ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (Steel Authority of India Limited) 200 ಟ್ರೈನಿ (Trainees Posts) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಡಿಶಾದ ಆಸ್ಪತ್ರೆಗೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಒಂದು ವರ್ಷದ ಗುತ್ತಿಗೆ ಆಧಾರಿತ ಹುದ್ದೆ ಇದಾಗಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 20 ಆಗಿದೆ. ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)
ಹುದ್ದೆಯ ಹೆಸರು: ಟ್ರೈನಿ ಹುದ್ದೆಗಳು
ಹುದ್ದೆಗಳ ಸಂಖ್ಯೆ: 200
ಉದ್ಯೋಗ ಸ್ಥಳ: ರೂರ್ಕೆಲಾ - ಒಡಿಶಾ
ಸ್ಟೈಪೆಂಡ್: 7000-17000 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ವೇತನ |
ಮೆಡಿಕಲ್ ಅಟೆಂಡೆಂಟ್ ಟ್ರೈನಿ |
100 |
10ನೇ ತರಗತಿ |
7000 ರೂ ಮಾಸಿಕ |
ಕ್ರಿಟಿಕಲ್ ಕೇರ್ ನರ್ಸಿಂಗ್ ಟ್ರೈನಿ |
20 |
ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್, ಮಿಡ್-ವೈಫರಿ, ಬಿಎಸ್ಸಿ ನರ್ಸಿಂಗ್ |
17000 ರೂ ಮಾಸಿಕ |
ಸುಧಾರಿತ ವಿಶೇಷ ನರ್ಸಿಂಗ್ ಟ್ರೈನಿ |
40 |
ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್, ಮಿಡ್-ವೈಫರಿ, ಬಿಎಸ್ಸಿ ನರ್ಸಿಂಗ್ |
15000 ರೂ ಮಾಸಿಕ |
ಡೇಟಾ ಎಂಟ್ರಿ ಆಪರೇಟರ್ ಟ್ರೈನಿ |
6 |
12ನೇ ತರಗತಿ, ಪಿಜಿಡಿಸಿಎ |
9000 ರೂ ಮಾಸಿಕ |
ವೈದ್ಯಕೀಯ ಪ್ರಯೋಗಾಲಯ/ ತಂತ್ರಜ್ಞರ ಟ್ರೈನಿ |
10 |
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ |
9000 ರೂ ಮಾಸಿಕ |
ಆಸ್ಪತ್ರೆ ಆಡಳಿತ ತರಬೇತಿ |
10 |
ಬಿಬಿಎ, ಎಂಬಿಎ |
15000 ರೂ ಮಾಸಿಕ |
ಒಟಿ/ಅರಿವಳಿಕೆ ಸಹಾಯಕ ಟ್ರೈನಿ |
5 |
12ನೇ ತರಗತಿ |
9000 ರೂ ಮಾಸಿಕ |
ಫಿಸಿಯೋಥೆರಪಿ ಟ್ರೈನಿ |
3 |
ಬ್ಯಾಚುಲರ್ ಆಫ್ ಫಿಸಿಯೋಥೆರಪಿ |
10000 ರೂ ಮಾಸಿಕ |
ರೇಡಿಯೋಗ್ರಾಫರ್ ಟ್ರೈನಿ |
3 |
ವೈದ್ಯಕೀಯ ವಿಕಿರಣ ತಂತ್ರಜ್ಞಾನದಲ್ಲಿ ಡಿಪ್ಲೊಮಾ |
9000 ರೂ ಮಾಸಿಕ |
ಫಾರ್ಮಸಿಸ್ಟ್ ಟ್ರೈನಿ |
3 |
ಡಿಪ್ಲೊಮಾ ಇನ್ ಫಾರ್ಮಸಿ, ಬಿ.ಫಾರ್ಮಸಿ |
9000 ರೂ ಮಾಸಿಕ |
ವಯೋಮಿತಿ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು, ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ಇದನ್ನು ಓದಿ: ಬಿಬಿಎಂಪಿಯಲ್ಲಿ ಬೃಹತ್ ನೇಮಕಾತಿ; 940 ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ
ವಯೋಮಿತಿ ಸಡಿಲಿಕೆ:
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಕೆ : ಆನ್ಲೈನ್
ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05 ಜುಲೈ 2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಆಗಸ್ಟ್ 2022
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
sail.co.in
ಇದನ್ನು ಓದಿ: ಭಾರತೀಯ ನೌಕಪಡೆಯಲ್ಲಿ 112 ಟ್ರೇಡ್ಸ್ ಮ್ಯಾನ್ಗಳ ನೇಮಕಾತಿ; 10ನೇ ತರಗತಿ ಆಗಿದ್ರೆ ಸಾಕು
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
ಬಳಿಕ
http://igh.sailrsp.co.in ಲಿಂಕ್ ಗೆ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
-ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಸಲ್ಲಿಸುವ ಬಟನ್ ಕ್ಲಿಕ್ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ