TCS job Notification: ದೇಶದ ಪ್ರಮುಖ ಐಟಿ ಸೇವಾ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (Tata Consultancy Services Limited) ಈ ವರ್ಷ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ತಕ್ಷಣ ತಮ್ಮ ಅರ್ಜಿ ನಮೂನೆಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕು. BE, B.Tech, M.Tech, MCA, MSc ಮುಗಿಸಿರುವ ಮತ್ತು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಲು ಎದುರು ನೋಡುತ್ತಿರುವ ಆಸಕ್ತ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಿ, ಉತ್ತಮ ಕೆಲಸ ನಿಮ್ಮದಾಗಿಸಿಕೊಳ್ಳಬಹುದು.
ಸಂಸ್ಥೆ |
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ |
ಹುದ್ದೆ |
ವಿವಿಧ ಹುದ್ದೆಗಳು |
ವಯೋಮಿತಿ |
18 ರಿಂದ 28 |
ಶೈಕ್ಷಣಿಕ ಅರ್ಹತೆ |
BE, B.Tech, M.Tech, MCA, MSc |
ಆಯ್ಕೆ ವಿಧಾನ |
1. ಲಿಖಿತ ಪರೀಕ್ಷೆ
2. ಸಂದರ್ಶನ ಪರೀಕ್ಷೆ. |
ಅರ್ಜಿ ಸಲ್ಲಿಸಲು ಕೊನೆಯ ದಿನ |
ನಿಗಧಿಯಾಗಿಲ್ಲ |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಅರ್ಜಿ ಹಾಕಿ |
ಹೆಚ್ಚಿನ ಮಾಹಿತಿಗೆ |
18002093111 |
ವೇತನ |
ನಿಯಮ ಪ್ರಕಾರ |
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ಕಂಪೆನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.
ಸಂಸ್ಥೆ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್
ಹುದ್ದೆ: ವಿವಿಧ ಹುದ್ದೆಗಳು
ವಯೋಮಿತಿ: 18 ರಿಂದ 28
ಶೈಕ್ಷಣಿಕ ಅರ್ಹತೆ: BE, B.Tech, M.Tech, MCA, MSc
2019, 2020, ಅಥವಾ 2021 ರಲ್ಲಿ ಕಾಲೇಜು ಕೋರ್ಸ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 10, 12 ಮತ್ತು ಪದವಿಯಲ್ಲಿ ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಎರಡು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. 1. ಲಿಖಿತ ಪರೀಕ್ಷೆ
2. ಸಂದರ್ಶನ ಪರೀಕ್ಷೆ.
ಲಿಖಿತ ಪರೀಕ್ಷೆಯಲ್ಲಿ ಪ್ರಾವೀಣ್ಯತೆ ಮತ್ತು ಪ್ರೋಗ್ರಾಮಿಂಗ್ ಭಾಷೆಯ ಪರೀಕ್ಷೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು.
ಇದನ್ನೂ ಓದಿ: ಪ್ಲೇಸ್ಮೆಂಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಸ್ತುತ ಆನ್ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಎಂದು ಯಾವುದನ್ನೂ ಎಂಬುದನ್ನ ನಮೂದಿಸಿಲ್ಲ.
www.tcs.com ನಲ್ಲಿ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಕಂಪನಿಯ ಅಧಿಕೃತ ವೆಬ್ಸೈಟ್
www.tcs.com/careers/tcs-off-campus-hiring 'TCS Next Step Portal' ಲಿಂಕ್ ಅನ್ನು ಕ್ಲಿಕ್ ಮಾಡಿ. ನೇಮಕಾತಿಗೆ ಸಂಬಂಧಿಸಿದ ಸೂಚನೆಗಳು ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಒಮ್ಮೆ ಓದಿ.
ಶಿಕ್ಷಣ, ವಯಸ್ಸು, ಕಂಪ್ಯೂಟರ್ ಜ್ಞಾನ, ಸ್ಥಳ, ಫಿಟ್ನೆಸ್, ರುಜುವಾತುಗಳು, ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ, ಇಮೇಲ್ ವಿಳಾಸದಂತಹ ಇತರ ಸಾಮಾನ್ಯ ವಿವರಗಳನ್ನು ಭರ್ತಿ ಮಾಡಿ.
ಪೂರ್ಣಗೊಂಡ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಅರ್ಜಿದಾರರು ಆಗಾಗ ವೆಬ್ಸೈಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರಿ.
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಯಾವುದೇ ವಿವರಣೆ ಅಗತ್ಯವಿದ್ದರೆ, ವಿದ್ಯಾರ್ಥಿಗಳು 18002093111 ಅನ್ನು ಸಂಪರ್ಕಿಸಬಹುದು. ಅಲ್ಲದೇ ಇಮೇಲ್ ವಿಳಾಸ ilp.support@tcs.com ಕ್ಕೆ ಮೇಲ್ ಕೂಡ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ