Defence Job: ರಕ್ಷಣಾ ಸಚಿವಾಲಯದಲ್ಲಿದೆ ಪಿಯುಸಿ ಆದವರಿಗೆ ಕೆಲಸ; ಬೆಂಗಳೂರಲ್ಲಿ ನೇಮಕಾತಿ

ಬೆಂಗಳೂರು ಮತ್ತು ಕೊಚ್ಚಿಗಳಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ರಕ್ಷಣಾ ಸಚಿವಾಲಯದಲ್ಲಿ ನೇಮಕಾತಿ

ರಕ್ಷಣಾ ಸಚಿವಾಲಯದಲ್ಲಿ ನೇಮಕಾತಿ

  • Share this:

    ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ (Ministry of Defence) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಟೆನೋ  ಮತ್ತು ಎಂಟಿಎಸ್​​ ಸೇರಿದಂತೆ ಒಟ್ಟು 7 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ಮತ್ತು ಕೊಚ್ಚಿಗಳಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 18 ಆಗಿದೆ.


    ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



     ಸಂಸ್ಥೆಯ ಹೆಸರು: ರಕ್ಷಣಾ ಸಚಿವಾಲಯ (ರಕ್ಷಣಾ ಸಚಿವಾಲಯ)
    ಹುದ್ದೆ ಹೆಸರು ಹೆಸರು: ಸ್ಟೆನೋ-II, ಎಂಟಿಎಸ್​
    ಹುದ್ದೆಗಳ ಸಂಖ್ಯೆ: 7
    ಉದ್ಯೋಗ ಸ್ಥಳ: ಕೊಚ್ಚಿ - ಬೆಂಗಳೂರು
    ವೇತನ: ರಕ್ಷಣಾ ಸಚಿವಾಲಯದ ನೇಮಕಾತಿ ನಿಯಮಗಳ ಪ್ರಕಾರ



































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
    ಸ್ಟೆನೋ-II1ಪಿಯುಸಿಕನಿಷ್ಠ 18- ಗರಿಷ್ಠ 25 ವರ್ಷ
    ಎಂಟಿಎಸ್​  (ಮೆಸೆಂಜರ್)410ನೇ ತರಗತಿಕನಿಷ್ಠ 18- ಗರಿಷ್ಠ 25 ವರ್ಷ
     ಎಂಟಿಎಸ್​ (ಡಾಫ್ಟ್ರಿ)110ನೇ ತರಗತಿರಕ್ಷಣಾ ಸಚಿವಾಲಯದ ನಿಯಮ ಅನುಸಾರ
     ಎಂಟಿಎಸ್​ (ಸಫೈವಾಲಾ)110ನೇ ತರಗತಿರಕ್ಷಣಾ ಸಚಿವಾಲಯದ ನಿಯಮ ಅನುಸಾರ


    ವಯೋಮಿತಿ ಸಡಿಲಿಕೆ: ರಕ್ಷಣಾ ಸಚಿವಾಲುದ ನಿಯಮ ಅನುಸಾರ


    ಇದನ್ನು ಓದಿ: ಕರ್ನಾಟಕ ಆಂಟಿಬಯಾಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ನಲ್ಲಿದೆ ಉದ್ಯೋಗ

    ಅರ್ಜಿ ಸಲ್ಲಿಕೆ: ಆಫ್​ಲೈನ್


    ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ.


    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28 ಆಗಸ್ಟ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಸೆಪ್ಟೆಂಬರ್​ 2022


    ಇದನ್ನು ಓದಿ: ನಬಾರ್ಡ್​ನಲ್ಲಿ 177 ಹುದ್ದೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ವೆಬ್‌ಸೈಟ್: mod.gov.in


    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ


    - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.


    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಅರ್ಜಿ ರವಾನಿಸಿ.

    Published by:Seema R
    First published: