MRPL Recruitment 2023: ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್(Mangalore Refinery and Petrochemicals Limited ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 96 ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಜನವರಿ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮಂಗಳೂರಿನಲ್ಲಿ(Mangalore) ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ |
ಹುದ್ದೆ | ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ |
ಒಟ್ಟು ಹುದ್ದೆ | 96 |
ವೇತನ | ಮಾಸಿಕ ₹50,000-1,60,000 |
ಉದ್ಯೋಗದ ಸ್ಥಳ | ಬೆಂಗಳೂರು |
ವಿದ್ಯಾರ್ಹತೆ:
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಫೈನಾನ್ಸ್/ಇಂಟರ್ನಲ್ ಆಡಿಟ್)- CA, ICAI, CMA, MBA, ಪದವಿ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್(ಸೆಕ್ರೆಟರಿಯಲ್)- ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯತ್ವ ಪಡೆದಿರಬೇಕು.
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ UGC (ಮಾರ್ಕೆಟಿಂಗ್)- ಪದವಿ, ಸ್ನಾತಕೋತ್ತರ ಪದವಿ, ಎಂಬಿಎ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್)-ಪದವಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಕೆಮಿಕಲ್)-ಬಿಎಸ್ಸಿ, ಕೆಮಿಕಲ್ ಇಂಜಿನಿಯರಿಂಗ್/ಕೆಮಿಕಲ್ ಟೆಕ್ನಾಲಜಿ/ಪೆಟ್ರೋಕೆಮಿಕಲ್ ಇಂಜಿನಿಯರಿಂಗ್/ಪೆಟ್ರೋಕೆಮಿಕಲ್ ಟೆಕ್ನಾಲಜಿಯಲ್ಲಿ ಬಿಇ/ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಮೆಕ್ಯಾನಿಕಲ್)- ಬಿಎಸ್ಸಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸಿವಿಲ್)-ಬಿಎಸ್ಸಿ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)-ಬಿಎಸ್ಸಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಇನ್ಸ್ಟ್ರುಮೆಂಟೇಶನ್)-ಬಿಎಸ್ಸಿ, ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್/ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ ಇಂಜಿನಿಯರಿಂಗ್/ ಇನ್ಸ್ಟ್ರುಮೆಂಟೇಶನ್ & ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್ & ಪ್ರೊಸೆಸ್ ಕಂಟ್ರೋಲ್/ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿಯಲ್ಲಿ ಬಿ.ಇ ಅಥವಾ ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಕಂಪ್ಯೂಟರ್ ಸೈನ್ಸ್)-ಬಿಎಸ್ಸಿ, ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಇಂಜಿನಿಯರಿಂಗ್/ಕಂಪ್ಯೂಟರ್ ಟೆಕ್ನಾಲಜಿ/ಮಾಹಿತಿ ವಿಜ್ಞಾನ/ಮಾಹಿತಿ ಎಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ/ಆರ್ಟಿಫಿಶಿಯಲ್ ಇಂಜಿನಿಯರಿಂಗ್/ಮಷಿನ್ ಲರ್ನಿಂಗ್/ಡೇಟಾ ಸೈನ್ಸ್/ಸೈಬರ್ ಸೆಕ್ಯುರಿಟಿ/ಇಂಟರ್ನೆಟ್-ಆಫ್-ಥಿಂಗ್ಸ್ನಲ್ಲಿ ಬಿ.ಇ ಅಥವಾ ಬಿ.ಟೆಕ್
ಅಸಿಸ್ಟೆಂಟ್ ಎಂಜಿನಿಯರ್ & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್(ಕೆಮಿಸ್ಟ್ರಿ)- ಕೆಮಿಸ್ಟ್ರಿಯಲ್ಲಿ ಎಂಎಸ್ಸಿ
ವಯೋಮಿತಿ:
ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು ಜನವರಿ 15, 2023ಕ್ಕೆ 27 ವರ್ಷ ಮೀರಿರಬಾರದು.
ಇದನ್ನೂ ಓದಿ: BHEL ಮಲ್ಲೇಶ್ವರಂನಲ್ಲಿ Part Time ಹುದ್ದೆ ಖಾಲಿ ಇದೆ- ವಾರ್ಷಿಕ ಪ್ಯಾಕೇಜ್ 6 ಲಕ್ಷ
ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು -3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD ಅಭ್ಯರ್ಥಿಗಳು- 10 ವರ್ಷ
ಅರ್ಜಿ ಶುಲ್ಕ:
SC/ST/PWD/ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/OBC/EWS ಅಭ್ಯರ್ಥಿಗಳು- 118 ರೂ.
ಪಾವತಿಸುವ ಬಗೆ-ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಗ್ರೂಪ್ ಡಿಸ್ಕಸನ್
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 15/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ