Recruitment: ಟಿಸಿಎಸ್ ಕಂಪನಿಯಲ್ಲಿ ಎಂಜಿನಿಯರಿಂಗ್ ಹುದ್ದೆಗಳ ನೇಮಕಾತಿ; ಅಭ್ಯರ್ಥಿಯು ಈ ಕೌಶಲ್ಯಗಳನ್ನು ಹೊಂದಿರಲೇಬೇಕು

ಟಿಸಿಎಸ್ ಹೀಗೆ ಎಲ್ಲಾ ವಿಧದಲ್ಲಿಯೂ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಧ್ಯೇಯವನ್ನು ತನ್ನ ಕೋರ್ಸ್ ಮೂಲಕ ಹೊಂದಿದ್ದು, ಅಭ್ಯರ್ಥಿಗಳು ಈ ಸುವರ್ಣವಕಾಶದ ಪ್ರಯೋಜನವನ್ನು ಪಡೆದುಕೊಳ್ಳಹುದಾಗಿದೆ
Published by:Latha CG
First published: