Bidar Court: ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರ್​, ಟೈಪಿಸ್ಟ್​ ಹುದ್ದೆ ಖಾಲಿ; SSLC ಪಾಸ್​ ಆಗಿದ್ರೆ ಸಾಕು

ಸ್ಟೆನೋಗ್ರಾಫರ್​ ಹುದ್ದೆಗೆ ತಿಂಗಳ ವೇತನ ರೂ. 21650/- ರಿಂದ 41,650/-ವಿವಿಧ ಭತ್ಯೆಗಳು ಸೇರಿ ನಿಗದಿಸಲಾಗಿದೆ

ಬೀದರ್​ ನ್ಯಾಯಾಲಯ

ಬೀದರ್​ ನ್ಯಾಯಾಲಯ

  • Share this:
    ಬೀದರ್​​ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸ್ಟೆನೋಗ್ರಾಫರ್​ ಗ್ರೇಡ್ 3 ಮತ್ತು ಟೈಪಿಸ್ಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 9 ಆಗಿದೆ.

    ಸ್ಟೇನೋಗ್ರಾಫರ್​ ಹುದ್ದೆಗಳು- ವಿದ್ಯಾರ್ಹತೆ
    ಸ್ಟೇನೋ ಗ್ರಾಫರ್​ನ 12 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶ್ರೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು.

    ವೇತನ- ವಯೋಮಿತಿ,
    ನ್ಯಾಯಾಲಯದ ನೇಮಕಾತಿ ಅನುಸಾರ ರೂ. 27650/- ರಿಂದ 52,650/-(ವಿವಿಧ ಭತ್ಯೆಗಳು ಸೇರಿ) ನಿಗದಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ 18ರಿಂದ 35 ವರ್ಷ ವಯಸ್ಸಾಗಿರಬೇಕು. ಪ್ರವರ್ಗ 2 ಎ, 2 ಬಿ, 3ಎ, 3 ಬಿ ಅಭ್ಯರ್ಥಿಗಳು 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗ 40 ವರ್ಷ ವಯೋಮಿತಿ ಸಡಿಲಿಕೆ ಇದೆ.

    ಟೈಪಿಸ್ಟ್​ ಹುದ್ದೆ, ವಿದ್ಯಾರ್ಹತೆ
    9 ಟೈಪಿಸ್ಟ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು.

    ವೇತನ ಶ್ರೇಣಿ- ವಯೋಮಿತಿ
    ನ್ಯಾಯಾಲಯದ ನೇಮಕಾತಿ ಅನುಸಾರ ರೂ. 21650/- ರಿಂದ 41,650/-(ವಿವಿಧ ಭತ್ಯೆಗಳು ಸೇರಿ) ನಿಗದಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ 18ರಿಂದ 35 ವರ್ಷ ವಯಸ್ಸಾಗಿರಬೇಕು. ಪ್ರವರ್ಗ 2 ಎ, 2 ಬಿ, 3ಎ, 3 ಬಿ ಅಭ್ಯರ್ಥಿಗಳು 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗ 40 ವರ್ಷ ವಯೋಮಿತಿ ಸಡಿಲಿಕೆ ಇದೆ

    ಇದನ್ನು ಓದಿ: KCET Result 2021: ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್​ ರಾಜ್ಯಕ್ಕೆ ಪ್ರಥಮ

    ಅರ್ಜಿ ಸಲ್ಲಿಸುವ ವಿಧಾನ:
    ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಈ ಲಿಂಕ್​ಗೆ ಕ್ಲಿಕ್​ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಇತರ ವಿಧಾನಗಳಲ್ಲಿ ಸಲ್ಲಿಸುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್​ಸೈಟ್​ನ ಮೂಲಕವೇ ಪಾವತಿ ಮಾಡಬೇಕು.

    ಆಯ್ಕೆ ವಿಧಾನ
    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆ ನಡೆಸಲಾಗುವುದು ಇದರಲ್ಲಿ ಆಯ್ಕೆ ಯಾದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಲಾಗುವುದು. ಇದರೆಡರ ಬಳಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.

    ಇದನ್ನು ಓದಿ: ಬೆಂಗಳೂರು ಇಸ್ರೋ ಕಚೇರಿಯಲ್ಲಿ ಉದ್ಯೋಗ ಅವಕಾಶ; ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

    ಸ್ಟೈನೋ ಹುದ್ದೆ ಆಯ್ಕೆ ವಿಧಾನ

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 100 ಅಂಕಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕು. ಸಂದರ್ಶನವು 5 ಅಂಕಗಳಿಗೆ ನಡೆಯಲಿದೆ

    ಟೈಪಿಸ್ಟ್​ ಹುದ್ದೆ ಆಯ್ಕೆ ವಿಧಾನ
    ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರ ಅಂಕಗಳು ಮತ್ತು 15 ನಿಮಿಷದ ಬೆರಳಚ್ಚ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ
    ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 200 ರೂ ನಿಗದಿಸಲಾಗಿದ್ದು, ಪ್ರವರ್ಗ 1 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 100 ರೂ ನಿಗದಿಸಲಾಗಿದೆ.

    ಹೆಚ್ಚಿನ ಮಾಹಿತಿಗೆ ಈ ಲಿಂಕ್​ಗೆ ಕ್ಲಿಕ್​ ಮಾಡಬಹುದು: https://districts.ecourts.gov.in/bidar-onlinerecruitment
    Published by:Seema R
    First published: