TCS Recruitment: ಟಿಸಿಎಸ್​​ನಲ್ಲಿ ನೇಮಕಾತಿ; ಎಂಬಿಎ ಪದವೀಧರರಿಗೆ ಉತ್ತಮ ಅವಕಾಶ

ಮೂರು ತಿಂಗಳಿಗಿಂತ ಕಡಿಮೆ ಉದ್ಯೋಗ ಅನುಭವ ಹೊಂದಿರುವವರನ್ನು ಮಾತ್ರ ಹುದ್ದೆಗೆ ಪರಿಗಣಿಸಲಾಗುವುದು.

ಟಿಸಿಎಸ್​ನಲ್ಲಿ ಹುದ್ದೆಗೆ ಅರ್ಜಿ ಹಾಕಿ

ಟಿಸಿಎಸ್​ನಲ್ಲಿ ಹುದ್ದೆಗೆ ಅರ್ಜಿ ಹಾಕಿ

 • Share this:
  ಐಟಿ ಸೇವಾವಲಯದ ಪೂರೈಕೆದಾರ ಆಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (Tata Consultancy Services) ​ ಎಂಬಿಎ ಪದವೀಧರ (MBA Graduates) ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಪ್ರಸಕ್ತ ಸಾಲಿನ ಅಭ್ಯರ್ಥಿಗಳ ಭರ್ತಿಗೆ ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಕಂಪನಿಯ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕೇವಲ ಮ್ಯಾನೇಜ್​ಮೆಂಟ್​ ಪದವೀಧರರಿಗೆ ಮಾತ್ರ ಆಗಿದೆ.

  2020, 2021 ಮತ್ತು 2022 ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣಗೊಂಡ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೂರು ತಿಂಗಳಿಗಿಂತ ಕಡಿಮೆ ಉದ್ಯೋಗ ಅನುಭವ ಹೊಂದಿರುವವರನ್ನು ಮಾತ್ರ ಹುದ್ದೆಗೆ ಪರಿಗಣಿಸಲಾಗುವುದು.  ಹುದ್ದೆ ಮಾಹಿತಿಹುದ್ದೆ ವಿವರ
  ಸಂಸ್ಥೆಟಾಟಾ ಕನ್ಸಲ್ಟೆನ್ಸಿ ಸರ್ವಿಸ್​
  ಹುದ್ದೆಬ್ಯುಸಿನೆಸ್​ ಪ್ರೊಸೇಸ್​ ಸರ್ವಿಸ್​
  ಒಟ್ಟು ಹುದ್ದೆನಿಗದಿ ಪಡಿಸಿಲ್ಲ
  ವೇತನಕಂಪನಿಯ ನಿಯಮ ಅನುಸಾರ
  ಕಾರ್ಯ ನಿರ್ವಹಣೆ ಸ್ಥಳದೇಶಾದ್ಯಂತ

  ವಿದ್ಯಾರ್ಹತೆ:
  ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ ಎರಡು ವರ್ಷದ ಪೂರ್ಣಾವಧಿಯ ಎಂಬಿಎ ಪದವಿ ಅಥವಾ ಮಾಸ್ಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (MMS) ಅಥವಾ ಬ್ಯುಸಿನೆಸ್ ಅನಾಲಿಟಿಕ್ಸ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDBA) ಅಥವಾ ಮಾರ್ಕೆಟಿಂಗ್ ಅಥವಾ ಫೈನಾನ್ಸ್ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್​ನಲ್ಲಿ ಪದವಿ ಪಡೆದಿರಬೇಕು

  ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ಅಧಿಸೂಚನೆ ಅನ್ವಯ ಗರಿಷ್ಠ 28ವರ್ಷಗಳು ಮೀರಿರಬಾರದು.

  ವಿಶೇಷ ಸೂಚನೆ
  -ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ಆಯ್ಕೆ ಪ್ರಕ್ರಿಯೆ ವೇಳೆ ಶೈಕ್ಷಣಿಕವಾಗಿ ಯಾವುದೇ ವಿಷಯದಲ್ಲಿ ಬ್ಯಾಕ್​ಲಾಕ್​ ಹೊಂದಿರಬಾರದು.

  -ಶೈಕ್ಷಣಿಕ ಜೀವನದ ನಡುವೆ ಎರಡು ವರ್ಷಕ್ಕಿಂತ ಹೆಚ್ಚಿನ ಅಂತರ ಇರಬಾರದು.

  ಇದನ್ನು ಓದಿ: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಪ್ರಾಧ್ಯಾಪಕ ಹುದ್ದೆ ನೇಮಕಾತಿ: ನಾಳೆಯೇ ವಾಕ್​-ಇನ್-ಇಂಟರ್​​ವ್ಯೂ

  ಅರ್ಜಿ ಸಲ್ಲಿಕೆ ವಿಧಾನ
  ಆನ್​ಲೈನ್​

  ಪ್ರಮುಖ ದಿನಾಂಕ
  ಅರ್ಜಿ ಸಲ್ಲಿಕೆ ಪ್ರಾರಂಭ : ಜೂನ್ 6ರಿಂದ

  ಪ್ರಮುಖ ಲಿಂಕ್​ಗಳು
  ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ
  ಅಧಿಕೃತ ವೆಬ್​ಸೈಟ್​ : https://nextstep.tcs.com/

  ಇದನ್ನು ಓದಿ: ಟ್ರೈನಿ ಮೈನಿಂಗ್ ಇಂಜಿನಿಯರಿಂಗ್ ಹುದ್ದೆಗೆ ವಾಕ್​-ಇನ್​-ಇಂಟರ್​ವ್ಯೂ

  ಅರ್ಜಿ ಸಲ್ಲಿಕೆ ಪ್ರಕ್ರಿಯೆ
  ಟಿಸಿಎಸ್ TCS NextStep ಪೋರ್ಟಲ್‌ಗೆ ಲಾಗ್ ಇನ್ ಮಾಡಿ
  -ಟಿಸಿಎಸ್ ಎಂಬಿಎ ನೇಮಕಾತಿಗಾಗಿ ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸಿ
  ನೀವು ನೋಂದಾಯಿತ ಬಳಕೆದಾರರಾಗಿದ್ದರೆ, ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಲು ಮುಂದುವರಿಯಿರಿ. ಸಲ್ಲಿಸಿದ ನಂತರ, 'ಡ್ರೈವ್‌ಗಾಗಿ ಅನ್ವಯಿಸು' ಕ್ಲಿಕ್ ಮಾಡಿ
  ನೀವು ಹೊಸ ಬಳಕೆದಾರರಾಗಿದ್ದರೆ, ಈಗ ನೋಂದಾಯಿಸಿ ಕ್ಲಿಕ್ ಮಾಡಿ, 'ಬಿಪಿಎಸ್​​' ವರ್ಗವನ್ನು ಆಯ್ಕೆಮಾಡಿ. ನಿಮ್ಮ ವಿವರಗಳನ್ನು ಭರ್ತಿ ಮಾಡಲು ಮುಂದುವರಿಯಿರಿ. ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು 'ಡ್ರೈವ್‌ಗಾಗಿ ಅನ್ವಯಿಸು' ಕ್ಲಿಕ್ ಮಾಡಿ
  ಮುಂದಿನ ಹಂತದ ಪೋರ್ಟಲ್ ಅನ್ನು ಪ್ರವೇಶಿಸಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು
  -ನಿಮ್ಮ ಪರೀಕ್ಷಾ ವಿಧಾನವನ್ನು ರಿಮೋಟ್ ಆಗಿ ಆಯ್ಕೆಮಾಡಿ ಮತ್ತು 'ಅನ್ವಯಿಸು' ಕ್ಲಿಕ್ ಮಾಡಿ
  Published by:Seema R
  First published: