Mysore Paints Recruitment 2023: ಮೈಸೂರು ಪೇಯಿಂಟ್ಸ್ & ವಾರ್ನಿಷ್ ಲಿಮಿಟೆಡ್(Mysore Paints & Varnish Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಚುನಾವಣೆಗಳಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿಯನ್ನು ಉತ್ಪಾದಿಸುವ ಭಾರತದ ಏಕೈಕ ಕಂಪನಿಯಾಗಿದೆ. ಇಲ್ಲಿ 4 ಕಂಪನಿ ಸೆಕ್ರೆಟರಿ, ಸೂಪರ್ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಆಸಕ್ತರು ಆಫ್ಲೈನ್(Offline) ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಮೈಸೂರು ಪೇಯಿಂಟ್ಸ್ & ವಾರ್ನಿಷ್ ಲಿಮಿಟೆಡ್ |
ಹುದ್ದೆ | ಕಂಪನಿ ಸೆಕ್ರೆಟರಿ, ಸೂಪರ್ವೈಸರ್ |
ಒಟ್ಟು ಹುದ್ದೆ | 4 |
ವಿದ್ಯಾರ್ಹತೆ | ಡಿಪ್ಲೊಮಾ, ಎಂ.ಕಾಂ, ICWA |
ವೇತನ | ಮಾಸಿಕ ₹ 56,800-80,100 |
ಉದ್ಯೋಗದ ಸ್ಥಳ | ಮೈಸೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 13, 2023 |
ವಿದ್ಯಾರ್ಹತೆ:
ಕಂಪನಿ ಸೆಕ್ರೆಟರಿ- ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಇನ್ ಇಂಡಿಯಾ (ICSI)ದ ಅಸೋಸಿಯೇಟ್ ಸದಸ್ಯ ಆಗಿರಬೇಕು, ಎಲ್ಎಲ್ಬಿ, ಎಸಿಎ ಪೂರ್ಣಗೊಳಿಸಿರಬೇಕು.
ಅಕೌಂಟ್ಸ್ ಮ್ಯಾನೇಜರ್- ಎಂಬಿಎ (ಫೈನಾನ್ಸ್), ಎಂ.ಕಾಂ, ICWA
ಡೆಪ್ಯುಟಿ ಮ್ಯಾನೇಜರ್- ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ
ಸೂಪರ್ವೈಸರ್- ಬಿ.ಎಸ್ಸಿ (ಕೆಮಿಸ್ಟ್ರಿ), ಪೇಯಿಂಟ್ಸ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ
ಇದನ್ನೂ ಓದಿ: NIT Karnataka Recruitment 2023: ಫೀಲ್ಡ್ ಅಸಿಸ್ಟೆಂಟ್ & ಇತರೆ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ
ಅನುಭವ:
ಕಂಪನಿ ಸೆಕ್ರೆಟರಿ- 2 ರಿಂದ 3 ವರ್ಷ ಅನುಭವ
ಅಕೌಂಟ್ಸ್ ಮ್ಯಾನೇಜರ್- ಅಭ್ಯರ್ಥಿಗಳು ವ್ಯವಸ್ಥಾಪಕ ಸಾಮರ್ಥ್ಯದಲ್ಲಿ 03 ರಿಂದ 05 ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಅಕೌಂಟ್ಸ್, ಹಣಕಾಸು, ವೆಚ್ಚ, ಬಜೆಟ್ ಮತ್ತು ತೆರಿಗೆ ಸಂಬಂಧಿತ ವಿಷಯಗಳ ಫೈನಲೈಸ್ ಮಾಡುವ ಸಾಮರ್ಥ್ಯ ಇರಬೇಕು.
ಡೆಪ್ಯುಟಿ ಮ್ಯಾನೇಜರ್- 2 ರಿಂದ 3 ವರ್ಷ ಅನುಭವ
ಸೂಪರ್ವೈಸರ್- ಪೇಯಿಂಟ್ ಇಂಡಸ್ಟ್ರಿಯಲ್ಲಿ 3 ವರ್ಷ ಅನುಭವ
Mysore-Paints- ನೋಟಿಫಿಕೇಶನ್ & ಅರ್ಜಿ
ವಯೋಮಿತಿ:
ಮೈಸೂರು ಪೇಯಿಂಟ್ಸ್ & ವಾರ್ನಿಷ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 13, 2023 ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ 2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
PH/ವಿಧವಾ ಅಭ್ಯರ್ಥಿಗಳು- 10 ವರ್ಷ
ವೇತನ:
ಕಂಪನಿ ಸೆಕ್ರೆಟರಿ- ಮಾಸಿಕ ₹ 56,800-80,100
ಅಕೌಂಟ್ಸ್ ಮ್ಯಾನೇಜರ್- ಮಾಸಿಕ ₹ 42,000-72,500
ಡೆಪ್ಯುಟಿ ಮ್ಯಾನೇಜರ್- ಮಾಸಿಕ ₹26,400-55,350
ಸೂಪರ್ವೈಸರ್- ಮಾಸಿಕ ₹20,400-45,300
ಇದನ್ನೂ ಓದಿ: IDBI Bank Recruitment 2023: ಮ್ಯಾನೇಜರ್ ಹುದ್ದೆಗಳ ನೇಮಕಾತಿ- ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್
ನ್ಯೂ ಬನ್ನಿಮಂಟಪ ಲೇಔಟ್
ಮೈಸೂರು - 570015
ಕರ್ನಾಟಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 13, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ