TCS BPS Hiring: ಟೆಕ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(Tata Consultancy Services) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. TCS BPS ಫ್ರೆಶರ್ಸ್ ಹೈರಿಂಗ್-2022 ಮತ್ತು TCS ಸ್ಮಾರ್ಟ್ ಹೈರಿಂಗ್ 2022 ಕಾರ್ಯಕ್ರಮಗಳ ಅಡಿಯಲ್ಲಿ ನೇಮಕಾತಿ ಡ್ರೈವ್ ನಡೆಸುತ್ತಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಎಂಬಿಎ ಪೂರ್ಣಗೊಳಿಸಿರುವ ಫ್ರೆಶರ್ಸ್ ಅರ್ಜಿ ಸಲ್ಲಿಸಬಹುದು.
ಎಂಬಿಎ ಫ್ರೆಶರ್ಸ್ಗೆ ಸುವರ್ಣಾವಕಾಶ
ಟಿಸಿಎಸ್ ವಿವಿಧ ಕಾರ್ಯಕ್ರಮಗಳ ಮೂಲಕ ಫ್ರೆಶರ್ಗಳಿಂದ ಅರ್ಜಿ ಆಹ್ವಾನಿಸುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಕಳೆದ ವರ್ಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದೆ. ಇದೀಗ ಎಂಬಿಎ ಪಾಸಾದವರಿಗೆ ಹಾಗೂ ಓದುತ್ತಿರುವವರಿಗೆ TCS ಮತ್ತೊಂದು ಅವಕಾಶ ನೀಡುತ್ತಿದೆ. ಎಂಬಿಎ ನೇಮಕಾತಿ ಡ್ರೈವ್ಗೆ ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ: RCF Recruitment 2022: SSLC, ITI ಪಾಸಾದವರಿಗೆ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಉದ್ಯೋಗ
ಟಿಸಿಎಸ್ ನೇಮಕಾತಿ
TCS MBA ನೇಮಕಾತಿ ಪರೀಕ್ಷೆಗಳು ನವೆಂಬರ್ 21, 2021 ರಿಂದ ಪ್ರಾರಂಭವಾಗಿವೆ. ಬ್ಯಾಚ್-ವಾರು ಪರೀಕ್ಷೆಗಳು ನಡೆಯುತ್ತಿವೆ. ನೋಂದಣಿ ಪೂರ್ಣಗೊಂಡ ನಂತರ ಪರೀಕ್ಷೆಯ ವಿವರಗಳನ್ನು ಪರಿಶೀಲಿಸಬಹುದು. ಪರೀಕ್ಷೆ ಮತ್ತು ಸಂದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನು 2022-23 ರ ಆರ್ಥಿಕ ವರ್ಷದಲ್ಲಿ TCS ನಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ |
ವಿದ್ಯಾರ್ಹತೆ |
ಎಂಬಿಎ |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
16/01/2022 |
ಆಯ್ಕೆ ಪ್ರಕ್ರಿಯೆ |
ಲಿಖಿತ ಪರೀಕ್ಷೆ, ಸಂದರ್ಶನ |
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
TCS MBA ನೇಮಕಾತಿ ವಿವರಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - ಜನವರಿ 16, 2022
ಪರೀಕ್ಷಾ ದಿನಾಂಕ - TCS ಬ್ಯಾಚ್ಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ.
ನೋಂದಣಿಯನ್ನು ಪೂರ್ಣಗೊಳಿಸಿದವರಿಗೆ ಪರೀಕ್ಷಾ ಮಾಹಿತಿಯನ್ನು ಒದಗಿಸುತ್ತದೆ.
ಸಂದರ್ಶನದ ದಿನಾಂಕ- TCS ವಿದ್ಯಾರ್ಹತೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
2022, 2021 ರಲ್ಲಿ MBA ಪಾಸ್ ಆಗಿರುವವರು ಅರ್ಜಿ ಸಲ್ಲಿಸಬೇಕು.
2022 ರಲ್ಲಿ MBA ಪಾಸ್ ಆಗಿರುವವರು ಅಂದರೆ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ