• ಹೋಂ
  • »
  • ನ್ಯೂಸ್
  • »
  • Jobs
  • »
  • KSRTCಯಲ್ಲಿ ಖಾಲಿ ಇರುವ SDA, FDA ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ

KSRTCಯಲ್ಲಿ ಖಾಲಿ ಇರುವ SDA, FDA ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸಕ್ತರು ಆಫ್​ಲೈನ್​/ ಪೋಸ್ಟ್​ ಮುಖಾಂತರ ಅರ್ಜಿ ಹಾಕಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ(KSRTC) ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • Share this:

KSRTC Credit Co-Op Society Recruitment 2023: ಕೆಎಸ್​​ಆರ್​ಟಿಸಿ ನೌಕರರ ಕ್ರೆಡಿಟ್​ ಕೋ-ಆಪರೇಟಿವ್ ಸೊಸೈಟಿಯಲ್ಲಿ(KSRTC Credit Co-Operative Society) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 39 ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್(SDA), ಆಫೀಸ್ ಅಸಿಸ್ಟೆಂಟ್(Office Assistant) ಹುದ್ದೆಗಳನ್ನು ಭರ್ತಿ ಮಾಡಲು ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇಂದು ಅಂದರೆ ಫೆಬ್ರವರಿ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ ಪೋಸ್ಟ್​ ಮುಖಾಂತರ ಅರ್ಜಿ ಹಾಕಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ(KSRTC) ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೆಎಸ್​​ಆರ್​ಟಿಸಿ ನೌಕರರ ಕ್ರೆಡಿಟ್​ ಕೋ-ಆಪರೇಟಿವ್ ಸೊಸೈಟಿ
ಹುದ್ದೆಸೆಕೆಂಡ್ ಡಿವಿಶನ್ ಅಸಿಸ್ಟೆಂಟ್(SDA), ಆಫೀಸ್ ಅಸಿಸ್ಟೆಂಟ್
ಒಟ್ಟು ಹುದ್ದೆ39
ವಿದ್ಯಾರ್ಹತೆ10ನೇ ತರಗತಿ, ಪಿಯುಸಿ, ಪದವಿ
ವೇತನಮಾಸಿಕ ₹ 33,450- 62,600
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಇಂದು - ಫೆಬ್ರವರಿ 7, 2023

ಎಷ್ಟೆಷ್ಟು ಹುದ್ದೆಗಳಿವೆ?
ಸ್ಟಾಫ್​ ಸೂಪರ್​ವೈಸರ್- 2
ಅಕೌಂಟ್ಸ್​ ಸೂಪರ್​ವೈಸರ್- 1
ಫಸ್ಟ್​ ಡಿವಿಶನ್ ಅಸಿಸ್ಟೆಂಟ್(FDA)- 7
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- 18
ಆಫೀಸ್ ಅಸಿಸ್ಟೆಂಟ್- 11


ವಿದ್ಯಾರ್ಹತೆ:
ಸ್ಟಾಫ್​ ಸೂಪರ್​ವೈಸರ್- ಪದವಿ
ಅಕೌಂಟ್ಸ್​ ಸೂಪರ್​ವೈಸರ್- ಕಾಮರ್ಸ್​ ಪದವಿ
ಫಸ್ಟ್​ ಡಿವಿಶನ್ ಅಸಿಸ್ಟೆಂಟ್(FDA)- ಪದವಿ
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- ದ್ವಿತೀಯ ಪಿಯುಸಿ
ಆಫೀಸ್ ಅಸಿಸ್ಟೆಂಟ್- 10 ನೇ ತರಗತಿ


ಇದನ್ನೂ ಓದಿ: JOBS: ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ NAAC ಕಮಿಟಿ- ತಿಂಗಳಿಗೆ 2 ಲಕ್ಷ ಸಂಬಳ


ವಯೋಮಿತಿ:
ಕೆಎಸ್​ಆರ್​ಟಿಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 7, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ


ವೇತನ:
ಸ್ಟಾಫ್​ ಸೂಪರ್​ವೈಸರ್- ಮಾಸಿಕ ₹ 33,450- 62,600
ಅಕೌಂಟ್ಸ್​ ಸೂಪರ್​ವೈಸರ್- ಮಾಸಿಕ ₹ 33,450- 62,600
ಫಸ್ಟ್​ ಡಿವಿಶನ್ ಅಸಿಸ್ಟೆಂಟ್(FDA)- ಮಾಸಿಕ ₹ 27,650-52,650
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- ಮಾಸಿಕ ₹ 21,400-42,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹18,600-32,600


ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು- 500 ರೂ.
ಪಾವತಿಸುವ ಬಗೆ- ಆಫ್​ಲೈನ್​


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ



ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಚೀಫ್​ ಎಕ್ಸಿಕ್ಯೂಟಿವ್ ಆಫೀಸರ್
ಕೆಎಸ್​​ಆರ್​ಟಿಸಿ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
K.H.ರಸ್ತೆ
ಶಾಂತಿನಗರ
ಬೆಂಗಳೂರು- 560027


ಇದನ್ನೂ ಓದಿ: Job Alert: ಕರ್ನಾಟಕ ಹೈ ಕೋರ್ಟ್​ನಲ್ಲಿ ಕ್ಲರ್ಕ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 07, 2023 (ಇಂದು)

Published by:Latha CG
First published: