KSRTC Recruitment 2023: ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಇಲ್ಲೊಂದು ಗುಡ್ನ್ಯೂಸ್ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯದ ವಿವಿಧ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಹೊರಡಿಸಲಾಗಿದೆ. ಒಟ್ಟು 2000 ಚಾಲಕರ ಹುದ್ದೆಗಳನ್ನು ಭರ್ತಿ ಮಾಡಲು ಕೆಎಸ್ಆರ್ಟಿಸಿ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಹೆಚ್ಚಿನ ಮಾಹಿತಿಗಾಗಿ ksrtc.inಗೆ ಭೇಟಿ ನೀಡಿ.
ಅರ್ಜಿ ಹಾಕಲು ಜನವರಿ 22 ಅಂದರೆ ಇವತ್ತೇ ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ |
ಹುದ್ದೆ | ಚಾಲಕ |
ಒಟ್ಟು ಹುದ್ದೆ | 2,000 |
ವಿದ್ಯಾರ್ಹತೆ | 10ನೇ ತರಗತಿ ಪಾಸ್ |
ವೇತನ | 10,000-20,000 |
ಉದ್ಯೋಗದ ಸ್ಥಳ | ಕರ್ನಾಟಕ |
ಇದನ್ನೂ ಓದಿ: JOBS: ಎಂಜಿನಿಯರಿಂಗ್ ಪಾಸಾದವರಿಗೆ ಲಕ್ಷಗಟ್ಟಲೇ ಸಂಬಳದ ಉದ್ಯೋಗ- ಈಗಲೇ Apply ಮಾಡಿ
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂಬುದನ್ನು ನಿಗದಿಪಡಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಡ್ರೈವಿಂಗ್ ಟೆಸ್ಟ್ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ:
ಡ್ರೈವಿಂಗ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 10,000-20,000 ವೇತನ ಕೊಡಲಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಭ್ಯರ್ಥಿಗಳು ತಡಮಾಡದೇ ಇವತ್ತೇ ಅರ್ಜಿ ಹಾಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ