Mangalore University Recruitment 2023: ಮಂಗಳೂರು ವಿಶ್ವವಿದ್ಯಾಲಯ (Mangalore University) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಟೆಕ್ನಿಷಿಯನ್(Technician), ಕುಕ್(Cook) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಮಂಗಳೂರು ವಿಶ್ವವಿದ್ಯಾಲಯ |
ಹುದ್ದೆ | ಟೆಕ್ನಿಷಿಯನ್, ಕುಕ್ |
ಒಟ್ಟು ಹುದ್ದೆ | 4 |
ವಿದ್ಯಾರ್ಹತೆ | 10th, 12th, ಐಟಿಐ |
ವೇತನ | ಮಾಸಿಕ ₹ 27,650- 52,650 |
ಉದ್ಯೋಗದ ಸ್ಥಳ | ಮಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 10, 2023 |
ವಿದ್ಯಾರ್ಹತೆ:
ಟೆಕ್ನಿಷಿಯನ್ ಗ್ರೇಡ್ II- 12ನೇ ತರಗತಿ, ಐಟಿಐ
ಶಿಫ್ಟ್ ಮೆಕ್ಯಾನಿಕ್- 10ನೇ ತರಗತಿ
ಕುಕ್/ ಅಸಿಸ್ಟೆಂಟ್ ಕುಕ್- 10ನೇ ತರಗತಿ
ಇದನ್ನೂ ಓದಿ: Job Search: ಮಂಗಳೂರು ಯೂನಿವರ್ಸಿಟಿಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ತಿಂಗಳಿಗೆ 52,000 ಸಂಬಳ
ವಯೋಮಿತಿ:
ಮಂಗಳೂರು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಮಾಜಿ ಸೈನಿಕ, PH ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳು- 200 ರೂ.
ಪಾವತಿಸುವ ಬಗೆ- ಚಲನ್/ ಡಿಮ್ಯಾಂಡ್ ಡ್ರಾಫ್ಟ್
ವೇತನ:
ಟೆಕ್ನಿಷಿಯನ್ ಗ್ರೇಡ್ II- ಮಾಸಿಕ ₹ 27,650- 52,650
ಶಿಫ್ಟ್ ಮೆಕ್ಯಾನಿಕ್- ಮಾಸಿಕ ₹21,400-42,000
ಕುಕ್/ ಅಸಿಸ್ಟೆಂಟ್ ಕುಕ್- ಮಾಸಿಕ ₹ 18,600-32,600
ಇದನ್ನೂ ಓದಿ: Post Office Jobs: 8ನೇ ಕ್ಲಾಸ್ ಪಾಸಾಗಿದ್ರೆ ಪೋಸ್ಟ್ ಆಫೀಸ್ ಉದ್ಯೋಗ- ತಿಂಗಳಿಗೆ 63,000 ಸಂಬಳ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಮಂಗಳೂರು
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ರಿಜಿಸ್ಟ್ರಾರ್
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳ ಗಂಗೋತ್ರಿ-574199
ದಕ್ಷಿಣ ಕನ್ನಡ
ಕರ್ನಾಟಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 10, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ