ಯಶಸ್ಸು ಎಂಬುದು ಪರಿಶ್ರಮದ ಫಲ. ಆ ಫಲದ ಹಿಂದೆ ನೂರೆಂಟು ನೋವುಗಳಿರುತ್ತದೆ. ಅಂತಹ ಕಷ್ಟಗಳನ್ನು ಮೆಟ್ಟು ಸಾಧಿಸುವ ಛಲ ಇದ್ದಾಗ ಮಾತ್ರ ಗುರಿ ಸಾಧ್ಯ. ಅಂತಹ ಎಷ್ಟು ಪ್ರತಿಭೆಗಳು ನಮ್ಮ ಸುತ್ತಮುತ್ತಲು ಇದ್ದು, ಹಲವರಿಗೆ ಸ್ಪೂರ್ತಿಯಾಗುತ್ತಾರೆ. ಅದೇ ರೀತಿ ಅನೇಕರಿಗೆ ಉಮ್ಮಲ್ ಖೇರ್ ಕೂಡ ಸ್ಪೂರ್ತಿಯಾಗಿದ್ದಾರೆ. ಕಡು ಬಡತನದಲ್ಲೂ ಅಧಿಕಾರಿಯಾಬೇಕು ಎಂಬ ಛಲ ಹೊಂದಿ ಆ ಕನಸು ನನಸು ಮಾಡಿದ್ದಾರೆ ಉಮ್ಮಲ್ ಖೇರ್ (ummul Kher). ಆಕೆ ಸಾಹಸಗಾಥೆ ಅನೇಕರಿಗೆ ದಾರಿ ದೀಪವಾಗಿರುವುದು ಸುಳ್ಳಲ್ಲ.
ದೆಹಲಿಯ ನಿಜಾಮುದ್ದೀನ್ ಪ್ರದೇಶದ ಕೊಳೆಗೇರಿಯಲ್ಲಿ ಬಾಲ್ಯ ಕಳೆದವಳು ಈ ಉಮ್ಮಲ್ ಖೇರ್. ತಂದೆ ಬೀದಿ ಬದಿ ವ್ಯಾಪಾರ ಮಾಡಿದರೆ ತಾಯಿ ಜೀವನ ಸಾಗಿಸಲು ಬಟ್ಟೆ ಮಾರುತ್ತಿದ್ದರು. ಹೀಗೆ ಹೇಗೋ ಬದುಕು ನಡೆಯುತ್ತಿದೆ ಎಂದಾಗ ದೆಹಲಿ ಸರ್ಕಾರ ಈ ಕೊಳಗೇರಿಗಳ ನೆಲಸಮಕ್ಕೆ ಮುಂದಾಗುತ್ತದೆ. ಮೊದಲೇ ಕಷ್ಟದಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬಿಕ್ಕಟ್ಟು ಎದುರಾಗುತ್ತದೆ. ಕಡೆಗೆ ಮತ್ತೊಂದು ಕೊಳಗೇರಿಗೆ ಉಮಮಲ್ ಖೇರ್ ಕುಟುಂಬ ಸ್ಥಳಾಂತರಗೊಳ್ಳುತ್ತದೆ.
ರಾಜಸ್ಥಾನದಲ್ಲಿ ಹುಟ್ಟಿದ ಉಮ್ಮಲ್ ಹುಟ್ಟಿದಾಗಲೇ ಮೂಳೆ ರೋಗಕ್ಕೆ ತುತ್ತಾಗಿದ್ದಳು. ಅಲ್ಲದೇ ಈಕೆ 8 ಬಾರಿ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಿದ್ದಳು. ಈಕೆಯ ಉಳಿಸಿಕೊಳ್ಳಲು ಕುಟುಂಬ ಕೂಡ ಸಾಕಷ್ಟು ಕಷ್ಟ ಅನುಭವಿಸಿತು, ಕಡೆಗೆ ಜೀವನ ಹುಡುಗಿ ದೆಹಲಿಗೆ ಬಂದ ಕುಟುಂಬ ಕೊಳಗೇರಿಯಲ್ಲಿಯೇ ಬದುಕು ಕಟ್ಟಿಕೊಂಡಿತು. ಕೊಳಗೇರಿಯಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದ ಉಮ್ಮಲ್ಗೆ ಮಾತ್ರ ತಾನು ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಅದಮ್ಯವಾಗಿತ್ತು. ಇದೇ ಕಾರಣದಿಂದ ತನ್ನ ಗುರಿ ಮುಟ್ಟುವವರೆಗೂ ಈಕೆ ಯಾವುದೇ ಕಷ್ಟಕ್ಕೂ ಎದೆಗುಂದಲಿಲ್ಲ.
ಇದನ್ನು ಓದಿ: ನಾಳೆಯೇ ನೀಟ್ ಪರೀಕ್ಷೆ: ವಿದ್ಯಾರ್ಥಿಗಳು ಪಾಲಿಸಲೇಬೇಕಾದ 5 ನಿಯಮಗಳು ಇವು
ತನ್ನ ಈ ಕನಸು ನನಸಾಗಿಸುವ ನಿಟ್ಟಿನಲ್ಲಿ ಅವಳಿಗೆ ಎಂದಿಗೂ ತೊಂದರೆಗಳು ಕಾಣಲಿಲ್ಲ. ಕಂಡ ಕನಸಿಗೆ ತಕ್ಕಂತೆ ಛಲ ಹೊಂದಿದ್ದರು ಉಮ್ಮಲ್ಗೆ ಆರ್ಥಿಕ ಬಿಕ್ಕಟ್ಟು ಎದುರಾಯಿತು. ಪೋಷಕರು ಕೂಡ 8ನೇ ತರಗತಿ ಆದ ಬಳಿಕ ಓದನ್ನು ಕೈ ಬಿಡುವಂತೆ ತಿಳಿಸಿದರು. ಆದರೆ, ತನ್ನ ಓದುವ ಆಸೆಯನ್ನು ಅರ್ಥಕ್ಕೆ ಬಿಡದೇ ಓದು ಮುಂದುವರೆಸಿದಳು. ಸಣ್ಣ ವಯಸ್ಸಿನಿಂದಲೇ ಉಮ್ಮಲ್ ಟ್ಯೂಷನ್ ತೆಗೆದು ಕೊಳ್ಳಲು ಆರಂಭಿಸಿದಳು. ಇನ್ನು ಈ ಟ್ಯೂಷನ್ ಮತ್ತು ಶಾಲೆಗೆ ಫೀಸ್ ಕಟ್ಟಲು ಆಕೆಯ ಸ್ವತಃ ದುಡಿದು ಹಣ ಸಂಪಾದಿಸುತ್ತಿದ್ದಳು. ಓದು, ಕೆಲಸ, ಆರ್ಥಿಕ ಮುಗ್ಗಟ್ಟು, ಕೊಳಗೇರಿ ವಾಸದ ನಡುವೆಯೇ ಉಮ್ಮಲ್ 10 ನೇ ತರಗತಿಯಲ್ಲಿ ಶೇ 91ರಷ್ಟು ಅಂಕ ಪಡೆದಳು. 12 ನೇ ತರಗತಿಯಲ್ಲಿ ಶೇ 89 ರಷ್ಟು ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆ ಪಡೆದಳು. ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಳು. ಇಷ್ಟಕ್ಕೆ ಸುಮ್ಮನಿರದ ಉಮ್ಮಲ್ ಬಳಿಕ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಸ್ನಾತಕೋತರ ಪದವಿಯನ್ನು ಪಡೆದಳು. ಸಾಧಿಸುವ ಛಲ ಇನ್ನು ತಣ್ಣಗೆ ಆಗಿರದ ಪರಿಣಾಮ ಬಳಿಕ ಎಂಫಿಲ್ ಮತ್ತು ಪಿಎಚ್ಡಿ ಪ್ರವೇಶ ಪಡೆದಳು.
ಈ ನಡುವೆ ಉಮ್ಮಲ್ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದಳು. ಆಕೆಯ ಕಠಿಣ ಪರಿಶ್ರಮದಿಂದಾಗಿ, 2017 ರಲ್ಲಿ ಮೊದಲ ಪ್ರಯತ್ನದಲ್ಲಿ ಆಕೆ UPSC ಪರೀಕ್ಷೆಯಲ್ಲಿ ಉತ್ತೀರ್ಣಳಾದಳು. ಅಷ್ಟೇ ಅಲ್ಲದೇ, ಇದರಲ್ಲಿ 420 ನೇ ರ್ಯಾಂಕ್ ಪಡೆದು ಐಎಎಸ್ (IAS) ಆಗುವಲ್ಲಿ ಯಶಸ್ವಿಯಾದಳು. ಈ ಮೂಲಕ ಪೋಷಕರಿಗೆ ಕೀರ್ತಿ ತಂದಳು.
ಕೊಳಗೇರಿಯಲ್ಲಿ ಬೆಳೆದರೂ, ಈಕೆಯ ಕನಸು ಎಂದು ಕಮರಲು ಬಿಡಲಿಲ್ಲ. ಈಗ ದೇಶದ ಉನ್ನತ ಹುದ್ದೆಗೆ ಉಮ್ಮಲ್ ಆಯ್ಕೆಗೊಂಡು ಪೋಷಕರಿಗೆ ಗರ್ವ ಪಡುವ ಮಗಳಾಗಿದ್ದಾಳೆ. ಅಲ್ಲದೇ, ಈಕೆಯಂತ ಅನೇಕ ಕನಸು ಹೊತ್ತವರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾಳೆ ಉಮ್ಮಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ