TCS: ಈ ವರ್ಷಾಂತ್ಯದೊಳಗೆ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲು ಮುಂದಾದ ಟಿಸಿಎಸ್​

ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದ ವೇಳೆ ತನ್ನ ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳಲಿದೆ

ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದ ವೇಳೆ ತನ್ನ ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳಲಿದೆ

ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದ ವೇಳೆ ತನ್ನ ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳಲಿದೆ

  • Share this:
    ಕೋವಿಡ್​ನಿಂದಾಗಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ (Work from Home) ತಿಳಿಸಿರುವ ಹಲವಾರು ಕಂಪನಿಗಳು ನಿಧಾನವಾಗಿ ಈಗ ಉದ್ಯೋಗಿಗಳನ್ನು ಕಚೇರಿಯತ್ತ ಬರಮಾಡಿಕೊಳ್ಳುತ್ತಿದೆ. ಇದೀಗ ಟಾಟಾ ಕನ್ಸ್​ಲಟೆನ್ಸಿ ಸರ್ವಿಸಸ್​ Tata Consultancy Services (TCS) ತಮ್ಮ ಉದ್ಯೋಗಿಗಳನ್ನು ಮರಳಿಗೆ ಆಫೀಸಿಗೆ ಕರೆಸಿಕೊಳ್ಳಲು ಮುಂದಾಗಿದೆ. ಸೋಂಕು ಕಡಿಮೆಯಾಗಿರುವ ಜೊತೆಗೆ ಉದ್ಯೋಗಿಗಳು ಲಸಿಕೆ ಪಡೆಯುತ್ತಿರುವ ಹಿನ್ನಲೆ ಈ ನಿರ್ಧಾರಕ್ಕೆ ಕಂಪನಿ ಬಂದಿದೆ ಎನ್ನಲಾಗಿದೆ, ಅಲ್ಲದೇ, ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಎರಡು ಡೋಸ್​ ಲಸಿಕೆ ಪಡೆಯುವ ಕುರಿತು ಖುದ್ದು ವಿಚಾರಣೆ ನಡೆಸುತ್ತಿದ್ದು, ಆದಷ್ಟು ಬೇಗ ಈ ವರ್ಷಾಂತ್ಯದಲ್ಲಿ ಈ ಕೆಲಸ ಮುಗಿಸಲಿದೆ. ಬಳಿಕ ಮುಂದಿನ ವರ್ಷದಿಂದ ಉದ್ಯೋಗಿಗಳನ್ನು ಕಚೇರಿಗೆ ಬರುವಂತೆ ಸೂಚಿಸಿದೆ ಎಂದು ಎಕನಾಮಿಕ್​​ ಟೈಮ್ಸ್​ ವರದಿ ಮಾಡಿದೆ.

    ಈ ಸಂಬಂಧ ಮಾತನಾಡಿರುವ ಟಿಸಿಎಸ್​ನ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಜೇಶ್​​ ಗೋಪಿನಾಥನ್​​, ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಕಚೇರಿಗೆ ಉದ್ಯೋಗಿಗಳನ್ನು ಕರೆಸುವ ನಿರೀಕ್ಷೆ ಮಾಡಿದ್ದೇವೆ. ಈ ನಡುವೆ ಮೂರನೇ ಅಲೆ ಹೇಗೆ ಇರಲಿದೆ ಎಂಬ ಅಂಶ ಕೂಡ ಮುಖ್ಯ. ಎಲ್ಲಾವೂ ಸರಿಯಾದಲ್ಲಿ ಶೇ 70 ರಿಂದ 80 ರಷ್ಟು ಉದ್ಯೋಗಿಗಳು ಕಚೇರಿಗೆ ಮರಳಲಿದ್ದಾರೆ ಎಂದಿದ್ದಾರೆ.

    ಭಾರತದಲ್ಲಿ ಕಂಪನಿಯ ಸುಮಾರು 90% ಸಿಬ್ಬಂದಿ ಇಲ್ಲಿಯವರೆಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಇನ್ನು ಶೇ 50 ರಷ್ಟು ಉದ್ಯೋಗಿಗಳು ಈಗಾಗಲೇ ತಾವು ಕೆಲಸಕ್ಕೆ ಹಾಜರಾಗುತ್ತೇವಎ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
    ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿದ್ದು ಸುಮಾರು 150 ಶತಕೋಟಿ ಡಾಲರ್​ ಕೊಡುಗೆಯನ್ನು ಕಂಪನಿಗೆ ನೀಡುತ್ತಿದೆ, ಅಲ್ಲದೇ ಶೇ 15 ರಷ್ಟು ಸಾಫ್ಟ್​ವೇರ್​ ರಫ್ತು ಕೊಡುಗೆಯನ್ನು ಹೊಂದಿದೆ. 4.6 ದಶಲಕ್ಷ ಉದ್ಯೋಗಿಗಳು ಅಂದರೆ ಕಂಪನಿಯ ಹತ್ತನೇ ಒಂದು ಭಾಗ ಭಾರತ ಹೊಂದಿದೆ. ಜಾಗತಿಕ ತಂತ್ರಜ್ಞಾನದ ಹೊರಗುತ್ತಿಗೆ ಮಾರುಕಟ್ಟೆಯಲ್ಲಿ ಟಿಸಿಎಸ್​ ಪಾಲು ಹೆಚ್ಚನ್ನು ಪಡೆಯಲು ನಿರೀಕ್ಷೆ ಮಾಡಲಾಗುತ್ತಿದೆ ಎಂದು ಗೋಪಿನಾಥನ್​ ತಿಳಿಸಿದ್ದಾರೆ.

    ಟಿಸಿಎಸ್ 2025 ರ ವೇಳೆಗೆ ಕೇವಲ 25% ನಷ್ಟು ಸಿಬ್ಬಂದಿಗಳು ಮಾತ್ರ ಕಂಪನಿಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ಕಂಪನಿಯು ಖಾಲಿ ಇರುವ ಜಾಗವನ್ನು ತನ್ನ ಪ್ರಯೋಗಾಲಯಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಮತತು ಡಿ) ಸೌಲಭ್ಯಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ

    ಇದನ್ನು ಓದಿ: ಕರ್ನಾಟಕ ಬೆನ್ನಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಮಿಳುನಾಡಿನಲ್ಲೂ ವಿನಾಯಿತಿ

    ಕಳೆದ ಬಾರಿ ಕಂಪನಿ ಪ್ರಕಟಿಸಿದ ಮೊದಲ ತ್ರೈಮಾಸಿಕದ ಆರ್ಥಿಕ ಫಲಿತಾಂಶದಲ್ಲಿ ಟಿಸಿಎಸ್ ತನ್ನಲ್ಲಿ 5 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ ಎಂದು ಘೋಷಿಸಿತ್ತು. ಐಟಿ ಬೆಹೆಮೊಥ್ ಎಫ್‌ವೈ 22 ರ ಕ್ಯೂ 1 ರಲ್ಲಿ ರೂ 9,008 ಕೋಟಿ ಲಾಭ ಪಡೆದಿದೆ. ಅಲ್ಲದೇ ಈ ಲಾಭಾ ವರ್ಷದಿಂದ ವರ್ಷಕ್ಕೆ 28.5% ಹೆಚ್ಚಾಗಿದೆ. ಅದರ ಕಾರ್ಯಪಡೆಯು ವರ್ಷದಿಂದ ವರ್ಷಕ್ಕೆ 17.3% ಏರಿತು ಮತ್ತು 5,09,058 ಕ್ಕೆ ಬಂದಿತು. ಇದು ತನ್ನ ಅತ್ಯಧಿಕ ತ್ರೈಮಾಸಿಕ ನಿವ್ವಳ ಹೆಡ್‌ಕೌಂಟ್ ಸೇರ್ಪಡೆ 20,409 ಅನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದೆ.

    ಇನ್ನು ಟಿಸಿಎಸ್​ ಹೊರತಾಗಿ ಹಲವು ಕಂಪನಿಗಳು ಈಗಾಗಲೇ ಮನೆಯಿಂದ ಕೆಲಸ ಮಾಡುವ ಸೌಲಭ್ಯವನ್ನು ಮುಂದಿನ ವರ್ಷದಿಂದ ಕಡಿಮೆ ಮಾಡುವ  ನಿರ್ಧಾರ ಪ್ರಕಟಿಸಿದೆ. ತನ್ನ ನೌಕರರ ಲಸಿಕೆ ವಿತರಣೆ ಕಾರ್ಯದ ಮೇಲೆ ಹೆಚ್ಚಿನ ಗಮನ ಹರಿಸಿ, ಬಳಿಕ ಸುರಕ್ಷಾತ ಕ್ರಮಗಳೊಂದಿಗೆ ಕಚೇರಿಗೆ ಕರೆಸಿಕೊಳ್ಳಲು ಮುಂದಾಗಿದೆ.
    Published by:Seema R
    First published: