VITM Bangalore Recruitment 2023: ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ(Visvesvaraya Industrial & Technological Museum) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಜೂನಿಯರ್ ಸ್ಟೆನೋಗ್ರಾಫರ್(Junior Stenographer), ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಹಾಕಲು ಇವತ್ತೇ ಅಂದರೆ ಏಪ್ರಿಲ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ |
ಹುದ್ದೆ | ಜೂನಿಯರ್ ಸ್ಟೆನೋಗ್ರಾಫರ್, ಟೆಕ್ನಿಷಿಯನ್ |
ಒಟ್ಟು ಹುದ್ದೆ | 9 |
ವಿದ್ಯಾರ್ಹತೆ | ಪದವಿ, ಪಿಯುಸಿ, 10ನೇ ತರಗತಿ |
ವೇತನ | ಮಾಸಿಕ ₹ 29,200- 92,300 |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 30, 2023 (ಇಂದು) |
ವಿದ್ಯಾರ್ಹತೆ:
ಪ್ರದರ್ಶನ ಸಹಾಯಕ-ಎ- ಪದವಿ
ಜೂನಿಯರ್ ಸ್ಟೆನೋಗ್ರಾಫರ್- ಪಿಯುಸಿ
ಕಛೇರಿ ಸಹಾಯಕ - ಪಿಯುಸಿ
ತಂತ್ರಜ್ಞ-ಎ (ಎಲೆಕ್ಟ್ರಾನಿಕ್ಸ್) -10ನೇ ತರಗತಿ, ಐಟಿಐ
ತಂತ್ರಜ್ಞ-ಎ (ಎಲೆಕ್ಟ್ರಿಕಲ್)- 10ನೇ ತರಗತಿ, ಐಟಿಐ
ತಂತ್ರಜ್ಞ-ಎ (ಫಿಟ್ಟರ್) -10ನೇ ತರಗತಿ, ಐಟಿಐ
ತಂತ್ರಜ್ಞ-ಎ (ಕಾರ್ಪೆಂಟರ್)- 10ನೇ ತರಗತಿ, ಐಟಿಐ
ಇದನ್ನೂ ಓದಿ: Work From Home Jobs: ಕ್ಯಾಪ್ಜೆಮಿನಿ ಕಂಪನಿಯಲ್ಲಿ ವರ್ಕ್ ಫ್ರಂ ಹೋಂ ಅವಕಾಶ- ಆಸಕ್ತರು ಈಗಲೇ ಅಪ್ಲೈ ಮಾಡಿ
ವಯೋಮಿತಿ:
ಪ್ರದರ್ಶನ ಸಹಾಯಕ-ಎ- 18 ರಿಂದ 35 ವರ್ಷ
ಜೂನಿಯರ್ ಸ್ಟೆನೋಗ್ರಾಫರ್- 18 ರಿಂದ 25 ವರ್ಷ
ಕಛೇರಿ ಸಹಾಯಕ -18 ರಿಂದ 35 ವರ್ಷ
ತಂತ್ರಜ್ಞ-ಎ (ಎಲೆಕ್ಟ್ರಾನಿಕ್ಸ್) -18 ರಿಂದ 35 ವರ್ಷ
ತಂತ್ರಜ್ಞ-ಎ (ಎಲೆಕ್ಟ್ರಿಕಲ್)- 18 ರಿಂದ 35 ವರ್ಷ
ತಂತ್ರಜ್ಞ-ಎ (ಫಿಟ್ಟರ್) -18 ರಿಂದ 35 ವರ್ಷ
ತಂತ್ರಜ್ಞ-ಎ (ಕಾರ್ಪೆಂಟರ್)-18 ರಿಂದ 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಪ್ರದರ್ಶನ ಸಹಾಯಕ-ಎ- ಮಾಸಿಕ ₹ 29,200- 92,300
ಜೂನಿಯರ್ ಸ್ಟೆನೋಗ್ರಾಫರ್- ಮಾಸಿಕ ₹ 25,500-81,100
ಕಛೇರಿ ಸಹಾಯಕ - ಮಾಸಿಕ ₹ 19,900- 63,200
ತಂತ್ರಜ್ಞ-ಎ (ಎಲೆಕ್ಟ್ರಾನಿಕ್ಸ್) -ಮಾಸಿಕ ₹ 19,900- 63,200
ತಂತ್ರಜ್ಞ-ಎ (ಎಲೆಕ್ಟ್ರಿಕಲ್)- ಮಾಸಿಕ ₹ 19,900- 63,200
ತಂತ್ರಜ್ಞ-ಎ (ಫಿಟ್ಟರ್) - ಮಾಸಿಕ ₹ 19,900- 63,200
ತಂತ್ರಜ್ಞ-ಎ (ಕಾರ್ಪೆಂಟರ್)-ಮಾಸಿಕ ₹ 19,900- 63,200
ಅರ್ಜಿ ಶುಲ್ಕ:
SC/ST/ ಮಹಿಳಾ/ ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 750 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ
ಕಸ್ತೂರಬಾ ರಸ್ತೆ
ಬೆಂಗಳೂರು- 560001
ಇದನ್ನೂ ಓದಿ: SBI Recruitment 2023: ಸ್ಟೇಟ್ ಬ್ಯಾಂಕ್ ನೇಮಕಾತಿ- ಅರ್ಜಿ ಹಾಕಲು ಇವತ್ತೇ ಕೊನೆ ದಿನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ