IT Companies Hiring: ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರಿಗೆ ಗುಡ್​ ನ್ಯೂಸ್: 120% ಸಂಬಳ ಹೆಚ್ಚಳ, ಬೋನಸ್ ಕೂಡ ಜಾಸ್ತಿ 

ಅಭ್ಯರ್ಥಿಗಳು ಉತ್ತಮ ವೇತನವನ್ನು ಕಂಪನಿಗಳಿಂದ ನಿರೀಕ್ಷಿಸುತ್ತಿದ್ದು ಆ ನಿಟ್ಟಿನಲ್ಲಿ ಕಂಪನಿಗಳೂ ಕೂಡ ಅಭ್ಯರ್ಥಿಗಳಿಗಾಗಿ ವೇತನದಲ್ಲಿ ಏರಿಕೆಯನ್ನು ಮಾಡಿವೆ. ಕಂಪನಿಗಳು 70 ರಿಂದ 120% ದಷ್ಟು ಸಂಬಳದ ಏರಿಕೆಯನ್ನು ಮಾಡುತ್ತಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಹೆಚ್ಚಳವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಫುಲ್ ಸ್ಟಾಕ್ ಡೆವಲಪರ್‌ಗಳ(Full stock developer) ವೇತನದಲ್ಲಿ ಹೆಚ್ಚಳವಾಗಲಿದ್ದು 70-120% ಶ್ರೇಣಿಯಲ್ಲಿ ಸಂಬಳ ಏರಿಕೆಯನ್ನು ಪಡೆಯಲಿದ್ದಾರೆ ಎಂಬುದು ವರದಿಯಿಂದ ತಿಳಿದುಬಂದಿದೆ. ಸಾಂಕ್ರಾಮಿಕದ ಆರಂಭದಲ್ಲಿ ಎಲ್ಲಾ ಉದ್ಯಮಗಳು ನೆಲಕ್ಕಚ್ಚಿದ್ದವು. ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಮಾಡುವ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಎಷ್ಟೋ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದರು. ಸಣ್ಣ ಪುಟ್ಟ ವ್ಯಾಪಾರ ಮಾಡುವ ಉದ್ಯೋಗಿಗಳು ಕೂಡ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಪ್ರಸ್ತುತ ಸಾಂಕ್ರಾಮಿಕದ ಒಂದೂವರೆ ವರ್ಷಗಳ ಬಳಿಕ ಆರ್ಥಿಕ ಚಟುವಟಿಕೆಗಳು ಪುನಶ್ಚೇತನ ಕಂಡುಕೊಳ್ಳುತ್ತಿವೆ. ಉದ್ಯಮ ರಂಗಗಳು ಹೊಸ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದ್ದು ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಿವೆ. ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಕೋವಿಡ್‌ನೊಂದಿಗೆ ಬದುಕಲು ಕಲಿಯುತ್ತಿದ್ದಾರೆ. ಲಿಂಕ್ಡ್‌ಇನ್‌ನಂತಹ(Linked In) ಉದ್ಯೋಗ ವೆಬ್‌ಸೈಟ್‌ಗಳಲ್ಲಿ ಕೂಡ ಹಲವಾರು ಐಟಿ ಸೆಕ್ಟರ್‌ಗಳು(IT Sector) ಬೇರೆ ಉದ್ಯೋಗ ವಿಭಾಗಗಳು ನೇಮಕಾತಿಗಳನ್ನು ನಡೆಸುತ್ತಿರುವ ಅಂಶ ಕಂಡುಬಂದಿದೆ.

ವರದಿ ತಿಳಿಸಿರುವ ಅಂಕಿ ಅಂಶಗಳೇನು?

ಇಂಡೀಪ್ ರಿಪೋರ್ಟ್ ಸಾಂಕ್ರಾಮಿಕವು ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ಉಂಟುಮಾಡಿರುವ ಪರಿಣಾಮಗಳನ್ನು ಕುರಿತು ವಿಶ್ಲೇಷಣೆ ನಡೆಸಿದ್ದು, ಐಟಿ ವೃತ್ತಿರಂಗದಲ್ಲಿ ವೃತ್ತಿಪರರಿಗೆ ಬೇಡಿಕೆಯು ಸುಮಾರು 400% ದಷ್ಟು ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ. 2020 ರ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅನೇಕ ನಿಗಮಗಳು, ಸಂಸ್ಥೆಗಳು ಸಾಂಕ್ರಾಮಿಕ ರೋಗದಿಂದ ಉಂಟಾದ ಹಾನಿಯನ್ನು ಭರ್ತಿಗೊಳಿಸಲು ಉದ್ಯೋಗಿಗಳನ್ನು ಉದ್ಯೋಗದಿಂದ ವಜಾಗೊಳಿಸುವ ಕಠಿಣ ನಿಯಮಗಳನ್ನು ಅನುಸರಿಸಿದವು. ಈ ಸಮಯದಲ್ಲಿ ನೇಮಕಾತಿ ಅಂಕಿಅಂಶಗಳನ್ನು ವೀಕ್ಷಿಸಿದಾಗ 50% ಕುಸಿತವನ್ನು ಕಂಡಿವೆ. ಪ್ರಸ್ತುತ ಉನ್ನತ ಕೌಶಲ್ಯವಿರುವ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದ್ದು ಅಪ್ಲಿಕೇಶನ್ ಡೆವಲಪರ್, ಲೀಡ್ ಕನ್ಸಲ್ಟೆಂಟ್, ಸೇಲ್ಸ್‌ಫೋರ್ಸ್ ಡೆವಲಪರ್ ಮತ್ತು ಸೈಟ್ ರಿಲಿಬಿಲಿಟಿ ಇಂಜಿನಿಯರ್‌ನಂತಹ ನುರಿತ ಉದ್ಯೋಗದ ವೃತ್ತಿಪರರ ಬೇಡಿಕೆ 150-300% ದಷ್ಟು ನಿಧಾನವಾಗಿ ಏರಿಕೆ ಕಂಡಿತು. ಜನವರಿ 2020 ರಿಂದ ಫೆಬ್ರವರಿ 2021 ರವರೆಗೆ ಈ ರಂಗದಲ್ಲಿ ಅಗ್ರಬೇಡಿಕೆ ಹೆಚ್ಚುತ್ತಿದೆ ಎಂಬುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:UPSC is Hiring: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC; ಅರ್ಜಿ ಸಲ್ಲಿಸಲು ಅ.1 ಕೊನೆಯ ದಿನಾಂಕ

ಟಾಟಾ ಕನ್ಸಲ್ಟೆನ್ಸಿ ಹೊಸ ಯೋಜನೆಯೇನು?

ಇನ್ನು ಕೆಲವೊಂದು ಧನಾತ್ಮಕ ಅಂಶಗಳನ್ನು ವರದಿಯನ್ನು ವಿಶ್ಲೇಷಿಸಿದ್ದು ಉದ್ಯೋಗ ರಂಗದಲ್ಲಿ ನೇಮಕಾತಿ ಹೆಚ್ಚುತ್ತಿರುವುದು ಮಾತ್ರವಲ್ಲದೆ ಸಂಬಳ ಏರಿಕೆಯಂತಹ ಪ್ರಗತಿಗೂ ಉದ್ಯೋಗ ರಂಗಗಳು ಸಾಕ್ಷಿಯಾಗುತ್ತಿವೆ. ಅಭ್ಯರ್ಥಿಗಳು ಉತ್ತಮ ವೇತನವನ್ನು ಕಂಪನಿಗಳಿಂದ ನಿರೀಕ್ಷಿಸುತ್ತಿದ್ದು ಆ ನಿಟ್ಟಿನಲ್ಲಿ ಕಂಪನಿಗಳೂ ಕೂಡ ಅಭ್ಯರ್ಥಿಗಳಿಗಾಗಿ ವೇತನದಲ್ಲಿ ಏರಿಕೆಯನ್ನು ಮಾಡಿವೆ. ಕಂಪನಿಗಳು 70 ರಿಂದ 120% ದಷ್ಟು ಸಂಬಳದ ಏರಿಕೆಯನ್ನು ಮಾಡುತ್ತಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಹೆಚ್ಚಳವಾಗಿದೆ.

ಐಟಿ ಉದ್ಯಮ ರಂಗದಲ್ಲೇ ಖ್ಯಾತಿಗಳಿಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಮಹಿಳೆಯರಿಗಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಹಲವಾರು ಕಾರಣಗಳಿಂದ ವೃತ್ತಿಯನ್ನು ತೊರೆದಿರುವ ಸಾಕಷ್ಟು ಅಂತರದ ನಂತರ ಉದ್ಯೋಗವಕಾಶಕ್ಕಾಗಿ ಅರಸುತ್ತಿರುವ ಮಹಿಳೆಯರನ್ನು ನೇಮಕಾತಿ ಮಾಡುವುದಾಗಿ ಘೋಷಿಸಿದೆ. ಪ್ರತಿಭೆ ಹಾಗೂ ಕೌಶಲ್ಯ ಎಂದಿಗೂ ಮಾಸುವುದಿಲ್ಲ. ಪ್ರತಿಭಾವಂತ ಹಾಗೂ ಅನುಭವಿ ಮಹಿಳೆಯರಿಗೆ ಒಂದು ಉತ್ತಮ ವೇದಿಕೆಯನ್ನೊದಗಿಸಬೇಕಾಗಿದೆ. ಇದೇ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಐಟಿ ದಿಗ್ಗಜ ತಿಳಿಸಿದೆ. ಟಿಸಿಎಸ್, ಇನ್ಫೋಸಿಸ್‌, ವಿಪ್ರೋ ಹೀಗೆ ಇತರ ಟೆಕ್ ಕಂಪನಿಗಳು ಭಾರತದಾದ್ಯಂತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿವೆ.

ಇದನ್ನೂ ಓದಿ:TCS Recruitment 2021: ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಟಿಸಿಎಸ್; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಒಟ್ಟಿನಲ್ಲಿ ಸಂಪೂರ್ಣ ಐಟಿ ವಲಯದ ಒಟ್ಟು ವೇತನದಲ್ಲಿ ಆರ್ಥಿಕ ವರ್ಷ 22 ರಲ್ಲಿ $1.6-1.7 ಬಿಲಿಯನ್‌ವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಉದ್ಯೋಗವನ್ನು ಅರಸುತ್ತಿರುವ ಹಾಗೂ ಉತ್ತಮ ವೇತನ ಪಡೆಯಲು ಬಯಸಿರುವ ಉದ್ಯೋಗವಕಾಶಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಐಟಿ ಉದ್ಯೋಗದಲ್ಲಿ ವಿಫುಲ ಅವಕಾಶಗಳನ್ನು ಹೊಂದಿರುವ ಬೆಂಗಳೂರು, ಹೈದ್ರಾಬಾದ್, ಚೆನ್ನೈನಂತಹ ನಗರಗಳು ಕೂಡ ವಿವಿಧ ರಂಗಗಳಲ್ಲಿ ಪ್ರಯೋಜನ ಪಡೆಯಲಿವೆ.
Published by:Latha CG
First published: