• Home
  • »
  • News
  • »
  • jobs
  • »
  • TCS Hiring: ಟಿಸಿಎಸ್​ನಲ್ಲಿ ಬಿಇ ಫ್ರೆಶರ್ಸ್​​ ನೇಮಕಾತಿಗೆ ಚಾಲನೆ; ಇಲ್ಲಿದೆ ಅರ್ಜಿ ಸಲ್ಲಿಕೆ ಲಿಂಕ್​

TCS Hiring: ಟಿಸಿಎಸ್​ನಲ್ಲಿ ಬಿಇ ಫ್ರೆಶರ್ಸ್​​ ನೇಮಕಾತಿಗೆ ಚಾಲನೆ; ಇಲ್ಲಿದೆ ಅರ್ಜಿ ಸಲ್ಲಿಕೆ ಲಿಂಕ್​

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

2020, 21 ಮತ್ತು 22 ನೇ ಸಾಲಿನಲ್ಲಿ ಬಿಇ ಮತ್ತು ಬಿಟೆಕ್​ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

  • Share this:

    ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TATA Consultancy Services- TCS) ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಜ್ಯೂನಿಯರ್​ ಡೆವಲಪರ್ (Junior Developer)​ ಹುದ್ದೆಗೆ ಫ್ರೆಶರ್​​ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಟಾಟಾ ಬ್ಯುಸಿನೆಸ್​ ಹಬ್​ ಲಿಮಿಟೆಡ್​​ ತನ್ನ ಮಾಹಿತಿ ಮತ್ತು ತಂತ್ರಜ್ಞಾನ ಸೇವೆಯಲ್ಲಿ ಈ ನೇಮಕಾತಿ ನಡೆಸಲಿದೆ. ಬಿಇ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.


    2020, 21 ಮತ್ತು 22 ನೇ ಸಾಲಿನಲ್ಲಿ ಬಿಇ ಮತ್ತು ಬಿಟೆಕ್​ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೈಬ್ರಿಡ್​ ವರ್ಕ್​ ಮಾಡೆಲ್​ ಹುದ್ದೆ ಇದಾಗಿದ್ದು, ಅಭ್ಯರ್ಥಿಗಳು ಕಚೇರಿ ಮತ್ತು ಮನೆಯಿಂದ ಕೂಡ ಕೆಲಸ ನಿರ್ವಹಿಸಬಹುದಾಗಿದೆ.

    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
    ಹುದ್ದೆಯ ಹೆಸರುಜ್ಯೂನಿಯರ್​ ಡೆವಲಪರ್
    ಒಟ್ಟು ಹುದ್ದೆ ಸಂಖ್ಯೆ50
    ಕಾರ್ಯ ನಿರ್ವಹಣೆಟಿಸಿಎಸ್​ನ ದೇಶದ ವಿವಿಧ ಕಚೇರಿಗಳಲ್ಲಿ
    ವೇತನಟಿಸಿಎಸ್​ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆ ಅನ್ವಯ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಕಂಪ್ಯೂಟರ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಬಿಇ ಅಥವಾ ಬಿಟೆಕ್​ ಪದವಿಯನ್ನು ಪಡೆದಿರಬೇಕು.


    ಇದನ್ನು ಓದಿ: ಜಲ ಸಂಪನ್ಮೂಲ ಇಲಾಖೆಯ 155 ಎಸ್​ಡಿಎ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಆಹ್ವಾನ


    ವಯೋಮಿತಿ: ಟಿಸಿಎಸ್​ ನಿಯಮ ಅನುಸಾರ


    ಹುದ್ದೆಯ ಜವಾಬ್ದಾರಿ
    ಪ್ರೊಡಾಕ್ಟ್​ ಡೆವಲಪರ್​ ಆಗಿ ಕಾರ್ಯ ನಿರ್ವಹಿಸಬೇಕು. ಇತ್ತೀಚಿನ ತಂತ್ರಜ್ಞಾನದ ಅನುಸಾರ ಉತ್ಪನ್ನಗಳ ಎಂಡ್ ಟು ಎಂಡ್ ಬಳಕೆಯ ಪ್ರಕರಣಗಳನ್ನು ಅಭಿವೃದ್ಧಿಪಡಿಸಬೇಕು.


    ಅರ್ಜಿ ಸಲ್ಲಿಕೆ: ಆನ್​ಲೈನ್​


    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 9 ಸೆಪ್ಟೆಂಬರ್​ 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: 15 ಅಕ್ಟೋಬರ್​ 2022


    ಇದನ್ನು ಓದಿ: ಸಶಸ್ತ್ರ ಸೀಮಾ ಬಲದಲ್ಲಿ 399 ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ


    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​​: tcsionhub.in


    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ


    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.


    ಅರ್ಜಿ ಸಲ್ಲಿಸುವವರು ಮೇಲಿನ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.

    Published by:Seema R
    First published: