SWR Recruitment 2021: ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ 904 ಹುದ್ದೆಗಳು ಖಾಲಿ, 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುಬ್ಬಳ್ಳಿ ವಿಭಾಗ

ಹುಬ್ಬಳ್ಳಿ ವಿಭಾಗ

  • Share this:
ನೈಋತ್ಯ ರೈಲ್ವೆಯು(South Western Railway) ಹುಬ್ಬಳ್ಳಿ ವಿಭಾಗದಲ್ಲಿ(Hubli Branch) ಖಾಲಿ ಇರುವ ಅಪ್ರೆಂಟಿಸ್ ಹುದ್ದೆ(Apprentice Jobs)ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಕರ್ನಾಟಕ(Karnataka)ದಲ್ಲಿಯೇ ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಪಡೆಯಬೇಕೆಂದು ಹಂಬಲಿಸುತ್ತಿದ್ದವರಿಗೆ ಇದೊಂದು ಸುವರ್ಣಾವಕಾಶವಾಗಿದೆ. 10ನೇ ತರಗತಿ(10th pass) ಉತ್ತೀರ್ಣ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 904 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 4ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 3ರ ವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.       ಸಂಸ್ಥೆ     ಭಾರತೀಯ ರೈಲ್ವೆ ಇಲಾಖೆ
     ವಿಭಾಗ    ನೈಋತ್ಯ ರೈಲ್ವೆ
   ಹುದ್ದೆಯ ಹೆಸರು   ಟ್ರೈನಿ/ಅಪ್ರೆಂಟಿಸ್
   ಒಟ್ಟು ಹುದ್ದೆಗಳು  904
   ಕೆಲಸದ ಸ್ಥಳ ಹುಬ್ಬಳ್ಳಿ
ಜಾಹೀರಾತು ಸಂಖ್ಯೆ  SWR/ RRc/ Act Appr/ 01/ 2021
ವಿದ್ಯಾರ್ಹತೆ 10ನೇ ತರಗತಿ ಪಾಸ್
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ 04/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03/11/2021

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 04/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/11/2021

ಅರ್ಜಿ ಶುಲ್ಕ:

  • ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100.ರೂ ಅರ್ಜಿ ಶುಲ್ಕವನ್ನು ಕಟ್ಟಬೇಕು.

  • ಎಸ್​ಸಿ, ಎಸ್​ಟಿ, ಮಹಿಳೆಯರು ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

  • ಡೆಬಿಡ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್​ನೆಟ್​ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು.


ಹುದ್ದೆಯ ಹೆಸರು
ಹುದ್ದೆಗಳ ಸಂಖ್ಯೆ

ಹುಬ್ಬಳ್ಳಿ ವಿಭಾಗ
237

ಕಾರಿಯೇಜ್ ರಿಪೇರಿ ವರ್ಕ್​ಶಾಪ್, ಹುಬ್ಬಳ್ಳಿ
217

ಬೆಂಗಳೂರು ವಿಭಾಗ
230

ಮೈಸೂರು ವಿಭಾಗ
177

ಸೆಂಟ್ರಲ್ ವರ್ಕ್​ಶಾಪ್​, ಮೈಸೂರು
43

ಒಟ್ಟು
904

ವಿದ್ಯಾರ್ಹತೆ:

ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ/ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು.

ಇದನ್ನೂ ಓದಿ:Indian Navy Recruitment 2021: ನೌಕಾಪಡೆಯಲ್ಲಿ 300 ಹುದ್ದೆಗಳು ಖಾಲಿ, 10ನೇ ತರಗತಿ ಪಾಸಾಗಿದ್ದರೆ ಸಾಕು, ತಿಂಗಳ ಸಂಬಳ ₹ 69,100

ವಯೋಮಿತಿ:

ಅಭ್ಯರ್ಥಿಗಳು 15-25 ವರ್ಷದೊಳಗಿನವರಾಗಿರಬೇಕು

ಕೆಲಸದ ಸ್ಥಳ:

ಹುಬ್ಬಳ್ಳಿ, ಕರ್ನಾಟಕ

ಆಯ್ಕೆ ಪ್ರಕ್ರಿಯೆ ಹೇಗೆ?

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ
 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: