UHS Bagalkot Recruitment 2023: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ(University of Horticultural Sciences Bagalkot) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಪ್ರೋಗ್ರಾಮ್ ಅಸಿಸ್ಟೆಂಟ್, ಅಸಿಸ್ಟೆಂಟ್ ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ ಪಾಸಾದವರಿಗೂ ಇಲ್ಲಿ ಉದ್ಯೋಗಾವಕಾಶವಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ uhsbagalkot.edu.in ಗೆ ಭೇಟಿ ನೀಡಬಹುದು.
ಫೆಬ್ರವರಿ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಹಾಕಬೇಕು ಎಂದು ವಿಶ್ವವಿದ್ಯಾಲಯವು ನೋಟಿಫಿಕೇಶನ್ನಲ್ಲಿ ತಿಳಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೋಲಾರ, ಬಾಗಲಕೋಟೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ |
ಹುದ್ದೆ | ಪ್ರೋಗ್ರಾಮ್ ಅಸಿಸ್ಟೆಂಟ್, ಅಸಿಸ್ಟೆಂಟ್ ಮೆಡಿಕಲ್ ಆಫೀಸರ್ |
ಒಟ್ಟು ಹುದ್ದೆ | 9 |
ವೇತನ | ಮಾಸಿಕ ₹ 17,000-1,12,400 |
ವಿದ್ಯಾರ್ಹತೆ | 10ನೇ ತರಗತಿ, ಪದವಿ, ಎಂಬಿಬಿಎಸ್ |
ಅರ್ಜಿ ಸಲ್ಲಿಕೆ ಬಗೆ | ಆಫ್ಲೈನ್ |
ಅರ್ಜಿ ಸಲ್ಲಿಸಲು ಕೊನೆ ದಿನ | ಫೆಬ್ರವರಿ 4, 2023 |
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ಆಸಕ್ತರು ಅಪ್ಲೈ ಮಾಡಿ
ವಿದ್ಯಾರ್ಹತೆ:
ಅಸಿಸ್ಟೆಂಟ್ ಮೆಡಿಕಲ್ ಆಫೀಸರ್- BAMS, MBBS
ಪ್ರೋಗ್ರಾಮ್ ಅಸಿಸ್ಟೆಂಟ್- ಹಾರ್ಟಿಕಲ್ಚರ್/ ಅಗ್ರಿಕಲ್ಚರ್ನಲ್ಲಿ ಪದವಿ
ಡ್ರೈವರ್- 10ನೇ ತರಗತಿ
ಸಪೋರ್ಟಿಂಗ್ ಸ್ಟಾಫ್ ಗಾರ್ಡನರ್-10ನೇ ತರಗತಿ
ವಯೋಮಿತಿ:
ಅಸಿಸ್ಟೆಂಟ್ ಮೆಡಿಕಲ್ ಆಫೀಸರ್-18 ರಿಂದ 48 ವರ್ಷ
ಪ್ರೋಗ್ರಾಮ್ ಅಸಿಸ್ಟೆಂಟ್- 18 ರಿಂದ 35 ವರ್ಷ
ಡ್ರೈವರ್- 18 ರಿಂದ 35 ವರ್ಷ
ಸಪೋರ್ಟಿಂಗ್ ಸ್ಟಾಫ್ ಗಾರ್ಡನರ್-18 ರಿಂದ 35 ವರ್ಷ
ವಯೋಮಿತಿ ಸಡಿಲಿಕೆ:
ಪ್ರವರ್ಗ- 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು- 3 ವರ್ಷ
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ವೇತನ:
ಅಸಿಸ್ಟೆಂಟ್ ಮೆಡಿಕಲ್ ಆಫೀಸರ್- ತಿಂಗಳಿಗೆ ₹ 52,650-97,100
ಪ್ರೋಗ್ರಾಮ್ ಅಸಿಸ್ಟೆಂಟ್- ತಿಂಗಳಿಗೆ ₹ 35,400-1,12,400
ಡ್ರೈವರ್- ತಿಂಗಳಿಗೆ ₹ 21,400-42,000
ಸಪೋರ್ಟಿಂಗ್ ಸ್ಟಾಫ್ ಗಾರ್ಡನರ್-ತಿಂಗಳಿಗೆ ₹ 17,000-28,950
ಅರ್ಜಿ ಶುಲ್ಕ:
SC/ST/ ಪ್ರವರ್ಗ-1/ ಮಾಜಿ ಸೈನಿಕ/ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
ಪ್ರವರ್ಗ-2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ- 300 ರೂ.
ಸಾಮಾನ್ಯ ಅಭ್ಯರ್ಥಿಗಳಿಗೆ- 600 ರೂ.
ಪಾವತಿಸುವ ಬಗೆ-ಚಲನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಪ್ರಾಯೋಗಿಕ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 4, 2023
ಇದನ್ನೂ ಓದಿ: ITI, ಡಿಪ್ಲೊಮಾ ಪಾಸಾದವರಿಗೆ ಸಂಸ್ಕೃತಿ ಸಚಿವಾಲಯದಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ರಿಜಿಸ್ಟ್ರಾರ್
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ
ಉದ್ಯಾನಗಿರಿ
ಬಾಗಲಕೋಟೆ-587104
ಕರ್ನಾಟಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ