• ಹೋಂ
 • »
 • ನ್ಯೂಸ್
 • »
 • Jobs
 • »
 • JOBS: ಮೈಸೂರು ಜಿಲ್ಲಾ ಕೋರ್ಟ್​ನಲ್ಲಿ 59 ಹುದ್ದೆಗಳಿಗೆ ಅರ್ಜಿ ಆಹ್ವಾನ- 10th, PU ಪಾಸಾಗಿದ್ರೆ 52 ಸಾವಿರ ಸಂಬಳ

JOBS: ಮೈಸೂರು ಜಿಲ್ಲಾ ಕೋರ್ಟ್​ನಲ್ಲಿ 59 ಹುದ್ದೆಗಳಿಗೆ ಅರ್ಜಿ ಆಹ್ವಾನ- 10th, PU ಪಾಸಾಗಿದ್ರೆ 52 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜುಲೈ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

 • News18 Kannada
 • 2-MIN READ
 • Last Updated :
 • Mysore, India
 • Share this:

Mysore District Court Recruitment 2023: ಮೈಸೂರು ಜಿಲ್ಲಾ ನ್ಯಾಯಾಲಯವು (Mysore District Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 59 ಪಿಯೋನ್, ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಯಾವ ಹುದ್ದೆ ಎಷ್ಟಿವೆ? ಇಲ್ಲಿ ನೋಡಿ.
ಪಿಯೋನ್- 45
ಟೈಪಿಸ್ಟ್​- 3
ಸ್ಟೆನೋಗ್ರಾಫರ್ ಗ್ರೇಡ್-III- 11


ವಿದ್ಯಾರ್ಹತೆ:
ಪಿಯೋನ್- 10ನೇ ತರಗತಿ
ಟೈಪಿಸ್ಟ್​- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್​​ನಲ್ಲಿ ಡಿಪ್ಲೊಮಾ
ಸ್ಟೆನೋಗ್ರಾಫರ್ ಗ್ರೇಡ್-III- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್​​ನಲ್ಲಿ ಡಿಪ್ಲೊಮಾ


 ವೇತನ:
ಪಿಯೋನ್- ಮಾಸಿಕ ₹ 17,000- 28,950
ಟೈಪಿಸ್ಟ್​- ಮಾಸಿಕ ₹ 21,400-42,000
ಸ್ಟೆನೋಗ್ರಾಫರ್ ಗ್ರೇಡ್-III- ಮಾಸಿಕ ₹ 27,650-52,650

ಸಂಸ್ಥೆಮೈಸೂರು ಜಿಲ್ಲಾ ನ್ಯಾಯಾಲಯ
ಹುದ್ದೆಪಿಯೋನ್, ಸ್ಟೆನೋಗ್ರಾಫರ್, ಟೈಪಿಸ್ಟ್
ಒಟ್ಟು ಹುದ್ದೆ59
ವಿದ್ಯಾರ್ಹತೆಪಿಯುಸಿ, ಡಿಪ್ಲೊಮಾ, 10ನೇ ತರಗತಿ
ವೇತನಮಾಸಿಕ ₹ 27,650-52,650
ಉದ್ಯೋಗದ ಸ್ಥಳಮೈಸೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜುಲೈ 4, 2023

ವಯೋಮಿತಿ:
ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 4, 2023 ಕ್ಕೆ ಕನಿಷ್ಠ 28 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
PH/ವಿಧವಾ ಅಭ್ಯರ್ಥಿಗಳು- 10 ವರ್ಷ


ಅರ್ಜಿ ಶುಲ್ಕ:
ಪಿಯೋನ್ ಪೋಸ್ಟ್​ಗಳಿಗೆ
SC/ST/ ಪ್ರವರ್ಗ-1 & PH ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 100 ರೂ.
ಸಾಮಾನ್ಯ ಅಭ್ಯರ್ಥಿಗಳು- 200 ರೂ.


ಇದನ್ನೂ ಓದಿ:ITBP Recruitment 2023: ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 1 ಲಕ್ಷಕ್ಕೂ ಹೆಚ್ಚು ಸಂಬಳ


ಟೈಪಿಸ್ಟ್ ಪೋಸ್ಟ್​ಗಳಿಗೆ
PH ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇಲ್ಲ
ಪ್ರವರ್ಗ 2ಬಿ ಅಭ್ಯರ್ಥಿಗಳಿಗೆ- 150 ರೂ.
ಸಾಮಾನ್ಯ ಅಭ್ಯರ್ಥಿಗಳಿಗೆ - 300 ರೂ.


ಸ್ಟೆನೋಗ್ರಾಫರ್ ಪೋಸ್ಟ್​ಗಳಿಗೆ
SC/ST/ ಪ್ರವರ್ಗ-1 & PH ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 150 ರೂ.
ಸಾಮಾನ್ಯ ಅಭ್ಯರ್ಥಿಗಳಿಗೆ - 300 ರೂ.
ಪಾವತಿಸುವ ಬಗೆ- ಆನ್​ಲೈನ್/ ಚಲನ್


ಇದನ್ನೂ ಓದಿ: NIA Recruitment 2023: ಡಿಗ್ರಿ ಪಾಸಾಗಿದ್ರೆ ಇಲ್ಲಿ ಅಪ್ಲೈ ಮಾಡಿ - ತಿಂಗಳಿಗೆ 92 ಸಾವಿರ ಸಂಬಳ


ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್​
ಟೈಪಿಂಗ್ ಟೆಸ್ಟ್
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/06/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 4, 2023
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 8, 2023

top videos
  First published: