• Home
  • »
  • News
  • »
  • jobs
  • »
  • JOBS: ಮಂಗಳೂರು ಪೋರ್ಟ್​​ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಆಗಿದ್ರೆ ಅರ್ಜಿ ಹಾಕಿ, ಸಂಬಳ 1.40 ಲಕ್ಷ

JOBS: ಮಂಗಳೂರು ಪೋರ್ಟ್​​ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಆಗಿದ್ರೆ ಅರ್ಜಿ ಹಾಕಿ, ಸಂಬಳ 1.40 ಲಕ್ಷ

ನವಮಂಗಳೂರು ಪೋರ್ಟ್

ನವಮಂಗಳೂರು ಪೋರ್ಟ್

ನವ ಮಂಗಳೂರು ಬಂದರು ಟ್ರಸ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

  • Share this:

    NMPT Recruitment 2022: ನವ ಮಂಗಳೂರು ಬಂದರು ಟ್ರಸ್ಟ್(New Mangalore Port Trust )​ನಲ್ಲಿ 2 ಅಸಿಸ್ಟೆಂಟ್ ಸೆಕ್ರೆಟರಿ(Assistant Secretary) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರಿ(Mangalore)ನಲ್ಲಿ  ಉದ್ಯೋಗ ಹುಡುಕುತ್ತಿರುವ ಆಸಕ್ತರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಫ್​ಲೈನ್(Offline)​ನಲ್ಲಿ ಮಾತ್ರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನವ ಮಂಗಳೂರು ಬಂದರು ಟ್ರಸ್ಟ್​
    ಹುದ್ದೆಅಸಿಸ್ಟೆಂಟ್ ಸೆಕ್ರೆಟರಿ
    ಒಟ್ಟು ಹುದ್ದೆ2
    ವೇತನಮಾಸಿಕ ₹ 40,000-1,40,000
    ಉದ್ಯೋಗದ ಸ್ಥಳಮಂಗಳೂರು

    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:
    ನವ ಮಂಗಳೂರು ಬಂದರು ಟ್ರಸ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: BEL Recruitment 2022: ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​ನಲ್ಲಿ 260 ಹುದ್ದೆಗಳಿಗೆ ಅರ್ಜಿ ಆಹ್ವಾನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಸೆಕ್ರೆಟರಿ I/c
    ನವ ಮಂಗಳೂರು ಬಂದರು ಪ್ರಾಧಿಕಾರ
    ಪಣಂಬೂರು
    ಮಂಗಳೂರು-575010


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/12/2022

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು