Vijayanagara Zilla Panchayat Recruitment 2023: ವಿಜಯನಗರ ಜಿಲ್ಲಾ ಪಂಚಾಯತ್ (Vijayanagara Zilla Panchayat) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಕಮ್ಯುನಿಟಿ ಹೆಲ್ತ್ ಆಫೀಸರ್, ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಹಾಕಲು ಮಾರ್ಚ್ 1, 2023 ಅಂದರೆ ಇವತ್ತು ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಇಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ವಿಜಯನಗರ ಜಿಲ್ಲಾ ಪಂಚಾಯತ್ |
ಹುದ್ದೆ | ಕಮ್ಯುನಿಟಿ ಹೆಲ್ತ್ ಆಫೀಸರ್, ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್ |
ಒಟ್ಟು ಹುದ್ದೆ | 9 |
ವಿದ್ಯಾರ್ಹತೆ | 7th, 10th, ಪದವಿ |
ವೇತನ | ಮಾಸಿಕ ₹35,000 |
ಉದ್ಯೋಗದ ಸ್ಥಳ | ವಿಜಯನಗರ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 1, 2023 |
ವಿದ್ಯಾರ್ಹತೆ:
ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್- BAMS, ಎಂಎಸ್, ಎಂಡಿ
ಆಯುಷ್ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್- ಎಸ್ಎಸ್ಎಲ್ಸಿ, ಫಾರ್ಮಾಸ್ಯುಟಿಕಲ್ ಸೈನ್ಸ್ನಲ್ಲಿ ಡಿಪ್ಲೊಮಾ
ಮಲ್ಟಿ ಪರ್ಪಸ್ ವರ್ಕರ್- 10ನೇ ತರಗತಿ
ಮಸಾಜಿಸ್ಟ್ (ಪುರುಷ)- 7ನೇ ತರಗತಿ
ಗೈನಕಾಲಜಿ ಅಟೆಂಡರ್, ಅಲ್ಕಾಲೈನ್ ಅಟೆಂಡೆಂಟ್-10ನೇ ತರಗತಿ
ಕಮ್ಯುನಿಟಿ ಹೆಲ್ತ್ ಆಫೀಸರ್ (CHO)- BAMS, BUMS, BHMS, ಪದವಿ
ಇದನ್ನೂ ಓದಿ: SBI Recruitment: ಸ್ಟೇಟ್ ಬ್ಯಾಂಕ್ನಲ್ಲಿ ಕೆಲಸ ಖಾಲಿ ಇದೆ- 40 ಲಕ್ಷದವರೆಗೆ ಸಂಬಳ
ವೇತನ:
ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್- ಮಾಸಿಕ ₹35,000
ಆಯುಷ್ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್- ಮಾಸಿಕ ₹15,821
ಮಲ್ಟಿ ಪರ್ಪಸ್ ವರ್ಕರ್- ಮಾಸಿಕ ₹10,300
ಮಸಾಜಿಸ್ಟ್ (ಪುರುಷ)- ಮಾಸಿಕ ₹ 11,356
ಗೈನಕಾಲಜಿ ಅಟೆಂಡರ್- ಮಾಸಿಕ ₹11,356
ಅಲ್ಕಾಲೈನ್ ಅಟೆಂಡೆಂಟ್- ಮಾಸಿಕ ₹ 11,356
ಕಮ್ಯುನಿಟಿ ಹೆಲ್ತ್ ಆಫೀಸರ್ (CHO)- ಮಾಸಿಕ ₹ 40,000
ಅನುಭವ:
ಮಸಾಜಿಸ್ಟ್ (ಪುರುಷ), ಗೈನಕಾಲಜಿ ಅಟೆಂಡರ್, ಅಲ್ಕಾಲೈನ್ ಅಟೆಂಡೆಂಟ್- ಅಭ್ಯರ್ಥಿಗಳು ಆಯುಷ್ ಆಸ್ಪತ್ರೆ/ ಕ್ಲಿನಿಕ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ:
ನಿಯಮಾನುಸಾರ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: Faculty Jobs: ತಿಂಗಳಿಗೆ 50,000 ಸಂಬಳ- ಫ್ಯಾಕಲ್ಟಿ ಹುದ್ದೆಗೆ ಈಗಲೇ ಅರ್ಜಿ ಹಾಕಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಇಂದು ಸಂಜೆ 5 ಗಂಟೆಯೊಳಗೆ ಕಳುಹಿಸಬೇಕು.
ಜಿಲ್ಲಾ ಆಯುಷ್ ಕಚೇರಿ
ಕೊಠಡಿ ಸಂಖ್ಯೆ 6
ಹಳೆಯ ಜಿಲ್ಲಾಧಿಕಾರಿ ಕಚೇರಿ
ಅಮರಾವತಿ ಪ್ರವಾಸಿ ದೇವಸ್ಥಾನ (ಐ.ಎನ್)
ವಿಜಯನಗರ ಕಾಲೇಜು ರಸ್ತೆ
ವಿಜಯನಗರ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 1, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ