Nijalingappa Sugar Institute Recruitment 2023: ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ(S. Nijalingappa Sugar Institute, Belagavi) ಅನೇಕ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಟೆಕ್ನಿಕಲ್ ಅಡ್ವೈಸರ್, ಶುಗರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಮಾರ್ಚ್ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಕೆಲಸ ಹುಡುಕುತ್ತಿರುವ ಬೆಳಗಾವಿಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್(Offline) ಮುಖಾಂತರ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ |
ಹುದ್ದೆ | ಟೆಕ್ನಿಕಲ್ ಅಡ್ವೈಸರ್, ಶುಗರ್ ಎಂಜಿನಿಯರ್ |
ಒಟ್ಟು ಹುದ್ದೆ | 6 |
ವಿದ್ಯಾರ್ಹತೆ | ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ |
ವೇತನ | ಮಾಸಿಕ ₹ 1,31,400-2,17,100 |
ಉದ್ಯೋಗದ ಸ್ಥಳ | ಬೆಳಗಾವಿ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 4, 2023 |
ವಿದ್ಯಾರ್ಹತೆ:
ಟೆಕ್ನಿಕಲ್ ಅಡ್ವೈಸರ್: ಶುಗರ್ ಟೆಕ್ನಾಲಜಿ- ಸೈನ್ಸ್/ ಎಂಜಿನಿಯರಿಂಗ್ನಲ್ಲಿ ಪದವಿ, ಎಂಸ್ಸಿ(ಶುಗರ್ ಟೆಕ್ನಾಲಜಿ)
ಶುಗರ್ ಟೆಕ್ನಾಲಜಿಸ್ಟ್- ಸೈನ್ಸ್/ ಎಂಜಿನಿಯರಿಂಗ್ನಲ್ಲಿ ಪದವಿ, ಪಿಜಿ ಡಿಪ್ಲೊಮಾ ಇನ್ ಶುಗರ್ ಟೆಕ್, ಎಂಸ್ಸಿ(ಶುಗರ್ ಟೆಕ್ನಾಲಜಿ)
ಟೆಕ್ನಿಕಲ್ ಅಡ್ವೈಸರ್: ಶುಗರ್ ಎಂಜಿನಿಯರಿಂಗ್ & ಕೋ-ಜನರೇಶನ್- ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಶುಗರ್ ಎಂಜಿನಿಯರ್- ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ನಲ್ಲಿ ಬಿಇ
ಟೆಕ್ನಿಕಲ್ ಅಡ್ವೈಸರ್: ಆಲ್ಕೋಹಾಲ್ ಟೆಕ್ನಾಲಜಿ- ಸೈನ್ಸ್/ ಎಂಜಿನಿಯರಿಂಗ್ನಲ್ಲಿ ಪದವಿ, ಎಂಎಸ್ಸಿ (ಆಲ್ಕೋಹಾಲ್ ಟೆಕ್ನಾಲಜಿ)
ಆಲ್ಕೋಹಾಲ್ ಟೆಕ್ನಾಲಜಿಸ್ಟ್- ಸೈನ್ಸ್ನಲ್ಲಿ ಡಿಗ್ರಿ, ಇಂಡಸ್ಟ್ರಿಯಲ್ ಫರ್ಮೆಂಟೇಶನ್ ಮತ್ತು ಆಲ್ಕೋಹಾಲ್ ತಂತ್ರಜ್ಞಾನದಲ್ಲಿ ಪಿಜಿ ಡಿಪ್ಲೊಮಾ, M.Sc (ಆಲ್ಕೋಹಾಲ್ ಟೆಕ್ನಾಲಜಿ/ಬಯೋ-ಕೆಮಿಸ್ಟ್ರಿ)
ಇದನ್ನೂ ಓದಿ: DHFWS ಹಾವೇರಿ: ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ
ವಯೋಮಿತಿ:
ಟೆಕ್ನಿಕಲ್ ಅಡ್ವೈಸರ್: ಶುಗರ್ ಟೆಕ್ನಾಲಜಿ- 55 ವರ್ಷ
ಶುಗರ್ ಟೆಕ್ನಾಲಜಿಸ್ಟ್- 40 ವರ್ಷ
ಟೆಕ್ನಿಕಲ್ ಅಡ್ವೈಸರ್: ಶುಗರ್ ಎಂಜಿನಿಯರಿಂಗ್ & ಕೋ-ಜನರೇಶನ್- 55 ವರ್ಷ
ಶುಗರ್ ಎಂಜಿನಿಯರ್- 40 ವರ್ಷ
ಟೆಕ್ನಿಕಲ್ ಅಡ್ವೈಸರ್: ಆಲ್ಕೋಹಾಲ್ ಟೆಕ್ನಾಲಜಿ- 55 ವರ್ಷ
ಆಲ್ಕೋಹಾಲ್ ಟೆಕ್ನಾಲಜಿಸ್ಟ್- 40 ವರ್ಷ
ವೇತನ:
ಟೆಕ್ನಿಕಲ್ ಅಡ್ವೈಸರ್: ಶುಗರ್ ಟೆಕ್ನಾಲಜಿ- ಮಾಸಿಕ ₹ 1,31,400-2,17,100
ಶುಗರ್ ಟೆಕ್ನಾಲಜಿಸ್ಟ್- ಮಾಸಿಕ ₹ 52,650-97,100
ಟೆಕ್ನಿಕಲ್ ಅಡ್ವೈಸರ್: ಶುಗರ್ ಎಂಜಿನಿಯರಿಂಗ್ & ಕೋ-ಜನರೇಶನ್- ಮಾಸಿಕ ₹ 1,31,400-2,17,100
ಶುಗರ್ ಎಂಜಿನಿಯರ್- ಮಾಸಿಕ ₹ 52,650-97,100
ಟೆಕ್ನಿಕಲ್ ಅಡ್ವೈಸರ್: ಆಲ್ಕೋಹಾಲ್ ಟೆಕ್ನಾಲಜಿ- ಮಾಸಿಕ ₹ 1,31,400-2,17,100
ಆಲ್ಕೋಹಾಲ್ ಟೆಕ್ನಾಲಜಿಸ್ಟ್- ಮಾಸಿಕ ₹ 52,650-97,100
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ
ಬೆಳಗಾವಿ
C.T.S ನಂ.4125/1B
ಗಣೇಶಪುರ ರಸ್ತೆ
ಲಕ್ಷ್ಮಿ ಟೆಕ್
ಬೆಳಗಾವಿ-590009
ಕರ್ನಾಟಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 4, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ