Jobs Alert: ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಿಂದ 1 ಲಕ್ಷಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳ ನೇಮಕಾತಿ; ವಿವರ ಇಲ್ಲಿದೆ

ಭಾರತದ ಎರಡನೆಯ ಅತಿದೊಡ್ಡ ಕಂಪನಿಯಾಗಿರುವ ಇನ್ಫೋಸಿಸ್ ತನ್ನ ಜಾಗತಿಕ ಪದವೀಧರ ಯೋಜನೆಯ ಭಾಗವಾಗಿ FY22 ಗಾಗಿ 55,000 ಕ್ಕಿಂತಲೂ ಹೆಚ್ಚಿನ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಟಿ ದಿಗ್ಗಜರುಗಳಾದ ಟಿಸಿಎಸ್, ವಿಪ್ರೋ ಹಾಗೂ ಇನ್ಫೋಸಿಸ್ (TCS, Wipro and Infosys) ತಮ್ಮ ಮೂರನೇ ತ್ರೈಮಾಸಿಕ (Q3) ಫಲಿತಾಂಶಗಳನ್ನು ಘೋಷಿಸಿದ್ದು ಈ ಕಾಲಾವಧಿಯ ಆದಾಯ ಲಾಭ ಗಳಿಕೆಗಳ ವಿವರಗಳನ್ನು ಹಂಚಿಕೊಂಡಿವೆ. ಕಂಪನಿಗಳು ತಮ್ಮ ನೇಮಕಾತಿ ಪ್ರಕ್ರಿಯೆಗಳ ಕುರಿತು ಕೂಡ ಮಾಹಿತಿ ಹಂಚಿಕೊಂಡಿದ್ದು ಆರ್ಥಿಕ ವರ್ಷ 2022 ರಲ್ಲಿ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ತಿಳಿಸಿವೆ. ಕಳೆದ ವರ್ಷ ಇದು ಪ್ರಮುಖ ದಾಖಲೆಯನ್ನು ನಿರ್ಮಿಸಿತ್ತು. 2021 ರಲ್ಲಿ ಮೂರು ಪ್ರಮುಖ ಐಟಿ ಸಂಸ್ಥೆಗಳು ದಾಖಲೆಯ 1.7 ಲಕ್ಷ ಉದ್ಯೋಗಿಗಳ ನೇಮಕಾತಿಯನ್ನು ನಡೆಸಿದ್ದವು. 2020 ರಲ್ಲಿ ಈ ಪ್ರಮಾಣ 31,000 ಆಗಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಸಾಂಕ್ರಾಮಿಕದ ಮಧ್ಯೆ ಕೂಡ ಭಾರತವು ಡಿಜಿಟಲ್ ಮಾದರಿಗೆ (Digital Model) ತನ್ನನ್ನು ಮಾರ್ಪಡಿಸಿಕೊಂಡಿರುವುದು ಈ ದಿಢೀರ್ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಕಳೆದ ವರ್ಷ ಈ ಕಂಪನಿಗಳ ನೇಮಕಾತಿ ಪ್ರಕ್ರಿಯೆಯ ಹೆಚ್ಚಳಕ್ಕೆ (Hiring Process) ಕಾರಣವಾಗಿರುವುದು ಸಿಬ್ಬಂದಿ ಸಂಖ್ಯೆಯಲ್ಲಿ ಉಂಟಾದ ಕ್ಷೀಣತೆ (ನೌಕರರ ನಿವೃತ್ತಿ ಹಾಗೂ ರಾಜೀನಾಮೆಯ (Employee Retirement) ನಂತರ ಬದಲಿ ವ್ಯವಸ್ಥೆ ಮಾಡದಿರುವುದು) ಕೂಡ ಇಲ್ಲಿ ಮಹತ್ವದ ಪಾತ್ರ ವಹಿಸಿದೆ.

ಇನ್ಫೋಸಿಸ್, ಟಿಸಿಎಸ್ ಹಾಗೂ ವಿಪ್ರೋ ಸಂಸ್ಥೆಗಳ ನೇಮಕಾತಿ ಟಾರ್ಗೆಟ್‌ಗಳು:

ಆರ್ಥಿಕವರ್ಷ 22 ರಲ್ಲಿ ಇನ್ಫೋಸಿಸ್ ನೇಮಕಾತಿ:
ಭಾರತದ ಎರಡನೆಯ ಅತಿದೊಡ್ಡ ಕಂಪನಿಯಾಗಿರುವ ಇನ್ಫೋಸಿಸ್ ತನ್ನ ಜಾಗತಿಕ ಪದವೀಧರ ಯೋಜನೆಯ ಭಾಗವಾಗಿ FY22 ಗಾಗಿ 55,000 ಕ್ಕಿಂತಲೂ ಹೆಚ್ಚಿನ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ. ಡಿಸೆಂಬರ್ 2021 ರ ತ್ರೈಮಾಸಿಕದ ಕೊನೆಯಲ್ಲಿ ತನ್ನ ಫಲಿತಾಂಶಗಳನ್ನು ಘೋಷಿಸುವ ಸಂದರ್ಭದಲ್ಲಿ ಕಂಪನಿ ನೇಮಕಾತಿ ವಿವರಗಳನ್ನು ತಿಳಿಸಿದೆ.

ಇದನ್ನೂ ಓದಿ: TCS Jobs 2022: MBA ಫ್ರೆಶರ್ಸ್​ ನೇಮಕಕ್ಕೆ ಅರ್ಜಿ ಆಹ್ವಾನಿಸಿದ TCS, Apply ಮಾಡಲು 2 ದಿನ ಅಷ್ಟೇ ಬಾಕಿ

ಸೂಕ್ತ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಅಭಿವೃದ್ಧಿಯಲ್ಲಿ ಹೂಡಿಕೆಗಳನ್ನು ನಡೆಸುವುದನ್ನು ಮುಂದುವರಿಸುವುದಾಗಿ ಕಂಪನಿ ತಿಳಿಸಿದ್ದು ಯೋಜನೆಯನ್ನು ವಿಸ್ತರಿಸುವ ಮೂಲಕ FY22 ಗಾಗಿ 55,000 ಕ್ಕಿಂತಲೂ ಹೆಚ್ಚಿನ ಫ್ರೆಶರ್‌ಗಳನ್ನು ನೇಮಿಸಿಕೊಂಡು ಇನ್ನಷ್ಟು ಬೆಳವಣಿಗೆ ಯೋಜನೆಗಳನ್ನು ಪೂರೈಸಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ. ಉದ್ಯೋಗಿಗಳ ಒಟ್ಟು ಸಂಖ್ಯೆಯು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದಾಗ ಈ ಸಂಖ್ಯೆ 2,79,617 ರಿಂದ ಡಿಸೆಂಬರ್ 2021 ರಲ್ಲಿ 2,92,067 ಕ್ಕೆ ಬಂದು ತಲುಪಿದೆ.

ಆರ್ಥಿಕವರ್ಷ 22 ರಲ್ಲಿ ಟಿಸಿಎಸ್ ನೇಮಕಾತಿ:
ಸಂಸ್ಥೆ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದು ನೇಮಕಾತಿ ಸಂಖ್ಯೆಗಳ ವಿವರಗಳನ್ನು ಬಹಿರಂಗಪಡಿಸಿಲ್ಲ. ನಮ್ಮ ನೇಮಕಾತಿ ಪ್ರಕ್ರಿಯೆಯನ್ನು ನಾವು ಮುಂದುವರಿಸಲಿದ್ದು ಮುಂಬರುವ ತ್ರೈಮಾಸಿಕಕ್ಕಾಗಿ ಯಾವುದೇ ನಿರ್ದಿಷ್ಟ ಸಂಖ್ಯೆಯನ್ನು ಹೊಂದಿಲ್ಲ ಎಂಬುದಾಗಿ ಕಂಪನಿಯ ಪ್ರಮುಖ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ತಿಳಿಸಿದ್ದಾರೆ. ಭಾರತದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಇತ್ತೀಚೆಗೆ ತಾನೇ 2,00,000 ಉದ್ಯೋಗಿಗಳನ್ನು ತಲುಪುವ ಮೂಲಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಕಾರ್ಯಪಡೆಯ ವಿಷಯದಲ್ಲಿ ಟಿಸಿಎಸ್ ಅತಿದೊಡ್ಡ ಹೆಸರನ್ನು ಗಳಿಸಿದೆ.

ಆರ್ಥಿಕವರ್ಷ 22 ರಲ್ಲಿ ವಿಪ್ರೋ ನೇಮಕಾತಿ:
ಆರ್ಥಿಕವರ್ಷ 23 ರಲ್ಲಿ 30,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆ ಇರುವುದಾಗಿ ವಿಪ್ರೋ ತಿಳಿಸಿದೆ. ದೃಢವಾದ ಬೇಡಿಕೆಯ ವಾತಾವರಣವನ್ನು ನಿರ್ವಹಿಸುವ ನಿಟ್ಟಿನಲ್ಲಿ ಪೂರೈಕೆಯನ್ನು ಖಾತ್ರಿಪಡಿಸುವ ಇರಾದೆಯನ್ನು ವ್ಯಕ್ತಪಡಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಾಗ ಈ ವರ್ಷ 2022 ರಲ್ಲಿ 70% ಕ್ಕಿಂತ ಹೆಚ್ಚಿನ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಯೋಜನೆಯಲ್ಲಿ ವಿಪ್ರೋ ಬದ್ಧವಾಗಿದೆ ಎಂಬುದಾಗಿ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: JOBS: ಧಾರವಾಡ ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 31,000

ಅದೇ ರೀತಿ ಆರ್ಥಿಕ ವರ್ಷ 23 ರಲ್ಲಿ 30,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಯೋಜನೆಯಲ್ಲಿದೆ ಎಂದು ವಿಪ್ರೋದ ಅಧ್ಯಕ್ಷರಾದ ಸೌರಭ್ ಗೌಲಿ ತಿಳಿಸಿದ್ದಾರೆ ಹಾಗೂ 2022 ಕ್ಕಾಗಿ ಫ್ರೆಶರ್‌ಗಳ ಸಂಖ್ಯೆಯು 17,500 ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಸಾಂಕ್ರಾಮಿಕದ ನಡುವೆಯೂ ಐಟಿ ಸಂಸ್ಥೆಗಳು ನ್ಯೂ ನಾರ್ಮಲ್ ಅಂಶಗಳಿಗೆ ಒಗ್ಗಿಕೊಂಡಿದ್ದು ಫ್ರೆಶರ್‌ಗಳಿಗೆ ಅವಕಾಶವನ್ನೊದಗಿಸುವ ಮೂಲಕ ನೈಜ ಬುದ್ಧಿಮತ್ತೆಯ ಹುಡುಕಾಟದಲ್ಲಿ ತೊಡಗಿವೆ.
Published by:vanithasanjevani vanithasanjevani
First published: